ಜಾಗತೀಕರಣದ ದಾಳಿಗೆ ಭಾರತ ಹಿಮ್ಮೆಟ್ಟದೇ ಮುನ್ನುಗುತ್ತಿದೆ, ಅದರಲ್ಲೂ ಬಹುರಾಷ್ಟ್ರೀಯ ಸಂಸ್ಥೆಗಳು ಭಾರತಕ್ಕೆ ಆಗಮಿಸಿದ ನಂತರ ಪ್ಲಾಸ್ಟಿಕ್ ಬಳಕೆ ಅತಿಯಾಯಿತು ಎನ್ನುತ್ತಿದ್ದಂತೆ ಪರಿಸರವಾದಿಗಳ ಕೂಗಿನಿಂದಾಗಿ ಪ್ಲಾಸ್ಟಿಕ್ ಬಳಕೆಯ ಕುರಿತಂತೆ ಕಡಿವಾಣ ಬೀಳುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ನೀರು, ಕಾಫಿ, ಚಹಾ ಕುಡಿಯಲು ಬಳಸುತ್ತಿದ್ದ ಪ್ಲಾಸ್ಟಿಕ್ ಕಪ್‌ಗಳ ಬದಲಾಗಿ ಪೇಪರ್ ಕಪ್ ಬಳಕೆ ಪ್ರಾರಂಭವಾಯಿತು. ಆದರೆ.... ನೀವು ಯಾವಾಗಲಾದರೂ ಯೋಚಿಸಿರುವಿರಾ, ನೀವು ನೀರು, ಕಾಫಿ, ಚಹಾ ಕುಡಿಯಲು ಬಳಸುವಂತ ಪೇಪರ್ ಕಪ್‌ಗಳು ಸಹ ಆರೋಗ್ಯಕ್ಕೆ ಹಾನಿಕಾರಕವೆಂಬ ಆಶ್ಚರ್ಯಕರ ವಿಚಾರ ಬಯಲಾಗಿದೆ. ಇಂತಹ ಚಿಕ್ಕ ಪುಟ್ಟ ವಿಚಾರಗಳು ನಮಗೆ ಹಾನಿಕಾರಕ ಎಂದು ತಿಳಿದಾಗ ಅಶ್ಚರ್ಯವಾಗುವುದು ಸಹಜ ವಿಚಾರವಾಗಿದೆ. ಹೌದು ನೀವು ಕುಡಿಯಲು ಪೇಪರ್ ಕಪ್‌ಗಳನ್ನು ಬಳಸುವ ಮುನ್ನ ಯೋಚಿಸಿ! ವರುಣ್ ಎಂಬ ಟೆಕ್ನೋಪಾರ್ಕ್‌ನಲ್ಲಿಯ ಐಟಿ ಉದ್ಯೋಗಿಯು ದಿನಂಪ್ರತಿ ರಾತ್ರಿ ಹೊಟ್ಟೆ ನೋವಿನಿಂದ ನರಳುತ್ತಿದ್ದ, ವೈದ್ಯಕೀಯ ಪ್ರಯೋಗಾಲಯ ಪರೀಕ್ಷೆಯಲ್ಲಿ ವರುಣ್‌ನ ಹೊಟ್ಟೆಯಲ್ಲಿ ವ್ಯಾಕ್ಸ್ (ಮೇಣ) ಶೇಖರಣೆಯಾಗಿರುವುದು ಕಂಡುಬಂದಿತು. ಇದರ ಮೂಲವನ್ನು ಹುಡುಕಿದಾಗ ವರುಣ್ ಕಾರ್ಯನಿರ್ವಹಿಸುತ್ತಿದ್ದ ಕಚೇರಿಯ ಪ್ಯಾಂಟ್ರಿಯಲ್ಲಿ ಬಳಸುತ್ತಿದ್ದ ಪೇಪರ್ ಕಪ್‌ಗಳಲ್ಲಿ ವ್ಯಾಕ್ಸ್ ಪತ್ತೆಯಾಗಿದ್ದು ನಿಜಕ್ಕೂ ಆಘಾತಕಾರಿ ವಿಷಯವಾಗಿತ್ತು. ಬಳಸಿ ಬಿಸಾಡಬಹುದಾದ ಪೇಪರ್ ಕಪ್‌ಗಳಲ್ಲಿ ಬಿಸಿಯಾದ ನೀರು ಅಥವಾ ಇನ್ನಾವುದೇ ದ್ರವ ಪದಾರ್ಥ ಬಸಿಯಬಾರದೆಂದು ಮೇಣವನ್ನು ಎರಡೂ ಭಾಗದಲ್ಲಿ ತೆಳುವಾಗಿ ಸವರಿರುತ್ತಾರೆ. ಬಿಸಿಯಾದ ದ್ರವವನ್ನು ಕಪ್‌ನೊಳಗೆ ಹಾಕುತ್ತಿದ್ದಂತೆ ಒಳಭಾಗದ ಮೇಣ ಕರಗಿ ಸೇವಿಸುವವರ ಹೊಟ್ಟೆ ಸೇರುವುದು ಸಹಜವೆನ್ನುತ್ತಾರೆ ವೈದ್ಯರು! ಇದರ ಪರಿಣಾಮವಾಗಿ ಹೊಟ್ಟೆಗೆ ಸಂಬಂಧಿತವಾದ ಹಲವು ಕಾಯಿಲೆಗಳಿಗೆ ಗುರಿಯಾಗ ಬೇಕಾದೀತು ಎಚ್ಚರ ಎಂದು ವೈದ್ಯ ಸಮೂಹ ಮುನ್ನೆಚ್ಚರಿಕೆ ನೀಡಿದೆ. ಪೇಪರ್ ಕಪ್ ಬದಲಾಗಿ ಗಾಜಿನ ಕಪ್ ಅಥವಾ ಗ್ಲಾಸ್ ಅನ್ನು ಬಳಸುವುದು ಶ್ರೇಷ್ಠವೆಂದು ಪ್ರಯೋಗಾಲಯದ ವರದಿಗಳು ಹೇಳಿವೆ. ಗಾಜಿನ ವಸ್ತುಗಳ ಒಳಗಿರುವ ಯಾವುದೇ ಪದಾರ್ಥಗಳ ಮೇಲೆ ಗಾಜು ಅತ್ಯಂತ ಕಡಿಮೆ ಪ್ರಮಾಣದ ಪರಿಣಾಮಗಳನ್ನು ಬೀರುತ್ತದೆ ಎನ್ನಲಾಗಿದೆ. ಆದ್ದರಿಂದ ಆಯ್ಕೆ ನಿಮ್ಮದು...!
No comments:
Post a Comment