ಓದುಗರಿಗೆಲ್ಲ ಕ್ರಿಸ್ತ ಶಕ 2012 ರ ಶುಭಾಶಯಗಳು ಹೊಸ ವರ್ಷ ನಮ್ಮೆಲ್ಲರಿಗೂ ಸಂತಸ, ಸುಖ, ಶಾಂತಿ ನೆಮ್ಮದಿ ತರಲಿ , ಆರೋಗ್ಯದಾಯಕ ಜೀವನ ಎಲ್ಲರ ಮುಂದಿರಲಿ ಲೋಕದಲ್ಲಿ ನಗು ನಲಿಯಲಿ ವಿಶ್ವದಲ್ಲಿ ಹರುಷ ಹರಿಯಲಿ----------------ವಾಷಿಂಗ್ಟನ್, ಮಹಾಪ್ರಳಯದ ಆತಂಕದಲ್ಲಿರುವ ಜಗತ್ತಿಗೆ ನಾಸಾ ವಿಜ್ಞಾನಿಗಳು ಸಮಾಧಾನಕರ ಸಂದೇಶ ನೀಡಿದ್ದಾರೆ. 2012 ಡಿಸೆಂಬರ್21ಕ್ಕೆ ಮಹಾಪ್ರಳಯ ಸಂಭವಿಸುತ್ತದೆ ಎಂದು ಇಂಟರ್ನೆಟ್ ಸೇರಿದಂತೆ ಎಲ್ಲ ಮಾಧ್ಯಮಗಳಲ್ಲೂ ಭೀತಿಯ ವಾತಾವರಣ ಸೃಷ್ಟಿಸಲಾಗಿದೆ. ಆದರೆ 2012ಕ್ಕೆ ಪ್ರಳಯನೂ ಇಲ್ಲ ಎಂಥದ್ದೂ ಇಲ್ಲ ಎಂದು ವಿಜ್ಞಾನಿಗಳು ಮತ್ತೊಮ್ಮೆ ಅಭಯ ನೀಡಿದ್ದಾರೆ. ಮುಂದಿನ ವರ್ಷ ಮಹಾಪ್ರಳಯ ಸಂಭವಿಸಿ ಇಡೀ ಭೂಮಂಡಲ ನಾಶವಾಗಲಿದೆ ಎಂಬ ಸಮೂಹ ಸನ್ನಿ ಎಲ್ಲೆಡೆ ವ್ಯಾಪಿಸಿದೆ. 2012ರಲ್ಲಿ ಸೂರ್ಯನಿಂದ ಹೊರಹೊಮ್ಮುವ ದೈತ್ಯ ಸೌರ ಜ್ವಾಲೆಗಳು ಭೂಮಿಗೆ ಸಂಚಕಾರ ತರಲಿದೆ ಎಂಬ ಆತಂಕವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸಾರಸಗಟಾಗಿ ತಳ್ಳಿ ಹಾಕಿದೆ. ಆದರೆ, ದೈತ್ಯ ಸೌರ ಜ್ವಾಲೆಗಳು ಸೂರ್ಯನಿಂದ ಹೊರಹೊಮ್ಮುವುದು ಖಚಿತ ಎಂದಿರುವ ನಾಸಾ, ಅವು ಭೂಮಿಯನ್ನು ತಲುಪುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಿಂದ ಭೂಮಿಯ ಮೇಲೆ ಯಾವುದೇ ಪ್ರಳಯ ಸಂಭವಿಸಲಾರದು ಎಂದು ಹೇಳಿದೆ. ದೈತ್ಯ ಸೌರ ಜ್ವಾಲೆಗಳಿಂದ ಉಂಟಾಗುವ ವಿದ್ಯುತ್ ಕಾಂತೀಯ ವಿಕರಣದಿಂದ ನಮ್ಮ ರೇಡಿಯೊ ತರಂಗಗಳಿಗೆ ಹಾಗೂ ಸಂಹವನ ವ್ಯವಸ್ಥೆಯ ಉಪಗ್ರಹಗಳ ಕಾರ್ಯಾಚರಣೆಗೆ ಅಲ್ಪಪ್ರಮಾಣದಲ್ಲಿ ತೊಂದರೆ ಮಾಡಬಹುದು ಎಂದು ಹೇಳಿದೆ. ಅದೂ ಈ ದೈತ್ಯ ಸ್ವಾರಜ್ವಾಲೆಗಳು ಹೊರಹೊಮ್ಮುವುದು 2012ರಲ್ಲಿ ಅಲ್ಲ. ಬದಲಿಗೆ 2013ರ ಕೊನೆ ಅಥವಾ 2014ನೇ ವರ್ಷದ ಆರಂಭದಲ್ಲಿ. ಪ್ರತಿ 11 ವರ್ಷಗಳಿಗೊಮ್ಮೆ ಸೌರಜ್ವಾಲೆಗಳು ದೈತ್ಯ ಗಾತ್ರ ಪಡೆಯುವುದು ಸಹಜ ಸಂಗತಿ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಓದುಗರಿಗೆಲ್ಲ ಕ್ರಿಸ್ತ ಶಕ 2012 ರ ಶುಭಾಶಯಗಳು ಹೊಸ ವರ್ಷ ನಮ್ಮೆಲ್ಲರಿಗೂ ಸಂತಸ, ಸುಖ, ಶಾಂತಿ ನೆಮ್ಮದಿ ತರಲಿ , ಆರೋಗ್ಯದಾಯಕ ಜೀವನ ಎಲ್ಲರ ಮುಂದಿರಲಿ ಲೋಕದಲ್ಲಿ ನಗು ನಲಿಯಲಿ ವಿಶ್ವದಲ್ಲಿ ಹರುಷ ಹರಿಯಲಿ
No comments:
Post a Comment