Saturday, March 10, 2012

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಖಿಲೇಶ್ ಯಾದವ್. ಮೂಗಿನ ರಹಸ್ಯ ಬಹಿರಂಗ



ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಸರ್ಕಾರ ರಚನೆ ಸಿದ್ಧತೆಯಲ್ಲಿ ತೊಡಗಿದೆ. ಈ ನಡುವೆ ಎಸ್ ಪಿಗೆ ಭರ್ಜರಿ ಗೆಲುವು ತಂದು ಕೊಡುವಲ್ಲಿ ಮಹತ್ವದ ಪಾತ್ರವಹಿಸಿದ ಯುವ ನೇತಾರ ಅಖಿಲೇಶ್ ಯಾದವ್ ಅವರ ಮೂಗಿನ ಮೇಲೆ ಎಲ್ಲರ ಗಮನ ನೆಟ್ಟಿದೆ. ಅವರ ಮೂಗಿನ ರಹಸ್ಯ ಈಗ ಬಹಿರಂಗವಾಗಿದೆ. ಅಪ್ಪಟ ಫುಟ್ಬಾಲ್ ಪ್ರೇಮಿಯಾಗಿರುವ ಅಖಿಲೇಶ್ ಅವರು ಮೈಸೂರಿನಲ್ಲಿ ಶ್ರೀಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ಕಾಲ. ಒಮ್ಮೆ ಫುಟ್ಬಾಲ್ ಆಡುತ್ತಿದ್ದ ಅಖಿಲೇಶ್ ಮುಖಕ್ಕೆ ಚೆಂಡು ರಭಸವಾಗಿ ಬಡಿದು ಮೂಗಿನಿಂದ ಬಳಬಳನೆ ರಕ್ತ ಸುರಿಯತೊಡಗಿತು. ಆಗ ಪಕ್ಕಕ್ಕೆ ತಿರುಗಿದ ಮೂಗು ಇನ್ನೂ ಸರಿ ಹೋಗಿಲ್ಲ. ಕುತೂಹಲದ ಸಂಗತಿ ಎಂದರೆ ಮೂಗನ್ನು ಇನ್ನೂ 'ಫಿಕ್ಸ್' ಮಾಡಿಲ್ಲ. ಹೌದು, ಮೂಗಿನ ಮೂಳೆ ಮುರಿದರೂ ಅದಕ್ಕೆ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ ಮೇಲೆ ಅಖಿಲ್ ಮೂಗಿನ ತಂಟೆಗೆ ಹೋಗಿಲ್ಲ.ಮೈಸೂರು ಎಂದರೆ ಮೂಗು: ಈಗಲೂ ಮೈಸೂರಿನ ವಿಷಯ ಮಾತನಾಡತೊಡಗಿದರೆ ಅಖಿಲೇಶ್ ತನಗರಿವಿಲ್ಲದಂತೆ ಮೂಗನ್ನು ಮುಟ್ಟಿಕೊಳ್ಳುವುದಿದೆ ಎಂದು ಅವರ ಸಿನೀಯರ್ ಎಂಎಸ್ ಕರುಣಾ ಹೇಳುತ್ತಾರೆ.
ಅಖಿಲೇಶ್ ನನ್ನ ಕಾರಿಡಾರ್ ಫ್ರೆಂಡ್. ಕಾಲೇಜು ಕ್ಯಾಂಪಸ್ ನಲ್ಲಿ ಯಾವಗಾಲು ಕಾರಿಡರ್ ನಲ್ಲೇ ಸಿಗುತ್ತಿದ್ದ. ಹಾಗಾಗಿ ಆತನ ಹೆಸರು 'ಕಾರಿಡಾರ್ ಫ್ರೆಂಡ್' ಎಂದು ಇಟ್ಟಿದ್ದೆ. ಅಖಿಲ್ ಬಳಿ ಓಪನ್ ಜೀಪ್ ಇತ್ತು. ನಾವೆಲ್ಲ ರಜೆ ಇದ್ದಾಗ ಮೈಸೂರು ಸುತ್ತಾ ಮುತ್ತಾ ಓಡಾಡುತ್ತಿದ್ದೆವು. ಒಂಟಿಕೊಪ್ಪಲಿನಲ್ಲಿದ್ದ ನಮ್ಮ ಮನೆಗೆ ಅವನು ಲಿಫ್ಟ್ ಕೊಡುತ್ತಿದ್ದ. 1994 ರಲ್ಲಿ ಪರಿಸರ ವಿಜ್ಞಾನ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಮೈಸೂರು ತೊರೆದರೂ ನಮ್ಮ ಸ್ನೇಹ ಇನ್ನೂ ಹಾಗೇ ಇದೆ ಎಂದು ಕರುಣಾ ಗೆಳೆತನದ ದಿನಗಳನ್ನು ಸ್ಮರಿಸುತ್ತಾರೆ. ಯುವಕರು ರಾಜಕೀಯಕ್ಕೆ ಬರಬೇಕು ಎಂಬ ಮಾತಿದೆ. ಅಖಿಲೇಶ್ ನಂತವರು ರಾಜಕೀಯಕ್ಕೆ ಬರಬೇಕು ಆಗ ಏನಾದರೂ ಬದಲಾವಣೆ ಕಾಣಲು ಸಾಧ್ಯ. ಅವನ ರಾಜಕೀಯ ಏಳಿಗೆ ಹೀಗೆ ಮುಂದುವರೆಯಲಿ, ಅವನ ಟ್ರೆಂಡ್ ಮಾರ್ಕ್ ಮೂಗು ಮರೆಯಲು ಸಾಧ್ಯವಿಲ್ಲ ಎಂದು ಕರುಣಾ ನಗುನಗುತ್ತಾ ಹೇಳಿದರು.

No comments:

Post a Comment