
1. ಇತ್ತೀಚೆಗಷ್ಟೇ ಬಿಡುಗಡೆಗೊಂಡ ತಮ್ಮ ಆತ್ಮಚರಿತ್ರೆ 'ಕಾಂಟ್ರವರ್ಷಿಯಲಿ ಯುವರ್ಸ್' ಪುಸ್ತಕದಲ್ಲಿ ಕ್ರಿಕೆಟ್‌ನ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ಬಗ್ಗೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಿಬ್ ಅಖ್ತರ್ ವಿವಾದತ್ಮಕ ಹೇಳಿಕೆ ನೀಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಇದೀಗ ಪಾಕಿಸ್ತಾನದ ಮತ್ತೊಬ್ಬ ಮಾಜಿ ನಾಯಕ ಶಾಹಿದ್ ಆಫ್ರಿದಿ ಕೂಡಾ ಅಖ್ತರ್ ಹೇಳಿಕೆಗೆ ಧ್ವನಿಗೂಡಿಸುವ ಮೂಲಕ ಮತ್ತೆ ವಿವಾದಕ್ಕೆ ಕಿಡಿ ಹೊತ್ತಿಸುವ ಪ್ರಯತ್ನ ಮಾಡಿದ್ದಾರೆ.
ತಮ್ಮ ಬೌಲಿಂಗ್‌ಗೆ ಸಚಿನ್ ಸಿಕ್ಕಾಪಟ್ಟೆ ಹೆದರುತ್ತಿದ್ದರು ಎಂದು ರಾವಲ್ಪಿಂಡಿ ಎಕ್ಸ್‌ಪ್ರೆಸ್ ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದರು. ಇದನ್ನು ಬೆಂಬಲಿಸಿರುವ ಆಫ್ರಿದಿ, ಹೌದು ನಾನು ಸಹ ನೋಡಿದ್ದೇನೆ. ಅಖ್ತರ್ ದಾಳಿ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸಚಿನ್ ತೆಂಡೂಲ್ಕರ್ ಕಾಲುಗಳು ಗಡಗಡನೆ ನಡುಗುತ್ತಿದ್ದರು ಎಂದು ಲೇವಡಿ ಮಾಡಿದ್ದಾರೆ.
ಶೋಯಿಬ್ ಸತ್ಯವನ್ನೇ ನುಡಿಯುತ್ತಿದ್ದಾರೆ. ತೆಂಡೂಲ್ಕರ್ ಅವರಿಗೆ ಅಖ್ತರ್ ಬಗ್ಗೆ ಭಯವಿತ್ತು. ಪೀಲ್ಡಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ನಾನಿದನ್ನು ಗಮನಿಸಿದ್ದೇನೆ ಎಂದು ಆಫ್ರಿದಿ ಹೇಳಿಕೆ ಕೊಟ್ಟಿದ್ದಾರೆ.
ಮಾತು ಮುಂದುವರಿಸಿದ್ದ ಆಫ್ರಿದಿ, ಇಂದೊಂದು ಅಪರೂಪದ ಪ್ರಕ್ರಿಯೆ ಆಗಿರಲಿಲ್ಲ. ಕೆಲವೊಂದು ಬಾರಿ ಬ್ಯಾಟ್ಸ್‌ಮನ್‌ಗಳು ತೀವ್ರ ಒತ್ತಡವನ್ನು ಅನುಭವಿಸುತ್ತಾರೆ. ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್ ದಾಳಿಯಲ್ಲಿಯೂ ಹೀಗಾಗಿತ್ತು ಎಂದವರು ಸೇರಿಸಿದ್ದಾರೆ.
ಇದೀಗ ವಿಶ್ವ ಕ್ರಿಕೆಟಿಗರು ಆಫ್ರಿದಿ ಹೇಳಿಕೆಗೆ ಯಾವ ರೀತಿ ಪ್ರತಿಕ್ರಿಯೆ ಕೊಡುತ್ತಾರೆ ಎಂಬುದು ಬಹಳ ಪ್ರಾಮುಖ್ಯತೆ ಗಿಟ್ಟಿಸಿವೆ. ಒಟ್ಟಿನಲ್ಲಿ ಆಫ್ರಿದಿ ಹೇಳಿಕೆಯಂತೂ ಭಾರತೀಯ ಅಭಿಮಾನಿಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಸಚಿನ್ ಹಾಗೂ ರಾಹುಲ್ ದ್ರಾವಿಡ್ ಅವರಿಗೆ ಮ್ಯಾಚ್ ಗೆಲ್ಲಿಸುವ ಸಾಮರ್ಥ್ಯವು ಇರಲಿಲ್ಲ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಆಖ್ತರ್ ಬರೆದುಕೊಂಡಿದ್ದರು. ಇದರಿಂದಾಗಿ ಬೆಂಗಳೂರು ಹಾಗೂಮುಂಬೈ ಸಹಿತ ದೇಶದೆಲ್ಲೆಡೆ ನಡೆಯಬೇಕಾಗಿದ್ದ ಪುಸ್ತಕ ಬಿಡುಗಡೆ ಸಮಾರಂಭವನ್ನು ರದ್ದುಪಡಿಸಲಾಗಿತ್ತು.
No comments:
Post a Comment