Friday, January 6, 2012

ಅತಿಕೆಟ್ಟ ಪಾಸ್ ವರ್ಡ್ ಗೊತ್ತಾಯ್ತು!

ಬೆಂಗಳೂರು, ಸುಲಭವಾದ ಪಾಸ್ ವರ್ಡ್ ಬಳಸಿ ಹ್ಯಾಕರ್ ಗಳ ದಾಳಿಗೆ ಹಲವು ಇಂಟರ್ ನೆಟ್ ಬಳಕೆದಾರರು ತುತ್ತಾಗುವುದು ಸಾಮಾನ್ಯ ಸಂಗತಿ. ಸುಸೂತ್ರವಾದ ಪಾಸ್ ವರ್ಡ್ ಬಳಸಿದರೆ ಅದು ನೆನಪಿನಲ್ಲುಳಿಯುವುದು ಸುಲಭ ಎಂಬ ತರ್ಕಕ್ಕೆ ಜೋತುಬಿದ್ದ ಬಳಕೆದಾರರು ಅನಗತ್ಯವಾಗಿ ತೊಂದರೆ ಸಿಲುಕುವಂತಾಗಿದೆ ಎರಡು ಸ್ತರದ ಸುರಕ್ಷತಾ ಖಾತ್ರಿ ಹೊಂದಿರುವ ಗೂಗಲ್ ಕೂಡಾ ಅತಿಕ್ರಮಿಗಳ ದಾಳಿಗೆ ಆಗಾಗ ತುತ್ತಾಗುತ್ತಿರುತ್ತದೆ. ಇದಕ್ಕೆ ಬಳಕೆದಾರರ ಸಾಮಾನ್ಯ ಜ್ಞಾನದ ಕೊರತೆ ಕಾರಾಣ ಎನ್ನುತ್ತದೆ ಇಂಟರ್ನೆಟ್ ಸುರಕ್ಷತಾ ಸಂಸ್ಥೆ ಸ್ಪಾಶ್ ಡಾಟಾ.2011ರಲ್ಲಿ ಬಳಕೆಯಾಗಿರುವ ಅತಿಕೆಟ್ಟ ಪಾಸ್ ವರ್ಡ್ ಗಳನ್ನು ಪಟ್ಟಿರುವ ಸ್ಪಾಶ್ ಡಾಟಾ, ಹ್ಯಾಕರ್ ಗಳಿಂದ ಮುಕ್ತರಾಗಲು ಸ್ವಲ್ಪವಾದರೂ ಕ್ಲಿಷ್ಟವಾದ ಪಾಸ್ ವರ್ಡ್ ಬಳಸುವಂತೆ ಗ್ರಾಹಕರಿಗೆ ಹೇಳಿದೆ. 2011ರ 25 ಅತಿ ಕೆಟ್ಟ ಪಾಸ್ ವರ್ಡ್ ಗಳ ಪಟ್ಟಿ ಹೀಗಿದೆ. ಅಂದಹಾಗೆ ನೀವು ಬಳಸುತ್ತಿರುವ ಪಾಸ್ ವರ್ಡ್ ಕೆಳಗಡೆಯ ಪಟ್ಟಿಯಲ್ಲಿದೆಯಾ ? ಪರೀಕ್ಷಿಸಿಕೊಳ್ಳಿ.1. password 2. 123456 3. 12345678 4. qwerty 5. abc123 6. monkey 7. 1234567 8. letmein 9. trustno1 10. dragon 11. baseball 12. 111111 13. iloveyou 14. master 15. sunshine 16. ashley 17. bailey 18. passwOrd 19. shadow 20. 123123 21. 654321 22. superman 23. qazwsx 24. michael 25. football

No comments:

Post a Comment