ಬೆಂಗಳೂರು,: ಬೇಲ್ ನಿರಾಕರಣೆಯಾಗಿ ಪರಪ್ಪನ ಅಗ್ರಹಾರ ಜೈಲೇ ಗತಿ ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆ ಕೋಲಾರ ಜಿಲ್ಲೆ ಮಾಲೂರಿನ ಶಾಸಕ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಅವರು ಕಟಕಟೆಯಲ್ಲಿಯೇ ಕುಸಿದು ಕುಳಿತು ಗಳಗಳನೆ ಅತ್ತಿದ್ದಾರೆ. ಮುಜರಾಯಿ ಖಾತೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ಮಧುಮೇಹ ಮತ್ತು ಹೈಬಿಪಿಯಿಂದ ಬಳಲುತ್ತಿದ್ದಾರೆ ಕೃಪೆ ತೋರಿಸಬೇಕೆಂದು ಮಾಡಿದ ಮನವಿಗೆ ಒಪ್ಪಿದ ನ್ಯಾಯಾಧೀಶ ಸುಧೀಂದ್ರ ರಾವ್ ಅವರು ಶೆಟ್ಟಿ ಅವರನ್ನು ಮೊದಲು ಸರಕಾರಿ ಆಸ್ಪತ್ರೆಗೆ ಕರೆದೊಯ್ದು, ಪ್ರಥಮ ಚಿಕಿತ್ಸೆ ನೀಡಿ ನಂತರ ಜೈಲಿಗೆ ಕಳಿಸಿ ಎಂದು ಆದೇಶ ನೀಡಿದ್ದರು. ಕೃಷ್ಣಯ್ಯ ಶೆಟ್ಟಿ ಅವರನ್ನು ಅಕ್ಟೋಬರ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಒಪ್ಪಿಸಿದ್ದಾರೆ. ಪರಂಪರಾಗತವಾಗಿ ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡಿಕೊಂಡು ಬಂದಿರುವ ಶೆಟ್ಟಿ ಕುಟುಂಬದ ಕೃಷ್ಣಯ್ಯ ಈಗ ತಮ್ಮ ಜೊತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಎಳೆದುಕೊಂಡು ಹೋಗುತ್ತಿದ್ದಾರೆ.
No comments:
Post a Comment