Tuesday, December 6, 2011

ವಿಷ್ಣು ಸ್ಮಾರಕಕ್ಕೆ ಬೆಂಗಳೂರಿನಲ್ಲಿ ಜಾಗ ಇಲ್ವೇ? ಅಂಬರೀಶ್ಣ ಬಾರತೀಗೆ ಬುದ್ದಿ ಮಾತು ಹೇಳಿ.




ಕನ್ನಡ ಕುಲಕೋಟಿಯ ಆರಾಧ್ಯ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕವನ್ನು ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರಿಸಲು ಸರಕಾರ ಮುಂದಾಗಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ವಿಷ್ಣುವರ್ಧನ್ ಅವರಂತಹ ನಟನ ಸ್ಮಾರಕಕ್ಕೆ ಬೆಂಗಳೂರಿನಲ್ಲಿ ಜಾಗವಿಲ್ಲವೇ ಎಂಬ ಪ್ರಶ್ನೆಗಳನ್ನು ಅಭಿಮಾನಿಗಳು ಹಾಕುತ್ತಿದ್ದಾರೆ. ಅಚ್ಚರಿಯೆಂದರೆ ಸರಕಾರದ ನಿಲುವಿಗೆ ಸ್ವತಃ ಭಾರತಿ ವಿಷ್ಣುವರ್ಧಣನ್ ಸಮ್ಮತಿಸಿರುವುದು!ಹಾಗಿದ್ದರೂ ಅಭಿಮಾನಿಗಳು ಮಾತ್ರ ಕೇಳುತ್ತಿಲ್ಲ. ವಿಷ್ಣು ಅವರನ್ನು ಮಣ್ಣು ಮಾಡಿರುವ ಜಾಗದಲ್ಲೇ ಸ್ಮಾರಕ ನಿರ್ಮಾಣವಾಗಬೇಕು, ಮೈಸೂರಿಗೆ ಸ್ಥಳಾಂತರಿಸಲು ನಾವು ಬಿಡೋದಿಲ್ಲ ಎಂದು ಪಟ್ಟು ಹಿಡಿಯುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದರೆ ಇಷ್ಟು ಹೊತ್ತಿಗಾಗಲೇ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ಎದ್ದು ನಿಲ್ಲಬೇಕಿತ್ತು. ಅದಕ್ಕೆ ಬೇಕಾದ ಹಣವನ್ನೂ ಸರಕಾರ ಮಂಜೂರು ಮಾಡಿತ್ತು. ಆದರೆ ಅಭಿಮಾನ್ ಸ್ಟುಡಿಯೋದ ಮಾಲಕರ ಕುಟುಂಬದಲ್ಲಿನ ವಿವಾದದಿಂದಾಗಿ ಎಲ್ಲವೂ ವಿಳಂಬವಾಗುತ್ತಿದೆ. ಇನ್ನು ತಡ ಮಾಡುವುದು ಬೇಡ ಅಂತ ಸರಕಾರ ಸ್ಮಾರಕವನ್ನು ಮೈಸೂರಿಗೆ ಸ್ಥಳಾಂತರಿಸಲು ಮುಂದಾಗಿದೆ.ಆದರೂ ಸರಕಾರದ ಸಬೂಬುಗಳನ್ನು ಆಲಿಸಲು ಅಭಿಮಾನಿಗಳು ಸಿದ್ಧರಿಲ್ಲ. ಕಳೆದ ಎರಡು ವರ್ಷಗಳಿಂದ ಸರಕಾರ ಒಂದಲ್ಲ ಒಂದು ಕಾರಣ ಹೇಳುತ್ತಾ, ಸ್ಮಾರಕ ನಿರ್ಮಾಣವನ್ನು ಮುಂದಕ್ಕೆ ಹಾಕುತ್ತಾ ಬಂದಿದೆ. ಈಗ ಹೊಸದೊಂದು ಕಾರಣ ಹೇಳುತ್ತಿದೆ. ಏನೇ ಆದರೂ, ಸ್ಮಾರಕ ಸ್ಥಳಾಂತರ ಸೂಕ್ತ ನಿರ್ಧಾರವಲ್ಲ. ಭಾರತಿಯವರು ಇದಕ್ಕೆ ಹೇಗೆ ಒಪ್ಪಿಗೆ ಸೂಚಿಸಿದ್ದಾರೆಂದು ಗೊತ್ತಿಲ್ಲ. ವಿಷ್ಣುವರ್ಧನ್ ಅವರ ಲಕ್ಷಾಂತರ ಅಭಿಮಾನಿಗಳ ಭಾವನೆಗಳಿಗೆ ಬೆಲೆಯೇ ಇಲ್ಲವೇ ಎಂದು ಪ್ರಶ್ನಿಸುತ್ತಾರೆ. ಸರಕಾರದ ಈ ಧೋರಣೆ ವಿಷ್ಣುವರ್ಧನ್ ಸ್ಮಾರಕಕ್ಕೆ ಸೀಮಿತವಲ್ಲ. ವರನಟ ಡಾ. ರಾಜ್‌ಕುಮಾರ್ ಸಮಾಧಿಯ ಅವಸ್ಥೆಯೂ ಇದೇ ಆಗಿದೆ. ರಾಜಣ್ಣ ನಮ್ಮನ್ನಗಲಿ ಹಲವು ವರ್ಷ ಸಂದರೂ ಸ್ಮಾರಕ ಇನ್ನೂ ಪೂರ್ತಿಗೊಂಡಿಲ್ಲ. ಅಂಬರೀಶ್ಣ ಬಾರತೀಗೆ ಬುದ್ದಿ ಮಾತು ಹೇಳಿ.

1 comment:

  1. Exactly... some one like ambresh should address this or An director like Dwarkish should chip in to the context and solve the problem... Dwarkish sir its not only using Vishnu sir name in ur film.. take a step now

    ReplyDelete