Wednesday, October 12, 2011

ಪ್ರಖ್ಯಾತ ಗಝಲ್ಗಾಯಕ ಜಗಜೀತ್ ಸಿಂಗ್ ಇನ್ನಿಲ್ಲ


ಗಜಲ್‌ಗಳ ಸಾಮ್ರಾಟ ಎಂದೇ ಖ್ಯಾತರಾದ ಗಾಯಕ, ಗೀತರಚನೆಕಾರ ಜಗಜೀತ್ ಸಿಂಗ್ ಅವರು ಇನ್ನಿಲ್ಲ. 70ರ ಅವರು ಮುಂಬೈಯ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ಜಗಜೀತ್ ಸಿಂಗ್ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದಾಗಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

1941ರ ಫೆಬ್ರವರಿ 8ರಂದು ಜನಿಸಿದ್ದ ಜಗಜಿತ್ ಸಿಂಗ್ ಗಝಲ್ ಗಾಯಕರಾಗಿ ಹೆಚ್ಚು ಪ್ರಸಿದ್ಧರಾಗಿದ್ದರೂ, ಗೀತರಚನೆಯಲ್ಲಿಯೂ ಅವರು ಎತ್ತಿದ ಕೈ. ಹಿಂದಿ, ಉರ್ದು, ಪಂಜಾಬಿ ಮತ್ತು ನೇಪಾಳಿ ಭಾಷೆಗಳಲ್ಲಿ ಹಾಡಿದ್ದ ಅವರು, ಪಾಕಿಸ್ತಾನಿ ಗಜಲ್ ಗಾಯಕರ ಪಾರಮ್ಯವಿದ್ದ ಕಾಲದಲ್ಲಿ ಭಾರತೀಯನಾಗಿ ಗಜಲ್ ಸಾಮ್ರಾಜ್ಯಕ್ಕೆ ಧುಮುಕಿದವರು.
ಇತರ ಗಜಲ್ ಗಾಯಕರಂತಲ್ಲದೆ, ಜಗಜಿತ್ ಸಿಂಗ್ ಅವರು ಚಲನಚಿತ್ರಗಳಿಗೂ ಧ್ವನಿ ನೀಡಿದ್ದರು. 80ರ ದಶಕದಲ್ಲಿ ಬಾಲಿವುಡ್ ಚಿತ್ರರಂಗವನ್ನೇ ಆಳಿತ್ತು ಅವರ ಧ್ವನಿ. ಪ್ರೇಮ್ ಗೀತ್, ಸಾಥ್ ಸಾಥ್ ಮತ್ತು ಅರ್ಥ್ ಮುಂತಾದ ಚಿತ್ರಗಳ ಗಾಯನವು ಇವರಿಗೆ ಖ್ಯಾತಿ ತಂದುಕೊಟ್ಟಿತ್ತು.
ಸಾಂಪ್ರದಾಯಿಕ ಗಝಲ್ ಗಾಯನಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿದವರು ಜಗ್‌ಜಿತ್ ಸಿಂಗ್. ಪದ್ಮಭೂಷಣ ಪ್ರಶಸ್ತಿಯವನ್ನೂ ಪಡೆದಿದ್ದ ಅವರು, ಉರ್ದು, ಪರ್ಷಿಯನ್ ಭಾಷೆಗಳಲ್ಲಿ ಕಬ್ಬಿಣದ ಕಡಲೆಯಾಗಿದ್ದ ಗಜಲ್ ಅನ್ನು ಪ್ರತಿಯೊಬ್ಬನ ಜನ ಮಾನಸಕ್ಕೆ ತಲುಪಿಸಿದವರು ಎಂದರೆ ತಪ್ಪಾಗಲಾರದು.

No comments:

Post a Comment