Friday, December 2, 2011

ನಾ ಕಂಡಂತೆ ಜೆಆರ್ ಡಿ ಟಾಟಾ : ಸುಧಾ ಮೂರ್ತಿ



ಇನ್ಫೋಸಿಸ್ ನಿಂದ ಆ.20ರಂದು ನಿವೃತ್ತರಾಗುತ್ತಿರುವ ಎನ್ಆರ್ ನಾರಾಯಣ ಮೂರ್ತಿ ಅವರ ಪತ್ನಿ ಮತ್ತು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆಯಾಗಿ, ಲೇಖಕಿಯಾಗಿ, ಸಮಾಜಸೇವಕಿಯಾಗಿ ಕನ್ನಡಿಗರ ಮನದಲ್ಲಿ ಟಾಟಾ ಕಂಪನಿಗೆ ಸುಧಾ ಬರೆದ ಪತ್ರ
ಅವರು ಟಾಟಾ ವಂಶಸ್ಥರಲ್ಲೇ ಯಾರಾದರೊಬ್ಬರು ಆಗಿರಬೇಕೆಂದು ಊಹೆ ಮಾಡಿದೆ. ಟಾಟಾ ಕಂಪೆನಿಗಳ ಸಮುಚ್ಚಯದ ಮುಖ್ಯಸ್ಥರು JRD ಟಾಟಾ ಎಂಬುದು ನನಗೆ ತಿಳಿದಿತ್ತು. ಅವರ ಭಾವಚಿತ್ರವನ್ನು ವಾರ್ತಾ ಪತ್ರಿಕೆಗಳಲ್ಲಿ ನೋಡಿದೆ. (ಸುಮಂತ್ ಮಾಳಗಾಂವಕರ್ ಎನ್ನುವವರು ಆಗ ಕಂಪನಿಯ ಅಧ್ಯಕ್ಷರಾಗಿದ್ದರು) ಹೀಗಾಗಿ ಪತ್ರವನ್ನು ಜೆಆರ್ ಡಿ ಟಾಟಾ ಅವರನ್ನುದ್ದೇಶಿಸಿ ಬರೆಯಲಾರಂಭಿಸಿದೆ. ಇಂದಿಗೂ ಸಹ ಆ ಪತ್ರದಲ್ಲಿ ಬರೆದದ್ದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿದೆ."ವಿಖ್ಯಾತ ಟಾಟಾರವರು ಯಾವಾಗಲೂ ಮುಂಚೂಣಿಯಲ್ಲಿ ಇರುವಂತವರು. ಭಾರತದಲ್ಲಿ ಮೂಲಭೂತ ಉದ್ದಿಮೆಗಳಾದ ಕಬ್ಬಿಣ ಮತ್ತು ಉಕ್ಕು, ರಾಸಾಯನಿಕ ವಸ್ತುಗಳು, ಉಡುಪು ಮತ್ತು ವಾಹನಗಳು- ಇಂತವುಗಳನ್ನು ಮೊಟ್ಟಮೊದಲು ಸ್ಥಾಪಿಸಿದವರೇ ಅವರು. 1900ರಿಂದ ಭಾರತದಲ್ಲಿ ಉನ್ನತ ಮಟ್ಟದ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದವರು. ಅಷ್ಟೇ ಅಲ್ಲ, ಭಾರತೀಯ ವಿಜ್ಞಾನ ಮಂದಿರವನ್ನು ಸ್ಥಾಪಿಸಿದ ಹೆಗ್ಗಳಿಕೆ ಟಾಟಾರವರಿಗೇ ಸಲ್ಲಬೇಕು. ಇಂತಹ ವಿದ್ಯಾ ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿರುವುದು ನನ್ನ ಪುಣ್ಯವೇ ಸರಿ! ಹೀಗಾಗಿ ಟೆಲ್ಕೋ ಅಂತಹ ಕಂಪೆನಿಯಲ್ಲಿ ಲಿಂಗ ಸಂಬಂಧೀ ತಾರತಮ್ಯ ನಡೆಸುತ್ತಿರುವುದು ನನಗೆ ಆಶ್ಚರ್ಯ ಹಾಗೂ ಕಳವಳಕ್ಕೆ ಕಾರಣವಾಗಿದೆ".ಆ ಕಾಗದವನ್ನು ಪೋಸ್ಟ್ ಮಾಡಿದ ನಂತರ, ಆ ವಿಷಯವನ್ನು ಮರೆತುಬಿಟ್ಟೆ. ಇದಾದ ಹತ್ತು ದಿನಗಳೊಳಗೆ ಟೆಲ್ಕೋ ಕಂಪನಿ ಪುಣೆ ಶಾಖೆಯಿಂದ ಅವರ ಖರ್ಚಿನಲ್ಲಿ ನನ್ನನ್ನು ಸಂದರ್ಶನಕ್ಕೆ ಆಹ್ವಾನಿಸಿದ ಟೆಲಿಗ್ರಾಂ ಬಂದಿತು. ಅದನ್ನು ನೋಡಿ ನನಗೆ ಆಶ್ಚರ್ಯವಾಯಿತು. ನನ್ನ ರೂಮ್ ಮೇಟ್, ಆ ಸದವಕಾಶವನ್ನು ಉಪಯೋಗಿಸಿಕೊಂಡು ಪುಣೆಗೆ ಸಂದರ್ಶನದ ನೆಪದಿಂದ ಉಚಿತವಾಗಿ ಹೋಗಿ, ಆಕೆಗೊಂದು ಪ್ರಸಿದ್ಧವಾದ ಪುಣೆ ಸೀರೆಯನ್ನು (ಕಡಿಮೆ ಬೆಲೆಯಲ್ಲಿ) ತಂದುಕೊಡಬೇಕೆಂದು ಸಲಹೆಯಿತ್ತಳು. ಯಾರು ಯಾರಿಗೆಲ್ಲ ಸೀರೆ ಬೇಕೋ, ಅವರೆಲ್ಲರಿಂದಲೂ ನಾನು ತಲಾ 300 ರೂಪಾಯಿಗಳನ್ನು ತೆಗೆದುಕೊಂಡೆ. ಅದನ್ನು ನೆನಪಿಸಿಕೊಂಡರೆ ನನಗೆ ಈಗ ನಗು ಬರುತ್ತದೆ. ಆದರೆ ಆಗ ಮುಫತ್ತಾಗಿ ಪುಣೆಗೆ ಹೋಗಿ ಬರುವ ಅವಕಾಶ ನನಗೆ ಸಾಕಾಗಿತ್ತು. ಅದು ಪುಣೆಗೆ ನನ್ನ ಮೊಟ್ಟಮೊದಲ ಭೇಟಿಯಾಗಿತ್ತು. ಮೊದಲ ನೋಟದಲ್ಲೇ ನಾನು ಆ ನಗರಕ್ಕೆ ಮಾರುಹೋಗಿದ್ದೆ.ಇವತ್ತಿನವರೆಗೂ ಪುಣೆ ನನಗೆ ತುಂಬಾ ಪ್ರೀತಿಪಾತ್ರವಾಗಿದೆ. ನಾನು ಹುಟ್ಟಿದ ಊರು ಹುಬ್ಬಳ್ಳಿಯಲ್ಲಿ ಎಷ್ಟು ಆರಾಮವಾಗಿರುತ್ತೇನೆಯೋ, ಪುಣೆಯಲ್ಲಿಯೂ ಅದೇ ಬಗೆಯ ಆನಂದವನ್ನು ನಾನು ಅನುಭವಿಸುತ್ತೇನೆ. ಆ ನಗರ ಎಷ್ಟೊಂದು ಬಗೆಯಲ್ಲಿ ನನ್ನ ಜೀವನವನ್ನು ಬದಲಾಯಿಸಿತು! ನಾನು ಸಂದರ್ಶನಕ್ಕೆ ಪಿಂಪ್ರಿ ಬಡಾವಣೆಯಲ್ಲಿದ್ದ ಟೆಲ್ಕೋ ಆಫೀಸಿಗೆ ಹೋದೆ. ನೆಲೆಸಿರುವ ಸುಧಾಮೂರ್ತಿಯನ್ನು ಅರಿಯದವರಿಲ್ಲ. ಅತ್ಯಂತ ಸರಳ ಜೀವನ ನಡೆಸುತ್ತಿರುವ ಸುಧಾ ಅವರ ಜೀವನವೇ ತೆರೆದ ಪುಸ್ತಕದಂತೆ. Lasting Legacies ಸ್ಮರಣಸಂಚಿಕೆಯಲ್ಲಿ ಸುಧಾ ಅವರೇ ಬರೆದ ಜೆಆರ್ ಡಿ ಟಾಟಾ ಅವರೊಂದಿಗೆ ಒಡನಾಡಿದ ಅನುಭವವದ ಭಾವಾನುವಾದವನ್ನು ಇಲ್ಲಿ ನೀಡಲಾಗಿದೆ. - ಸಂಪಾದಕ.ಆಗ ಬಹುಶಃ ಏಪ್ರಿಲ್ 1974 ಇರಬೇಕು. ಬೆಂಗಳೂರಿನ IISc ಆವರಣದಲ್ಲಿ ಹವಾಮಾನ ಬಿಸಿಯಾಗತೊಡಗಿದ್ದು, ಗುಲ್ ಮೋಹರ್ ಪುಷ್ಪಗಳು ಆಗ ತಾನೇ ಅರಳತೊಡಗಿದ್ದವು. ನನ್ನ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ನಾನೊಬ್ಬಳೇ ಹುಡುಗಿಯಾಗಿದ್ದೆ; ಹೀಗಾಗಿ ನಾನು ಮಹಿಳಾ ವಿದ್ಯಾರ್ಥಿನಿಲಯದಲ್ಲಿ ವಾಸವಾಗಿದ್ದೆ. ಅಲ್ಲಿದ್ದ ಬೇರೆ ಹುಡುಗಿಯರು ವಿಜ್ಞಾನದ ವಿವಿಧ ವಿಭಾಗಗಳಲ್ಲಿ ಸಂಶೋಧನೆಯನ್ನು ನಡೆಸುತ್ತಿದ್ದರು. ವಿದೇಶಕ್ಕೆ ತೆರಳಿ ಕಂಪ್ಯೂಟರ್ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆಯಬೇಕೆಂಬುದು ನನ್ನ ಮಹತ್ವಾಕಾಂಕ್ಷೆಯಾಗಿತ್ತು. ಅದೃಷ್ಟವಶಾತ್, ಅಮೆರಿಕಾದ ವಿಶ್ವವಿದ್ಯಾನಿಲಯಗಳು ನನಗೆ ವಿದ್ಯಾರ್ಥಿವೇತನವನ್ನು ನೀಡಿದ್ದವು. ಹೀಗಾಗಿ ನಾನು ಭಾರತದಲ್ಲಿ ಕೆಲಸ ಮಾಡುವ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.ಹೀಗೊಂದು ದಿನ, ಉಪನ್ಯಾಸ ಸಮುಚ್ಛಯದಿಂದ ವಿದ್ಯಾರ್ಥಿನಿಲಯಕ್ಕೆ ಹೋಗುವ ಮಾರ್ಗದಲ್ಲಿ ನೋಟೀಸ್ ಬೋರ್ಡಿನಲ್ಲಿದ್ದ ಒಂದು ಜಾಹೀರಾತನ್ನು ನೋಡಿದೆ. ಅದೊಂದು ಭಾರತದ ಪ್ರಖ್ಯಾತ ವಾಹನ ತಯಾರಿಕಾ ಸಂಸ್ಥೆ ಟೆಲ್ಕೋದ ಉದ್ಯೋಗೀ ಸಂಬಂಧ ಜಾಹೀರಾತಾಗಿತ್ತು. ಆ ಕಂಪನಿಯು ಬುದ್ಧಿವಂತ ತರುಣ ಎಂಜಿನಿಯರುಗಳು- ಯಾರಿಗೆ ಅತ್ಯುತ್ತಮ ಶೈಕ್ಷಣಿಕ ಅರ್ಹತೆಗಳಿವೆಯೋ, ಯಾರು ಕಷ್ಟಪಟ್ಟು ದುಡಿಯಬಲ್ಲರೋ, ಅಂಥವರನ್ನು ಆಹ್ವಾನಿಸುತ್ತಿತ್ತು.ಆ ಜಾಹೀರಾತಿನ ಕೊನೆಯಲ್ಲಿ, ಸಣ್ಣ ಅಕ್ಷರಗಳಲ್ಲಿ ಹೀಗೆ ಬರೆಯಲಾಗಿತ್ತು "ಮಹಿಳಾ ಅಭ್ಯರ್ಥಿಗಳು ಅರ್ಜಿ ಹಾಕಬೇಕಾಗಿಲ್ಲ". ಇದನ್ನು ನೋಡಿ ನಾನು ಕ್ರುದ್ಧಳಾದೆ. ನನ್ನ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನಾನು ಲಿಂಗ ಸಂಬಂಧಿ (ಸ್ತೀ-ಪುರುಷ) ತಾರತಮ್ಯವನ್ನು ಎದುರಿಸಬೇಕಾಯಿತು. ನಾನು ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯತ್ತಮವಾಗಿ ಸಾಧನೆ ಮಾಡಿದ್ದೆ. ನನ್ನ ತರಗತಿಯ ಬೇರೆ ಎಲ್ಲ ಹುಡುಗರಿಗಿಂತಲೂ ಉತ್ತಮವಾಗಿ ಮಾಡಿದ್ದೆ. ಆದರೆ ಆಗ ನನಗೆ ಗೊತ್ತಿರಲಿಲ್ಲ; ಜೀವನದಲ್ಲಿ ಯಶಸ್ವಿಯಾಗಲು ಶೈಕ್ಷಣಿಕ ಅತ್ಯುತ್ತಮ ಸಾಧನೆಯೊಂದೇ ಸಾಕಾಗುವುದಿಲ್ಲ ಅಂತ!ಆ ಜಾಹೀರಾತನ್ನು ಓದಿದ ನಂತರ ಕೋಪದಿಂದ ಕುದಿಯುತ್ತಾ ನನ್ನ ರೂಮಿಗೆ ಹೋದೆ. ಟೆಲ್ಕೋ ಕಂಪನಿಯ ಅತ್ಯಚ್ಛ ನಿರ್ವಾಹಕರಿಗೆ ಆ ಕಂಪೆನಿಯು ಎಂತಹ ಘೋರ ಅನ್ಯಾಯವನ್ನು ಎಸಗುತ್ತಿದೆ ಎಂಬುದನ್ನು ತಿಳಿಸಬೇಕೆಂದು ನಿರ್ಧರಿಸಿದೆ. ಅದರ ಬಗ್ಗೆ ಪತ್ರವನ್ನು ಬರೆಯಲು ಶುರು ಮಾಡಿದೆ. ಆದರೆ ಟೆಲ್ಕೋ ಕಂಪೆನಿಯನ್ನು ನಡೆಸುತ್ತಿರುವವರು ಯಾರು ಎಂಬುದು ನನಗೆ ಗೊತ್ತಿರಲಿಲ್ಲ.
< ಟಾಟಾ ಕಂಪನಿಗೆ ಸುಧಾ ಬರೆದ ಪತ್ರ>
ಅವರು ಟಾಟಾ ವಂಶಸ್ಥರಲ್ಲೇ ಯಾರಾದರೊಬ್ಬರು ಆಗಿರಬೇಕೆಂದು ಊಹೆ ಮಾಡಿದೆ. ಟಾಟಾ ಕಂಪೆನಿಗಳ ಸಮುಚ್ಚಯದ ಮುಖ್ಯಸ್ಥರು JRD ಟಾಟಾ ಎಂಬುದು ನನಗೆ ತಿಳಿದಿತ್ತು. ಅವರ ಭಾವಚಿತ್ರವನ್ನು ವಾರ್ತಾ ಪತ್ರಿಕೆಗಳಲ್ಲಿ ನೋಡಿದೆ. (ಸುಮಂತ್ ಮಾಳಗಾಂವಕರ್ ಎನ್ನುವವರು ಆಗ ಕಂಪನಿಯ ಅಧ್ಯಕ್ಷರಾಗಿದ್ದರು) ಹೀಗಾಗಿ ಪತ್ರವನ್ನು ಜೆಆರ್ ಡಿ ಟಾಟಾ ಅವರನ್ನುದ್ದೇಶಿಸಿ ಬರೆಯಲಾರಂಭಿಸಿದೆ. ಇಂದಿಗೂ ಸಹ ಆ ಪತ್ರದಲ್ಲಿ ಬರೆದದ್ದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿದೆ."ವಿಖ್ಯಾತ ಟಾಟಾರವರು ಯಾವಾಗಲೂ ಮುಂಚೂಣಿಯಲ್ಲಿ ಇರುವಂತವರು. ಭಾರತದಲ್ಲಿ ಮೂಲಭೂತ ಉದ್ದಿಮೆಗಳಾದ ಕಬ್ಬಿಣ ಮತ್ತು ಉಕ್ಕು, ರಾಸಾಯನಿಕ ವಸ್ತುಗಳು, ಉಡುಪು ಮತ್ತು ವಾಹನಗಳು- ಇಂತವುಗಳನ್ನು ಮೊಟ್ಟಮೊದಲು ಸ್ಥಾಪಿಸಿದವರೇ ಅವರು. 1900ರಿಂದ ಭಾರತದಲ್ಲಿ ಉನ್ನತ ಮಟ್ಟದ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದವರು. ಅಷ್ಟೇ ಅಲ್ಲ, ಭಾರತೀಯ ವಿಜ್ಞಾನ ಮಂದಿರವನ್ನು ಸ್ಥಾಪಿಸಿದ ಹೆಗ್ಗಳಿಕೆ ಟಾಟಾರವರಿಗೇ ಸಲ್ಲಬೇಕು. ಇಂತಹ ವಿದ್ಯಾ ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿರುವುದು ನನ್ನ ಪುಣ್ಯವೇ ಸರಿ! ಹೀಗಾಗಿ ಟೆಲ್ಕೋ ಅಂತಹ ಕಂಪೆನಿಯಲ್ಲಿ ಲಿಂಗ ಸಂಬಂಧೀ ತಾರತಮ್ಯ ನಡೆಸುತ್ತಿರುವುದು ನನಗೆ ಆಶ್ಚರ್ಯ ಹಾಗೂ ಕಳವಳಕ್ಕೆ ಕಾರಣವಾಗಿದೆ".ಆ ಕಾಗದವನ್ನು ಪೋಸ್ಟ್ ಮಾಡಿದ ನಂತರ, ಆ ವಿಷಯವನ್ನು ಮರೆತುಬಿಟ್ಟೆ. ಇದಾದ ಹತ್ತು ದಿನಗಳೊಳಗೆ ಟೆಲ್ಕೋ ಕಂಪನಿ ಪುಣೆ ಶಾಖೆಯಿಂದ ಅವರ ಖರ್ಚಿನಲ್ಲಿ ನನ್ನನ್ನು ಸಂದರ್ಶನಕ್ಕೆ ಆಹ್ವಾನಿಸಿದ ಟೆಲಿಗ್ರಾಂ ಬಂದಿತು. ಅದನ್ನು ನೋಡಿ ನನಗೆ ಆಶ್ಚರ್ಯವಾಯಿತು. ನನ್ನ ರೂಮ್ ಮೇಟ್, ಆ ಸದವಕಾಶವನ್ನು ಉಪಯೋಗಿಸಿಕೊಂಡು ಪುಣೆಗೆ ಸಂದರ್ಶನದ ನೆಪದಿಂದ ಉಚಿತವಾಗಿ ಹೋಗಿ, ಆಕೆಗೊಂದು ಪ್ರಸಿದ್ಧವಾದ ಪುಣೆ ಸೀರೆಯನ್ನು (ಕಡಿಮೆ ಬೆಲೆಯಲ್ಲಿ) ತಂದುಕೊಡಬೇಕೆಂದು ಸಲಹೆಯಿತ್ತಳು. ಯಾರು ಯಾರಿಗೆಲ್ಲ ಸೀರೆ ಬೇಕೋ, ಅವರೆಲ್ಲರಿಂದಲೂ ನಾನು ತಲಾ 300 ರೂಪಾಯಿಗಳನ್ನು ತೆಗೆದುಕೊಂಡೆ. ಅದನ್ನು ನೆನಪಿಸಿಕೊಂಡರೆ ನನಗೆ ಈಗ ನಗು ಬರುತ್ತದೆ. ಆದರೆ ಆಗ ಮುಫತ್ತಾಗಿ ಪುಣೆಗೆ ಹೋಗಿ ಬರುವ ಅವಕಾಶ ನನಗೆ ಸಾಕಾಗಿತ್ತು. ಅದು ಪುಣೆಗೆ ನನ್ನ ಮೊಟ್ಟಮೊದಲ ಭೇಟಿಯಾಗಿತ್ತು. ಮೊದಲ ನೋಟದಲ್ಲೇ ನಾನು ಆ ನಗರಕ್ಕೆ ಮಾರುಹೋಗಿದ್ದೆ.ಇವತ್ತಿನವರೆಗೂ ಪುಣೆ ನನಗೆ ತುಂಬಾ ಪ್ರೀತಿಪಾತ್ರವಾಗಿದೆ. ನಾನು ಹುಟ್ಟಿದ ಊರು ಹುಬ್ಬಳ್ಳಿಯಲ್ಲಿ ಎಷ್ಟು ಆರಾಮವಾಗಿರುತ್ತೇನೆಯೋ, ಪುಣೆಯಲ್ಲಿಯೂ ಅದೇ ಬಗೆಯ ಆನಂದವನ್ನು ನಾನು ಅನುಭವಿಸುತ್ತೇನೆ. ಆ ನಗರ ಎಷ್ಟೊಂದು ಬಗೆಯಲ್ಲಿ ನನ್ನ ಜೀವನವನ್ನು ಬದಲಾಯಿಸಿತು! ನಾನು ಸಂದರ್ಶನಕ್ಕೆ ಪಿಂಪ್ರಿ ಬಡಾವಣೆಯಲ್ಲಿದ್ದ ಟೆಲ್ಕೋ ಆಫೀಸಿಗೆ ಹೋದೆ.

<ಕೆಲಸ ಸಿಗುವುದಿಲ್ಲ ಎಂಬುದು ಖಾತ್ರಿಯಾಗಿತ್ತು.>.>>>.ಸಂದರ್ಶನ ಮಂಡಳಿಯಲ್ಲಿ ಆರು ಜನರಿದ್ದರು. ನನಗಾಗ ಅನ್ನಿಸಿತು ಅವರುಗಳು ಸಂದರ್ಶನವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುವವರಲ್ಲ ಎಂದು. "ಜೆ ಆರ್ ಡಿ ಗೆ ಪತ್ರ ಬರೆದ ಹುಡುಗಿಯೇ ಈಕೆ" ಎಂದು ಪಿಸುಗುಟ್ಟಿದ್ದು ಆ ರೂಮನ್ನು ಪ್ರವೇಶಿಸಿದ ಕೂಡಲೇ ನನಗೆ ಕೇಳಿಸಿತು. ಆ ಕೆಲಸ ನನಗೆ ಸಿಗುವುದಿಲ್ಲ ಎಂದು ನನಗಾಗ ಖಾತ್ರಿಯಾಯಿತು. ಆ ಅರಿವೇ ನನ್ನ ಮನಸ್ಸಿನಿಂದ ಸಂದರ್ಶನದ ಬಗ್ಗೆ ಇದ್ದ ಸಕಲ ಭಯಗಳನ್ನು ನಿವಾರಿಸಿತು. ಹೀಗಾಗಿ ನಾನು ಸಮಚಿತ್ತಳಾಗಿ ಸಂದರ್ಶನವನ್ನು ನಿಭಾಯಿಸಲು ಎದುರಿಸಲು ಸಾಧ್ಯವಾಯಿತು. ಆ ಸಂದರ್ಶನ ಮಂಡಳಿ ನನ್ನ ಬಗ್ಗೆ ಪೂರ್ವಾಗ್ರಹಪೀಡಿತವಾಗಿದೆ ಎಂದು ಭಾವಿಸಿ, ಸಂದರ್ಶನ ಆರಂಭವಾಗುವ ಮೊದಲೇ ನಾನು ಕೊಂಚ ಒರಟಾಗಿ ಹೇಳಿದೆ "ಇದೊಂದು ತಾಂತ್ರಿಕ ಸಂದರ್ಶನವೆಂದು ನಾನು ಆಶಿಸಿದ್ದೇನೆ". ಅವರುಗಳು ನನ್ನ ಒರಟು ನಿಲುವಿನಿಂದ ವಿಚಲಿತರಾದಂತೆ ಕಂಡುಬಂದರು. ನನಗೆ ಇಂದು, ನನ್ನ ಅಂದಿನ ವರ್ತನೆಯ ಬಗ್ಗೆ ನಾಚಿಕೆಯಾಗುತ್ತದೆ. ಮಂಡಳಿಯಲ್ಲಿದ್ದವರು ಆ ದಿನ ನನಗೆ ತಾಂತ್ರಿಕ ಪ್ರಶ್ನೆಗಳನ್ನೇ ಕೇಳಿದರು. ನಾನು ಎಲ್ಲಾ ಪ್ರಶ್ನೆಗಳಿಗೂ ಸರಿಯಾಗಿಯೇ ಉತ್ತರಿಸಿದೆ. ಮಂಡಳಿಯ ಒಬ್ಬ ಹಿರಿಯ ಪುರುಷರು ಪ್ರೀತಿಯಿಂದ ನನಗೆ ಹೇಳಿದರು "ಮಹಿಳಾ ಅಭ್ಯರ್ಥಿಗಳು ಅರ್ಜಿ ಹಾಕುವ ಅಗತ್ಯವಿಲ್ಲ" ಎಂದು ನಾವೇಕೆ ಜಾಹೀರಾತಿನಲ್ಲಿ ಬರೆದಿದ್ದೆವು ಎಂದು ನಿನಗೆ ಗೊತ್ತಿದೆಯೇ? ನಮ್ಮ ಕಾರ್ಖಾನೆಯ ಶಾಪ್ ಫ್ಲೋರ್ ನಲ್ಲಿ ನಾವು ಇದುವರೆಗೆ ಯಾವ ಮಹಿಳೆಯನ್ನೂ ಕೆಲಸಕ್ಕೆ ತೆಗೆದುಕೊಂಡಿಲ್ಲ. ಇದು ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಓದುವ ಕಾಲೇಜು ಅಲ್ಲ; ಕಾರ್ಖಾನೆ. ಶೈಕ್ಷಣಿಕ ಕ್ಷೇತ್ರದಲ್ಲಿ ನೀನು ಫಸ್ಟ್ rank ಎನ್ನುವುದು ನಮಗೆ ತಿಳಿದಿದೆ. ನಿನ್ನಂತವರು ಯಾವುದಾದರೂ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಬೇಕು!" ನಾನೊಬ್ಬಳು ಹುಬ್ಬಳ್ಳಿಯಂತಹ ಸಣ್ಣ ಪಟ್ಟಣದಿಂದ ಬಂದಂತಹ ತರುಣಿ. ನನ್ನ ಪ್ರಪಂಚ ತುಂಬಾ ಚಿಕ್ಕದು. ನನಗೆ ದೊಡ್ಡ ಕಂಪನಿಗಳ ವ್ಯವಹಾರ ಮತ್ತು ಕಷ್ಟ-ನಷ್ಟಗಳ ಬಗ್ಗೆ ತಿಳಿದಿರಲಿಲ್ಲ. ಹೀಗಾಗಿ ನಾನು ಹೇಳಿದೆ- "ನಾವೂ ಎಲ್ಲೋ ಒಂದು ಕಡೆ ಕೆಲಸ ಶುರುಮಾಡಬೇಕಲ್ಲ! ಇಲ್ಲದಿದ್ದರೆ ಯಾವ ಮಹಿಳೆಯೂ ನಿಮ್ಮ ಕಾರ್ಖಾನೆಯಲ್ಲಿ ಕೆಲಸ ಮಾಡುವುದು ಅಸಾಧ್ಯವಾಗುತ್ತದೆ." ದೀರ್ಘ ಸಂದರ್ಶನದ ನಂತರ, ಪರಮಾಶ್ಚರ್ಯವೆಂಬಂತೆ ನನಗೆ ಆ ಕೆಲಸ ದೊರಕಿತ್ತು! ಆ ಸಂದರ್ಶನ ಈ ರೀತಿ ನನ್ನ ಭವಿಷ್ಯವನ್ನು ಮೂಡಿಸುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಪುಣೆಯಲ್ಲಿ ನಾನು ಕೆಲಸ ಮಾಡುತ್ತೇನೆಂದು ಕನಸು-ಮನಸಿನಲ್ಲಿಯೂ ಎಣಿಸಿರಲಿಲ್ಲ. ತದನಂತರ ನಾನು ಕರ್ನಾಟಕದಿಂದ ಬಂದಿದ್ದ ಸಂಕೋಚ ಪ್ರವೃತ್ತಿಯ ಒಬ್ಬನ ಜೊತೆ ಸ್ನೇಹ ಬೆಳೆಸಿ, ನಂತರ ಮದುವೆಯಾದೆ
<ಟೆಲ್ಕೋ ಶಾಪ್ ಫ್ಲೋರಿನಲ್ಲಿ ಪ್ರಪ್ರಥಮ ಮಹಿಳೆ>
ಟೆಲ್ಕೋಗೆ ಸೇರಿಕೊಂಡ ನಂತರವೇ ನನಗೆ ತಿಳಿದಿದ್ದು ಜೆ ಆರ್ ಡಿ ಟಾಟಾ ಎಂತಹ ವ್ಯಕ್ತಿ ಎಂಬುದು. ಅವರೊಬ್ಬ ಭಾರತದ ಉದ್ದಿಮೆಯ ಅನಭಿಷಿಕ್ತ ದೊರೆ. ಆಗ ನನಗೆ ಹೆದರಿಕೆಯಾಗಲು ಶುರುವಾಯಿತು. ನನ್ನನ್ನು ಬಾಂಬೆಗೆ ವರ್ಗಮಾಡುವತನಕ, ನಾನು ಅವರನ್ನು ಭೇಟಿಯಾಗಲಿಲ್ಲ. ಹೀಗೊಂದು ದಿನ ನಾನು, SM ಎಂದೇ ಪರಿಚಿತರಾಗಿದ್ದ ಮಾಳಗಾಂವಕರ್ (ನಮ್ಮ ಕಂಪನಿಯ ಅಧ್ಯಕ್ಷರು) ಅವರನ್ನು ಭೇಟಿಯಾಗಿದ್ದೆ. ಯಾವುದೋ ಒಂದು ವರದಿಯನ್ನು ಅವರಿಗೆ ತೋರಿಸಬೇಕಾಗಿತ್ತು. ನಾನಾಗ ಟಾಟಾ ಕಂಪೆನಿಗಳ ಕೇಂದ್ರ ಕಛೇರಿಯಾದ 'ಬಾಂಬೆ ಹೌಸ್'ನ ಮೊದಲನೆಯ ಅಂತಸ್ತಿನಲ್ಲಿ SM ಅವರ ಕಚೇರಿಯಲ್ಲಿದ್ದೆ. ಆಗ ಧುತ್ತೆಂದು ಅಲ್ಲಿಗೆ ಜೆ ಆರ್ ಡಿ ಆಗಮಿಸಿದರು. ನಾನು 'ನಮ್ಮ ಜೆ ಆರ್ ಡಿ' ಅವರನ್ನು ನೋಡಿದ್ದು ಅದೇ ಮೊದಲ ಸಲ. ಬಾಂಬೆ ಹೌಸ್ ನ ಎಲ್ಲರೂ ಅವರನ್ನು ಪ್ರೀತಿಯಿಂದ 'ನಮ್ಮ ಜೆ ಆರ್ ಡಿ' ಎಂದೇ ಕರೆಯುತ್ತಿದ್ದರು. ಅವರಿಗೆ ನಾನು ಬರೆದ ಪತ್ರವನ್ನು ಜ್ಞಾಪಿಸಿಕೊಂಡು ನಾನಾಗ ಹೆದರಿಕೆಯಿಂದ ಕುಗ್ಗಿಹೋಗಿದ್ದೆ. ಆಗ SM, ಅವರನ್ನು ಉದ್ದೇಶಿಸಿ "ಜೇ, ಈಕೆ ಎಂಜಿನಿಯರ್. ಅಷ್ಟೇ ಅಲ್ಲ, ಸ್ನಾತಕೋತ್ತರ ಪದವಿ ಪಡೆದ ಎಂಜಿನಿಯರ್" ಎಂದು ಒಳ್ಳೆಯ ರೀತಿಯಿಂದ ಪರಿಚಯಿಸಿದರು. ಹಾಗೆಯೇ ಮುಂದುವರಿದು "ನಮ್ಮ ಟೆಲ್ಕೋ ಕಂಪೆನಿಯ ಶಾಪ್ ಫ್ಲೋರಿನಲ್ಲಿ ಕೆಲಸ ಮಾಡುತ್ತಿರುವ ಪ್ರಪ್ರಥಮ ಮಹಿಳೆ" ಎಂದರು. ಆಗ ಜೆ ಅರ್ ಡಿ ನನ್ನನ್ನು ನೋಡಿದರು. ಆಗ ನಾನು ಮನಸ್ಸಿನಲ್ಲಿಯೇ ದೇವರನ್ನು ಪ್ರಾರ್ಥಿಸುತ್ತಿದ್ದೆ- ದೇವರೇ, ಈ ಮಹಾನುಭಾವ ನನ್ನನ್ನು ಆ ಸಂದರ್ಶನದ ಬಗ್ಗೆಯಾಗಲೀ ಅಥವಾ ಅದಕ್ಕೆ ಕಾರಣವಾದ ಆ ಪತ್ರದ ಬಗ್ಗೆಯಾಗಲೀ ಏನನ್ನೂ ಕೇಳದಿರಲಿ. ಅದೃಷ್ಟವಶಾತ್ ಅವರು ನನ್ನನ್ನು ಅದರ ಬಗ್ಗೆ ಏನೂ ಕೇಳಲಿಲ್ಲ. ಬದಲಾಗಿ ಅವರು ಹೀಗೆಂದರು "ನಮ್ಮ ದೇಶದಲ್ಲಿ ಹುಡುಗಿಯರು ಎಂಜನಿಯರಿಂಗ್ ಓದುತ್ತಿರುವುದು ನಿಜಕ್ಕೂ ಸಂತಸದ ವಿಷಯ. ಅಂದ ಹಾಗೆ ನಿನ್ನ ಹೆಸರೇನು?" ಟೆಲ್ಕೋ ಸೇರಿಕೊಂಡಾಗ ನಾನು ಸುಧಾ ಕುಲಕರ್ಣಿಯಾಗಿದ್ದೆ. ಈಗ ನಾನು ಸುಧಾ ಮೂರ್ತಿ, ಎಂದು ಉತ್ತರಿಸಿದೆ. ಅವರು ನನ್ನನ್ನು ನೋಡಿ ಮುಗುಳ್ನಕ್ಕು, SM ಅವರ ಜೊತೆ ಚರ್ಚೆಯನ್ನು ಮುಂದುವರಿಸಿದರು. ಬದುಕಿದೆಯಾ ಬಡಜೀವವೇ ಎಂಬಂತೆ ನಾನು ಅಲ್ಲಿಂದ ಕಾಲುಕಿತ್ತು ಬಚಾವಾದೆ. ಇದಾದ ನಂತರ ನಾನು ಜೆ ಆರ್ ಡಿ ಅವರನ್ನು ಆಗಾಗ ಭೇಟಿಯಾಗುತ್ತಿದ್ದೆ. ಅವರೋ ಟಾಟಾ ಗುಂಪಿನ ಸಕಲ ಉದ್ದಿಮೆಗಳ ಅಧ್ಯಕ್ಷರು! ನಾನೋ, ಕೇವಲ ಒಬ್ಬ ಎಂಜಿನಿಯರ್. ನಮ್ಮಿಬ್ಬರ ಮಧ್ಯೆ ಸಮಾನವಾದ ಅಂಶಗಳು ಯಾವುದೂ ಇರಲಿಲ್ಲ. ಆದರೂ ನನಗೆ ಅವರ ಬಗ್ಗೆ ಹಿಮಾಲಯದಷ್ಟು ಗೌರವ ಮತ್ತು ಆಶ್ಚರ್ಯ. ಹೀಗೊಂದು ದಿನ ಆಫೀಸಿನ ಕಾರಿಡಾರ್ ನಲ್ಲಿ ನಾನು ನನ್ನ ಪತಿ ಮೂರ್ತಿಗಾಗಿ ಕಾಯುತ್ತಿದ್ದೆ. ಆಗ ಅಲ್ಲಿಗೆ ಬಂದ ಜೆ ಆರ್ ಡಿ, ಆಶ್ಚರ್ಯವೋ ಎಂಬಂತೆ ನನ್ನ ಬಳಿ ಬಂದರು. ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ನನಗೆ ತಿಳಿಯಲಿಲ್ಲ. ನಾನು ಬರೆದ ಆ ಪತ್ರ ಜ್ಞಾಪಕಕ್ಕೆ ಬಂದು ನನ್ನನ್ನು ನಿತ್ರಾಣಗೊಳಿಸಿತು. ಆದರೆ ಜೆ ಆರ್ ಡಿ ಅದನ್ನು ಮರೆತಿದ್ದರು. ಅದು ಅವರಿಗೆ ಒಂದು ಸಣ್ಣ ಘಟನೆಯಾಗಿರಬಹುದು; ಆದರೆ ನನಗೆ ಮಹತ್ವದ ಘಟನೆಯಾಗಿತ್ತು.
<<<ಸಾಮಾನ್ಯಳಿಗೋಸ್ಕರ ಕಾದು ನಿಂತ ಅಸಾಮಾನ್ಯ>>>>>>>>>>>ನೀನು ಇಲ್ಲಿ ಏನು ಮಾಡುತ್ತಿದ್ದೀಯಾ? ಎಂದು ಅವರು ಕೇಳಿದರು. ನಾನು "ಸರ್, ಆಫೀಸಿನ ಕೆಲಸ ಮುಗಿಯಿತು. ನಮ್ಮ ಯಜಮಾನರು ಬಂದು ನನ್ನನ್ನು ಕರೆದುಕೊಂಡು ಹೋಗುತ್ತಾರೆ. ಅವರಿಗಾಗಿ ಕಾಯುತ್ತಿದ್ದೇನೆ" ಎಂದೆ. ಜೆ ಆರ್ ಡಿ ಹೇಳಿದರು "ಈಗಾಗಲೇ ಕತ್ತಲೆಯಾಗುತ್ತಿದೆ. ಈ ಕಾರಿಡಾರ್ ನಲ್ಲಿ ಯಾರೂ ಇಲ್ಲ. ನಿನ್ನ ಪತಿ ಬರುವ ತನಕ ನಾನು ಇಲ್ಲಿಯೇ ನಿನ್ನ ಜೊತೆ ಇರುತ್ತೇನೆ". ಮೂರ್ತಿಯನ್ನು ಕಾಯುವುದು ನನಗೆ ಅಭ್ಯಾಸವಾಗಿ ಹೋಗಿತ್ತು. ಆದರೆ ಜೆ ಆರ್ ಡಿಯವರು ನನ್ನ ಜೊತೆ ಕಾಯುತ್ತಿದ್ದುದು ತುಂಬಾ ಮುಜುಗರವಾಗುತಿತ್ತು. ನಾನು ಆತಂಕಪೀಡಿತಳಾಗಿದ್ದೆ. ನನ್ನ ಕಣ್ಣಿನ ತುದಿಯಿಂದ ಅವರನ್ನು ನೋಡಿದೆ. ಅವರು ಸಾದಾ ಬಿಳಿ ಅಂಗಿ ಮತ್ತು ಪ್ಯಾಂಟನ್ನು ಧರಿಸಿದ್ದರು. ಅವರಿಗೆ ವಯಸ್ಸಾಗಿತ್ತು, ಆದರೂ ಅವರ ಮುಖ ವರ್ಚಸ್ಸಿನಿಂದ ಹೊಳೆಯುತ್ತಿತ್ತು. ಅವರೇನೂ ಗರ್ವದಿಂದ ಬೀಗುತ್ತಿರಲಿಲ್ಲ. ನಾನು ಯೋಚಿಸುತ್ತಿದ್ದೆ, ಈ ಮನುಷ್ಯ ನಿಜವಾಗಿಯೂ ಅಸಾಮಾನ್ಯ! ಇವರು ದೊಡ್ಡ ಕಂಪೆನಿಗಳ ಸಮುಚ್ಚಯದ ಮುಖ್ಯಸ್ಥರು, ಇಡೀ ದೇಶವೇ ಗೌರವಿಸುವಂತಹ ವ್ಯಕ್ತಿತ್ವ ಉಳ್ಳವರು. ಈಗ ಒಬ್ಬ ಸಾಮಾನ್ಯ ನೌಕರಳಿಗೋಸ್ಕರ ಕಾಯುತ್ತಾ ನಿಂತಿದ್ದಾರೆ!ಆಗ ಮೂರ್ತಿ ಹೊರಗಡೆ ಬಂದರು. ನಾನೂ ಹೋಗಲು ತೊಡಗಿದೆ. ಆಗ ಜೆ ಆರ್ ಡಿ ಹೇಳಿದರು "ಇನ್ನು ಮುಂದೆ ಹೆಂಡತಿಯನ್ನು ಕಾಯಿಸಬಾರದಾಗಿ ನಿನ್ನ ಗಂಡನಿಗೆ ಹೇಳು". ನಾನು 1982ರಲ್ಲಿ ಟೆಲ್ಕೋಗೆ ರಾಜೀನಾಮೆ ಕೊಟ್ಟು ಹೊರಬರಬೇಕಾಯಿತು. ನನಗೆ ಆ ಕಂಪನಿಯನ್ನು ಬಿಡಲು ಕಿಂಚಿತ್ತೂ ಇಷ್ಟವಿರಲಿಲ್ಲ. ಆದರೆ ನನಗೆ ಬೇರೆ ದಾರಿಯಿರಲಿಲ್ಲ. ನಾನು ನನ್ನ ವಸ್ತುಗಳನ್ನೆಲ್ಲಾ ತೆಗೆದುಕೊಂಡು ಬಾಂಬೆ ಹೌಸ್ ನ ಮೆಟ್ಟಿಲಿಳಿದು ಹೊರಬರುತ್ತಿದ್ದಾಗ ಜೆ ಆರ್ ಡಿ ಯವರು ಕಾಣಿಸಿಕೊಂಡರು. ಅವರು ಯಾವುದೋ ಆಲೋಚನೆಯಲ್ಲಿ ಮುಳುಗಿದಂತೆ ಕಂಡರು. ವಿದಾಯ ಹೇಳಲು ನಿಂತುಕೊಂಡೆ. ನನ್ನನ್ನು ನೋಡಿ ಅವರೂ ನಿಂತರು. ಮೆಲ್ಲಗೆ ಹೇಳಿದರು "ಶ್ರೀಮತಿ ಕುಲಕರ್ಣಿಯವರೇ, ನೀವೇನು ಮಾಡುತ್ತಿರುವಿರಿ?" (ಅವರು ಹಾಗೆಯೇ ನನ್ನನ್ನು ಸಂಬೋಧಿಸುತ್ತಿದ್ದರು) ಸಾರ್, ನಾನು ಟೆಲ್ಕೋ ಬಿಡುತ್ತಿದ್ದೇನೆ ಎಂದೆ. "ನೀವೆಲ್ಲಿಗೆ ಹೋಗುತ್ತಿರುವಿರಿ?" ಎಂದು ಕೇಳಿದರು. ಪುಣೆಗೆ ಸರ್. ನಮ್ಮ ಯಜಮಾನರು ಇನ್ಫೋಸಿಸ್ ಎಂಬ ಕಂಪನಿಯನ್ನು ಶುರು ಮಾಡಿದ್ದಾರೆ. ಹೀಗಾಗಿ ನಾವು ಪುಣೆಗೆ ಹೋಗುತ್ತಿದ್ದೇವೆ. "ಓಹ್, ಹೌದಾ? ನೀವು ಯಶಸ್ಸು ಗಳಿಸಿದ ನಂತರ ಏನು ಮಾಡುವಿರಿ?" ನಾನು ಹೇಳಿದೆ- ಸರ್, ನಮಗೆ ಯಶಸ್ಸು ದೊರಕುವುದೋ ಇಲ್ಲವೋ ನನಗೆ ತಿಳಿದಿಲ್ಲ""ಅಪನಂಬಿಕೆ ಬೇಡ. ಸದಾ ಆತ್ಮವಿಶ್ವಾಸದಿಂದ ಕೆಲಸವನ್ನು ಆರಂಭಿಸಿರಿ. ಯಶಸ್ಸು ಖಂಡಿತ ಸಿಗುತ್ತದೆ. ಯಶಸ್ಸು ಲಭ್ಯವಾದ ಮೇಲೆ ನಾವು ಸಮಾಜದ ಋಣವನ್ನು ತೀರಿಸಬೇಕು. ಸಮಾಜ ನಮಗೆ ಎಷ್ಟೊಂದು ಕೊಡುತ್ತದೆ; ನಾವದನ್ನು ಮರೆಯದೇ ಹಿಂತಿರುಗಿಸಬೇಕು. ನಿಮಗೆಲ್ಲಾ ಒಳ್ಳೆಯದಾಗಲಿ". ಹೀಗೆ ಹೇಳುತ್ತಾ ಜೆ ಆರ್ ಡಿ ಮೆಟ್ಟಿಲೇರತೊಡಗಿದರು. ನಾನು ಅಲ್ಲಿಯೇ ನಿಂತಿದ್ದೆ. ಹಾಗೇ ಎಷ್ಟು ಹೊತ್ತು ನಿಂತಿದ್ದೆನೋ ನನಗೆ ತಿಳಿಯದು. ಅವರನ್ನು ನಾನು ನೋಡಿದುದು ಅದೇ ಕೊನೆಯ ಸಲ.










No comments:

Post a Comment