ಅಮೆರಿಕದ 21 ವರ್ಷದ ಯುವತಿಯೊಬ್ಬಳು ಜಗತ್ತಿನ ಅತೀ ಉದ್ದದ ನಾಲಿಗೆ ಹೊಂದಿರುವ ವ್ಯಕ್ತಿ ಎಂಬ ಗಿನ್ನಿಸ್ ದಾಖಲೆಗೆ ಪಾತ್ರಳಾಗಿದ್ದಾಳೆ. ಹ್ಯೂಸ್ಟನ್‌ನ ಚನೆಲ್ ಟಪ್ಪರ್ ಎಂಬಾಕೆಯೇ ಈ ದಾಖಲೆ ಸೇರಿರುವ ಯುವತಿ. ಅಂದಹಾಗೆ ಈಕೆಯ ನಾಲಿಗೆಯ ಉದ್ದ 9.7 ಸೆಂ.ಮೀ. 13 ವರ್ಷದವಳಿದ್ದಾಗಲೇ ಹೊರಚಾಚಿದ ತನ್ನ ನಾಲಿಗೆಯನ್ನು ಯುಟ್ಯೂಬ್‌ನಲ್ಲಿ ಬಿತ್ತರಿಸಿ ಈಕೆ ಗಮನ ಸೆಳೆದಿದ್ದಳು. ಶಾಲಾದಿನಗಳಲ್ಲೇ ತುಂಟತನ ಮಾಡುತ್ತ ಜನರೆಡೆಗೆ ಉದ್ದದ ನಾಲಿಗೆ ತೋರಿಸಿ ಚೇಷ್ಟೆ ಮಾಡುತ್ತಿದ್ದೆ. ಉದ್ದದ ನಾಲಿಗೆಯಿಂದ ಯಾವ ತೊಂದರೆಯೂ ಆಗಿಲ್ಲ. ಇದೊಂದು ಖುಷಿಯ ಸಂಗತಿ` ಎಂದು ಟಪ್ಪರ್ ಹೇಳಿದ್ದಾಳೆ
No comments:
Post a Comment