ನಾಯಿಗಳು ಕೇವಲ ಮುದ್ದಾಗಿ ಮಾತ್ರ ಇರುವುದಿಲ್ಲ, ಕೆಲವೊಂದು ನಾಯಿಗಳು ಅಷ್ಟೇ ಅಪಯಕಾರಿಯಾಗಿರುತ್ತವೆ. ಸೂಕ್ತವಾದ ತರಬೇತಿ ನೀಡದಿದ್ದರೆ ನಾಯಿ ನಿಮ್ಮ ಪ್ರಾಣಕ್ಕೂ ಕೂಡ ಎರವಾಗಬಹುದು. ಅಂತಹ ಐದು ಅತಿ ಅಪಾಯಕಾರಿ ನಾಯಿ ಯಾವುದೆಂದು ಇಲ್ಲಿ ತಿಳಿದು ನಂತರ ನಾಯಿ ಖರೀದಿಸಿ.* ಪಿಟ್ ಬುಲ್: ನಾಯಿಗಳಲ್ಲಿ ಅತಿ ಅಪಾಯಕಾರಿ ನಾಯೆಂದರೆ ಪಿಟ್ ಬುಲ್. ಅತ್ಯಂತ ಭಯಂಕರ ನಾಯಿಗಳೆನಿಸಿರುವ ಬುಲ್ ಡಾಗ್ ಮತ್ತು ಬೇಟೆ ನಾಯಿಯ ತಳಿಯಿಂದ ಹುಟ್ಟಿರುವ ಈ ಪಿಟ್ ಬುಲ್ ನಾಯಿಯನ್ನು ಮೃದುವಾಗಿರಬೇಕೆಂದು ಬಯಸಿದರೆ ಹೇಗೆ ಸಾಧ್ಯ? ವಂಶವಾಹಿಯಿಂದಲೇ ಕ್ರೂರತ್ವ ತಂದಿರುವ ಈ ಪಿಟ್ ಬುಲ್ ನಾಯಿ ಸಾಕುವ ಮುನ್ನ ಒಮ್ಮೆ ಯೋಚಿಸಿ. * ರಾಟ್ ವೀಲರ್: ಈ ರಾಟ್ ವೀಲರ್ ನಾಯಿ ಅಪಾಯಕಾರಿ ನಾಯಿ ಎನಿಸಿದ್ದರೂ ಸಹ ತನ್ನ ಯಜಮಾನನಿಗೆ ಅತಿ ವಿನಮ್ರನಾಗಿರುವ ವಿಶೇಷ ಗುಣ ಹೊಂದಿದೆ. ಆದರೆ ಸರಿಯಾದ ತರಬೇತಿ ನೀಡದ ಪಕ್ಷದಲ್ಲಿ ಅಪಾಯ ತಪ್ಪಿದ್ದಲ್ಲ.* ಜರ್ಮನ್ ಶೆಫರ್ಡ್: ನೋಡಿದ ತಕ್ಷಣವೇ ಭಯ ಉಂಟುಮಾಡುವ ಭಯಂಕರ ನಾಯಿ ಜರ್ಮನ್ ಶೆಫರ್ಡ್ ಎಂದರೆ ತಪ್ಪಾಗಲ್ಲ. ಪೊಲೀಸರು ಮತ್ತು ಮಿಲ್ಟ್ರಿಯವರು ಇದನ್ನು ಹೆಚ್ಚು ಉಪಯೋಗಿಸಿಕೊಳ್ಳುತ್ತಾರೆ. ಅತಿ ಬುದ್ಧಿವಂತ ನಾಯಿಯಾಗಿರುವ ಜರ್ಮನ್ ಶೆಫರ್ಡ್ ಗೆ ಹೆಚ್ಚು ಬೇಡಿಕೆಯೂ ಇದೆ. * ಹಸ್ಕಿ: ಸೈಬೇರಿಯನ್ ಸ್ನೋ ಡಾಗ್ ಎನ್ನಲಾಗುವ ಹಸ್ಕಿ ತುಂಬಾ ಶಕ್ತಿಶಾಲಿ. ಆಕ್ರಮಣ ಮಾಡಲು ಕಾಯುತ್ತಿರುವಂತೆ ಕಾಣುವ ಈ ನಾಯಿಯನ್ನು ನುರಿತವರು ಮಾತ್ರ ಸಾಕುತ್ತಾರೆ. ಆದ್ದರಿಂದ ಅಪಾಯಕಾರಿ ನಾಯಿಗಳ ಪಟ್ಟಿಯಲ್ಲಿ ಇದೂ ಸೇರಿಕೊಂಡಿದೆ.* ಚೌ ಚೌ: ಸಿಂಹದ ಪ್ರತಿರೂಪದಂತೆ ಕಾಣುವ ಈ ನಾಯಿ ಯಾರೊಂದಿಗೂ ಸ್ನೇಹಪರವಾಗಿರುವುದಿಲ್ಲ. ಇದು ಹೊರಗಿನವರಿಂದ, ಇನ್ನಿತರ ಪ್ರಾಣಿಗಳಿಂದ ಮತ್ತು ಮನೆಯವರಿಂದಲೂ ದೂರವಿರಲು ಇಷ್ಟ ಪಡುತ್ತೆ. ಈ ಪ್ರಕೃತಿಯೇ ನಾಯಿಯನ್ನು ಕ್ರೂರತ್ವದೆಡೆಗೆ ತಿರುಗುವಂತೆ ಮಾಡುತ್ತದೆ. ಇನ್ನಿತರ ನಾಯಿಗಳ ಜೊತೆ ಬೆರೆಯುವಂತೆ ಹೆಚ್ಚು ಅವಕಾಶ ಮಾಡಿಕೊಟ್ಟರೆ ಕ್ರೂರತ್ವವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು.
No comments:
Post a Comment