Monday, November 12, 2012

ಸಂತೋಷವಾಗಿದ್ದರೆ ಈ 6 ಕಾಯಿಲೆ ಹತ್ತಿರ ಸುಳಿಯುವುದಿಲ್ಲ ಯಾವುದೇ ಸಮಸ್ಯೆಗಳಿಗೆ ಪರಿಹಾರ ಇದ್ದೇ ಇರುತ್ತದೆ.


ದುಃಖ ಅನ್ನುವುದು ಬರೀ ಮಾನಸಿಕವಾಗಿ ಮಾತ್ರವಲ್ಲ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಚಿಂತೆ ಚಿತೆಗ ದಾರಿ ಎಂದು ಹೇಳುವುದನ್ನು ನೀವು ಕೇಳಿರಬಹುದು. ಆದ್ದರಿಂದಲೇ ತುಂಬಾ ಚಿಂತೆ ಮಾಡಬೇಡಿ, ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ ಎಂದು ವೈದ್ಯರು ಹೇಳುತ್ತಾರೆ. ಪ್ರತಿದಿನ ನೀವೂ ಸಂತೋಷದಿಂದ ದಿನವನ್ನು ಕಳೆಯುವುದಾದರೆ ಕೆಲವೊಂದು ಕಾಯಿಲೆಗಳು ನಿಮ್ಮ ಹತ್ತಿರಕ್ಕೇ ಸುಳಿಯುವುದಿಲ್ಲ. ಇಷ್ಟೆಲ್ಲಾ ಒತ್ತಡಗಳ ನಡುವೆ ಸಂತೋಷದಿಂದ ಇರಲು ಹೇಗೆ ಸಾಧ್ಯ ಎಂದು ನೀವು ಕೇಳಬಹುದು? ಸಂತೋಷದಿಂದ ಇರಲು ಪ್ರಯತ್ನಿಸಿದರೆ ಸಂತೋಷದ ಬದುಕು ನಿಮ್ಮದಾಗುವುದು. ಸಂತೋಷದಿಂದ ಇದ್ದರೆ ಯಾವುದೆಲ್ಲಾ ಕಾಯಿಲೆಗಳಿಗೆ ಗುಡ್ ಬೈ ಹೇಳಬಹುದು ಎಂದು ನೋಡೋಣ ಬನ್ನಿ.

1. ಒತ್ತಡದ ಹಾರ್ಮೋನ್ ಗಳನ್ನು ಕಡಿಮೆ ಮಾಡುತ್ತದೆ: ಬೆಳಗ್ಗೆ ಎದ್ದು ನಗುವ ವ್ಯಾಯಾಮ ಮಾಡಿದರೆ ಒತ್ತಡದ ಹಾರ್ಮೋನ್ ಗಳು ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಅಲ್ಲದೆ ರೀತಿ ಮಾಡಿದರೆ ದಿನಪೂರ್ತಿ ಸಂತೋಷದಿಂದ ಇರಬಹುದು.

2. ತಲೆನೋವು ಕಡಿಮೆಯಾಗುತ್ತದೆ: ಕೆಲವರಿಗೆ ದಿನವೂ ತಲೆನೋವು ಕಾಣಿಸಿಕೊಳುತ್ತದೆ. ರೀತಿ ಒತ್ತಡದಿಂದಾಗಿ ಉಂಟಾಗುತ್ತದೆ. ಇಂತಹವರು ಒತ್ತಡವನ್ನು ಮರೆತು ಸಂತೋಷದಿಂದ ಇರಲು ಪ್ರಯತ್ನಿಸಿದರೆ ತಲೆನೋವು ಕಡಿಮೆಯಾಗುವುದು.

3. ಮೈಕೈ ನೋವು ಬರುವುದಿಲ್ಲ: ಸಂತೋಷದಿಂದ ಇರುವ ವ್ಯಕ್ತಿಗಳಿಗೆ ಮೈಕೈ ನೋವು ಕಾಣಿಸಿಕೊಳ್ಳುವುದಿಲ್ಲ. ಒತ್ತಡವಿದ್ದರೆ ಮೈಕೈ ನೋವು, ಸುಸ್ತು ಕಾಣಿಸಿಕೊಳ್ಳುವುದು.

4. ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಹೃದಯಾಘಾತ ಮಾನಸಿಕ ಒತ್ತಡದಿಂದಾಗಿ ಉಂಟಾಗುತ್ತದೆ. ಆದ್ದರಿಂದ ಚಿಂತೆ ಹಾಗೂ ಒತ್ತಡದಿಂದ ಮುಕ್ತರಾಗಿಲು ಪ್ರಯತ್ನಿಸಬೇಕು.

5. ತಲೆಸುತ್ತು ಬರುವುದಿಲ್ಲ: ಸ್ನಾಯುಗಳು ಬಿಗಿದುಕೊಂಡು ಕೆಲಸ ಮಾಡದಿದ್ದಾಗ ತಲೆನೋವು ಕಾಣಿಸಿಕೊಳ್ಳುತ್ತದೆ. ಸಂತೋಷದಿಂದ ಇದ್ದರೆ ಸ್ನಾಯುಗಳು ಸಡಿಲವಾಗುತ್ತದೆ ಮತ್ತೆ ತಲೆನೋವು ಕಾಣಿಸಿಕೊಳ್ಳುದಿಲ್ಲ.

6. ಆಯುಸ್ಸು ಹೆಚ್ಚು: ಸಂತೋಷವಾಗಿ ಇರುವವರು ಆರೋಗ್ಯವಂತರಾಗಿ ಇರುತ್ತಾರೆ. ಇದರಿಂದ ಆಯುಸ್ಸು ಕೂಡ ಹೆಚ್ಚುವುದು.

 

 

 

 

 

No comments:

Post a Comment