
ಧರ್ಮಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಪೊಲೀಸ್ ಸ್ಟೇಶನ್, ಜೈಲು, ಆಸ್ಪತ್ರೆ ಇತ್ಯಾದಿ ಎಲ್ಲ ದರ್ಶನ ಮಾಡಿದ ನಟ ದರ್ಶನ್ ಗೆ 28 ದಿನಗಳ ಜೈಲುವಾಸದ ಬಳಿಕ ಮರಳಿ ಹೊರ ಜಗತ್ತಿನ ದರ್ಶನ ಪಡೆದಿದ್ದಾರೆ.
ರಾಜರಾಜೇಶ್ವರಿ ನಗರದ ನಿವಾಸಕ್ಕೆ ದರ್ಶನ್ ಅಭಿಮಾನಿಗಳ ಘೋಷಣೆ, ಜಯಕಾರ, ಸಿಳ್ಳೆ ಸದ್ದು, ನೂಕು ನುಗ್ಗಲು ಮುಗಿಲುಮುಟ್ಟಿತ್ತು.
ಅಭಿಮಾನಿಗಳ ಗದ್ದಲ, ಕೂಗಾಟ, ತಳ್ಳಾಟಗಳ ನಡುವೆಯೇ ಜೈಲುವಾಸ ಅನುಭವಿಸಿ ಮರಳಿ ಮನೆಗೆ ಬಂದ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ಬಂಧುಗಳು ಸೇರಿಕೊಂಡು ದರ್ಶನ್ ಅಭಿಮಾನಿಗಳ ಎದುರು ಪರಸ್ಪರ ಕೇಕ್ ವಿನಿಮಯ ಮಾಡಿಕೊಂಡು, ತಮ್ಮ ದಾಂಪತ್ಯ ಕಲಹದಲ್ಲಿ ಎಲ್ಲವೂ ಸರಿಯಾಗಿದೆ ಎಂಬ ಸಂದೇಶವನ್ನು ಮುಟ್ಟಿಸಿದರು.
ಸುಮಾರು ಒಂದು ತಿಂಗಳಿಂದ ದರ್ಶನ್ ಮನೆ ಕಳಾಹೀನವಾಗಿದ್ದು, ಈಗ ಸಂತಸದ ಹೊನಲು ಹರಿದಿದೆ.
ಪತ್ನಿಗೆ ಥಳಿಸಿ ಸೆಪ್ಟೆಂಬರ್ 9 ರಂದು ನ್ಯಾಯಾಂಗ ಬಂಧನಕ್ಕೊಳಗಾದ ದರ್ಶನ್, ಉಸಿರಾಟ ತೊಂದರೆ, ಅಸ್ತಮಾ ಮುಂತಾದ ಕಾರಣ ನೀಡಿ ಆಸ್ಪತ್ರೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಅಮಾಯಕ ಅಭಿಮಾನಿಗಳು ಮೈಕೈಯೆಲ್ಲಾ ಗಾಯ ಮಾಡಿಕೊಂಡು, ಮಕ್ಕಳು ಊಟ ಬಿಟ್ಟು ಅಭಿಮಾನ ಮೆರೆದಿದ್ದರು.
No comments:
Post a Comment