ಬೆಂಗಳೂರು, ಈ ಇಳಿ ವಯಸ್ಸಿನಲ್ಲಿ ಪಾಪ ಯಡಿಯೂರಪ್ಪಗೆ 'ಫಸ್ಟ್ ನೈಟ್' ಅನುಭವ ಹೀಗಿರಬಾರದಿತ್ತು! ಭೂಹಗರಣದಲ್ಲಿ ಶನಿವಾರ ಜೈಲುಪಾಲಾದ ನಾಡಿನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಜೈಲಿನಲ್ಲಿ ಮೊದಲ ರಾತ್ರಿ ಹೇಗಿತ್ತು ಎಂದು ತಿಳಿದುಕೊಳ್ಳಲು ಇಚ್ಚಿಸುವವರಿಗೆ ನಿರಾಶೆ ಕಾದಿದೆ. ಜೈಲಿನಲ್ಲಿ ಸಂಪೂರ್ಣವಾಗಿ ಒಂದು ರಾತ್ರಿಯನ್ನೂ ಕಳೆಯದ ಯಡಿಯೂರಪ್ಪ ದಿಢೀರನೆ ಆರೋಗ್ಯ ಹಾಳು ಮಾಡಿಕೊಂಡಿದ್ದಾರೆ. ಊಟ ಮಾಡದೆ, ಟಿವಿ ನೋಡುತ್ತಾ ಹಾಗೆಯೇ ಮಂಚದ ಮೇಲೆ ಮುದುರಿಕೊಂಡಿದ್ದ ಯಡಿಯೂರಪ್ಪಗೆ ಮೊದಲು ಬೆನ್ನು ನೋವು ಕಾಣಿಸಿಕೊಂಡಿದೆ. ಇದರಿಂದ ಎಚ್ಚರವಾಗಿ ದಿಗ್ಗಂತ ಎದ್ದು ಕುಳಿತ ಅವರ ದೇಹದಲ್ಲಿ ರಕ್ತ ಒಂದೇ ಏಟಿಗೆ ಜಲ್ಲಂತ ಸಂಚರಿಸಿದೆ. ಇದರಿಂದ ಕಣ್ಣಿಗೆ ಕತ್ತಲೆ ಕಟ್ಟಿದಂತಾಗಿದೆ. ಆಗ ವಾಂತಿಯೂ ಮಾಡಿಕೊಂಡಿದ್ದಾರೆ. ಅದಾದ ನಂತರ ಎದೆ ಹಿಡಿದುಕೊಂಡಿದೆ. ಇದೆಲ್ಲ ಆಗುವ ವೇಳೆಗೆ ಮಧ್ಯರಾತ್ರಿ ಕಳೆದಿತ್ತು. ಅಂದರೆ ಜೈಲಿನಲ್ಲಿ ಅರ್ಧ ರಾತ್ರಿಯನ್ನಷ್ಟೇ ಕಳೆದಿದ್ದ ಕೈದಿ ನಂ. 10462 (ಯಡಿಯೂರಪ್ಪ) ಅಲ್ಲೇ ಇದ್ದ ಅತ್ಯಾಪ್ತ ಸಿದ್ಲಿಂಗುಗೆ 'ಇನ್ನು ನನ್ನ ಕೈಯಲ್ಲಿ ತಡೆಯೋಕಾಗೊಲ್ಲ. ನಡಿ ದೇವಾ! ಜಯದೇವಗೆ ಹೋಗೋಣಾ ಅಂದಿದ್ದಾರೆ. ಅದರಂತೆ 2 ಗಂಟೆಯ ಸುಮಾರಿಗೆ ಜಯದೇವ ಆಸ್ಪತ್ರೆ ಸೇರಿಕೊಂಡಿದ್ದಾರೆ.
Saturday, October 15, 2011
ಯಡಿಯೂರಪ್ಪಗೆ ಜೈಲಿನಲ್ಲಿ 'ಫಸ್ಟ್ ನೈಟ್' ಅನುಭವ ಹೇಗಿತ್ತು!? ('ಫಸ್ಟ್ ನೈಟ್'. ಅಂದ್ರ ಅದಲ್ಲ)
ಬೆಂಗಳೂರು, ಈ ಇಳಿ ವಯಸ್ಸಿನಲ್ಲಿ ಪಾಪ ಯಡಿಯೂರಪ್ಪಗೆ 'ಫಸ್ಟ್ ನೈಟ್' ಅನುಭವ ಹೀಗಿರಬಾರದಿತ್ತು! ಭೂಹಗರಣದಲ್ಲಿ ಶನಿವಾರ ಜೈಲುಪಾಲಾದ ನಾಡಿನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಜೈಲಿನಲ್ಲಿ ಮೊದಲ ರಾತ್ರಿ ಹೇಗಿತ್ತು ಎಂದು ತಿಳಿದುಕೊಳ್ಳಲು ಇಚ್ಚಿಸುವವರಿಗೆ ನಿರಾಶೆ ಕಾದಿದೆ. ಜೈಲಿನಲ್ಲಿ ಸಂಪೂರ್ಣವಾಗಿ ಒಂದು ರಾತ್ರಿಯನ್ನೂ ಕಳೆಯದ ಯಡಿಯೂರಪ್ಪ ದಿಢೀರನೆ ಆರೋಗ್ಯ ಹಾಳು ಮಾಡಿಕೊಂಡಿದ್ದಾರೆ. ಊಟ ಮಾಡದೆ, ಟಿವಿ ನೋಡುತ್ತಾ ಹಾಗೆಯೇ ಮಂಚದ ಮೇಲೆ ಮುದುರಿಕೊಂಡಿದ್ದ ಯಡಿಯೂರಪ್ಪಗೆ ಮೊದಲು ಬೆನ್ನು ನೋವು ಕಾಣಿಸಿಕೊಂಡಿದೆ. ಇದರಿಂದ ಎಚ್ಚರವಾಗಿ ದಿಗ್ಗಂತ ಎದ್ದು ಕುಳಿತ ಅವರ ದೇಹದಲ್ಲಿ ರಕ್ತ ಒಂದೇ ಏಟಿಗೆ ಜಲ್ಲಂತ ಸಂಚರಿಸಿದೆ. ಇದರಿಂದ ಕಣ್ಣಿಗೆ ಕತ್ತಲೆ ಕಟ್ಟಿದಂತಾಗಿದೆ. ಆಗ ವಾಂತಿಯೂ ಮಾಡಿಕೊಂಡಿದ್ದಾರೆ. ಅದಾದ ನಂತರ ಎದೆ ಹಿಡಿದುಕೊಂಡಿದೆ. ಇದೆಲ್ಲ ಆಗುವ ವೇಳೆಗೆ ಮಧ್ಯರಾತ್ರಿ ಕಳೆದಿತ್ತು. ಅಂದರೆ ಜೈಲಿನಲ್ಲಿ ಅರ್ಧ ರಾತ್ರಿಯನ್ನಷ್ಟೇ ಕಳೆದಿದ್ದ ಕೈದಿ ನಂ. 10462 (ಯಡಿಯೂರಪ್ಪ) ಅಲ್ಲೇ ಇದ್ದ ಅತ್ಯಾಪ್ತ ಸಿದ್ಲಿಂಗುಗೆ 'ಇನ್ನು ನನ್ನ ಕೈಯಲ್ಲಿ ತಡೆಯೋಕಾಗೊಲ್ಲ. ನಡಿ ದೇವಾ! ಜಯದೇವಗೆ ಹೋಗೋಣಾ ಅಂದಿದ್ದಾರೆ. ಅದರಂತೆ 2 ಗಂಟೆಯ ಸುಮಾರಿಗೆ ಜಯದೇವ ಆಸ್ಪತ್ರೆ ಸೇರಿಕೊಂಡಿದ್ದಾರೆ.
Subscribe to:
Post Comments (Atom)
No comments:
Post a Comment