ಗ್ಯಾಸ್ಟ್ರಿಕ್ ಸಮಸ್ಯೆಯಿದ್ದರೆ ಅದರಿಂದ ಹೊಟ್ಟೆ ನೋವು ಅಷ್ಟೆ ಅಲ್ಲ ಮುಜುಗರ ಕೂಡ ಉಂಟಾಗುತ್ತದೆ. ಈ ರೀತಿಯ ಗ್ಯಾಸ್ ಸಮಸ್ಯೆಯಿದ್ದರೆ ಅದರ ಸೌಂಡ್ ಕೇಳಿದಾಗ ಉಳಿದವರು ನಗುತ್ತಾರೆ ಅಥವಾ ವಾಸನೆಯೆಂದು ಮುಖ ಕಿವುಚುತ್ತಾರೆ. ಈ ರೀತಿಯ ಗ್ಯಾಸ್ ಸಮಸ್ಯೆಯನ್ನು ಈ ಕೆಳಗಿನ ಮನೆ ಮದ್ದಿನಿಂದ ಪರಿಹರಿಸಬಹುದು.1.ಶುಂಠಿ: ಒಂದು ಚಿಕ್ಕ ತುಂಡು ಶುಂಠಿಯನ್ನು ಜಜ್ಜಿ ಒಂದು ಲೋಟ ನೀರಿಗೆ ಹಾಕಿ ಕುದಿಸಿ ನೀರು ತಣ್ಣಗಾದ ಮೇಲೆ ಕುಡಿದರೆ ಗ್ಯಾಸ್ ಸಮಸ್ಯೆ ಕಡಿಮೆಯಾಗುವುದು. * ಟೀಗೆ ಶುಂಠಿ ಹಾಕಿ ಕುಡಿದರೂ ಈ ಸಮಸ್ಯೆ ಪರಿಹಾರವಾಗುವುದು.2. ನೀರು ಕುಡಿಯುವುದು: ನೀರು ಕುಡಿದರೆ ಈ ರೀತಿಯ ಗ್ಯಾಸ್ ಸಮಸ್ಯೆ ನಿವಾರಣೆಯಗುವುದು. ನೀರು ಕುಡಿದಾಗ ಹೊಟ್ಟೆಯಲ್ಲಿರುವ ಬೇಡದ ಗ್ಯಾಸ್ ಮೂತ್ರದ ಮುಖಾಂತರ ಹೊರಹೋಗುವುದು.3. ಸೋಂಪು: ಹೊಟ್ಟೆ ನೋವು, ಅಜೀರ್ಣ ಮುಂತಾದ ಸಮಸ್ಯೆಗಳಿಗೆ ಸೋಂಪು ಪರಿಣಾಮಕಾರಿಯಾದ ಮನೆ ಮದ್ದಾಗಿದೆ. ಊಟದ ಮುಂಚೆ ಮತ್ತು ನಂತರ ಸೋಂಪು ತಿನ್ನುವುದರಿಂದ ಗ್ಯಾಸ್ ಸಮಸ್ಯೆ ಉಂಟಾಗುವುದಿಲ್ಲ.4.ಆಪಲ್ ಸೈಡರ್ ವಿನಿಗರ್: ಕೆಲವೊಮ್ಮೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿದಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಅಗ 2 ಚಮಚ ಆಪಲ್ ಸೈಡರ್ ವಿನಿಗರ್ ಅನ್ನು ಒಂದು ಲೋಟ ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ನೋವು ಕಡಿಮೆಯಾಗುವುದು.5. ಅಡುಗೆ ಸೋಡಾ: 1/4 ಚಮಚ ಅಡುಗೆ ಸೋಡಾವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕುಡಿದರೆ ತಕ್ಷಣವೆ ಗ್ಯಾಸ್ ಸಮಸ್ಯೆ ನಿವಾರಣೆಯಾಗುವುದು.6. ಪಲಾವ್ ಎಲೆ: ಪಲಾವ್ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಬೇಕು. ಆ ನೀರನ್ನು ಕುಡಿದರೆ ಗ್ಯಾಸ್ ಸಮಸ್ಯೆ ನಿವಾರಣೆಯಾಗುವುದು.
ಈ ಆಹಾರಗಳು ಒಗ್ಗುವುದಿಲ್ಲ-----------
ಈ ಆಹಾರಗಳು ಒಗ್ಗುವುದಿಲ್ಲ-----------
ಆರೋಗ್ಯಕರವಲ್ಲದ ಆಹಾರ ಕ್ರಮದಿಂದ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳು ಸರ್ವೇಸಾಮನ್ಯ. ಕೆಲವರಿಗೆ ಕೆಲವೊಂದು ಆಹಾರಗಳು ಒಗ್ಗುವುದಿಲ್ಲ. ಸಾಮಾನ್ಯವಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚು ಮಾಡುವ ಆಹಾರಗಳ ಪಟ್ಟಿ ನೋಡಿ ಇಲ್ಲಿದೆ.1. ಬೀನ್ಸ್, ಅಣಬೆ, ಹೂಕೋಸ್, ದವಸ ಧ್ಯಾನ್ಯಗಳು, ಸೇಮು, ಸಕ್ಕರೆ ಅಂಶ ಅಧಿಕವಿರುವ ಹಣ್ಣು ತರಕಾರಿಗಳು ಸುಲಭವಾಗಿ ಜೀರ್ಣವಾಗುವುದಿಲ್ಲ ಇದು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ.2.ಚೀಸ್, ಮೊಟ್ಟೆ, ಹಾಲಿನ ಉತ್ಪನ್ನಗಳು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ.3. ಆಲೂಗೆಡ್ಡೆ, ಜೋಳ, ಗೋದಿಯ ಉತ್ಪನ್ನಗಳಾದ ಬ್ರೆಡ್ ಇವುಗಳನ್ನು ಸೇವಿಸಿದಾಗಲೂ ಕೆಲವರಿಗೆ ಹೊಟ್ಟೆ ನೋವು ಬರುತ್ತದೆ.4. ಕೆಲವೊಂದು ನಾರು ಪದಾರ್ಥಗಳನ್ನು ನಾರಿನ ಜೊತೆ ತಿನ್ನ ಬಹುದು ಅಂತಹ ಆಹಾರ ಸೇವನೆಯಿಂದ ಕೆಲವರಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುವುದು.5. ಕೆಲವೊಂದು ಬೇಕರಿ ತಿಂಡಿಗಳನ್ನು ತಿಂದಾಗ ಸಹ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುವರಿಗೆ ಕೆಲವರಿಗೆ ಕೆಲ ಆಹಾರಗಳು ಒಗ್ಗುವುದಿಲ್ಲ, ಆದ್ದರಿಂದ ಅವುಗಳನ್ನು ಗಮನಿಸಿ ಅದನ್ನು ಸೇವಿಸದಿದ್ದರೆ ಒಳ್ಳೆಯದು.
No comments:
Post a Comment