Friday, October 28, 2011

(ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಾ)ಮೊಮ್ಮಕ್ಕಳೆದುರು ಮುವತ್ತರ ಹುಡುಗಿ ಜತೆ ಓಡಿಹೋದ 65ರ ಅಜ್ಜ



ಮಾಗಡಿ (ರಾಮನಗರ),: 'ತನಗೆ ಹುಟ್ಟೋದು ಮಾತ್ರ ಹೆಣ್ಣು ಮಕ್ಕಳು ಬೇಡ. ಆದರೆ ತನಗೆ ಹೆಣ್ಣು ಮಕ್ಕಳ ಸಹವಾಸ ಬೇಕೇಬೇಕು' ಎಂಬುದು 65 ವರ್ಷದ ಗಂಗಾಧರಯ್ಯನ ಮನೋಭಿಲಾಷೆ. ಇಂತಹ ಹಿರಿಯಜ್ಜನಿಗೆ ಮೊದಲ ಬಾರಿಗೆ ಮದುವೆಯಾಗಿ 35 ವರ್ಷವಾಗಿದೆ. ನಾಲ್ಕು ಹೆಣ್ಣುಮಕ್ಕಳೂ ಇವೆ. ಎಲ್ಲರಿಗೂ ಮದುವೆಯಾಗಿ ಹೆಣ್ಣು ಮಕ್ಕಳೇ ಆಗಿವೆ. ಮೊಮ್ಮಕ್ಕಳೊಂದಿಗೆ ಬದುಕಿನ ಮುಸ್ಸಂಜೆಯನ್ನ ಕಳೆಯಬೇಕಾದ ಗಂಗಾಧರಯ್ಯ ಈಗ 30ರ ಹರೆಯದ ಯುವತಿಯನ್ನು ಮದುವೆಯಾಗಿ ಓಡಿಹೋಗಿದ್ದಾನೆ. ಎರಡನೇ ಮದುವೆಯಾಗಿ ಮೋಸ ಮಾಡಿರುವ ಬಗ್ಗೆ ಮಾಗಡಿ ಪೊಲೀಸ್‌ ಠಾಣೆಯಲ್ಲಿ ಮೊದಲ ಹೆಂಡತಿ ಮತ್ತು ಮಕ್ಕಳು ದೂರು ದಾಖಲಿಸಿದ್ದಾರೆ. ಮಾಗಡಿ ತಾಲ್ಲೂಕಿನ ಚನ್ನಮ್ಮನಪಾಳ್ಯದ ಚಿಕ್ಕಪುಟ್ಟೇಗೌಡ ಅಲಿಯಾಸ್‌ ಗಂಗಾಧರಯ್ಯ ಮತ್ತು ಪ್ರೇಮಾ ದಂಪತಿಗೆ ನಾಲ್ಕು ಹೆಣ್ಣು ಮಕ್ಕಳು. ಹುಟ್ಟಿದ ಮಕ್ಕಳೆಲ್ಲವೂ ಹೆಣ್ಣು ಎಂಬ ಅಸಮಾಧಾನದಿಂದಲೇ ಇದ್ದ ಚಿಕ್ಕಪುಟ್ಟೇಗೌಡ ತನ್ನ ಪತ್ನಿ ಪ್ರೇಮಾಗೆ ನಿತ್ಯ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಜತೆಗೆ ಕಂಡಕಂಡ ಹೆಣ್ಣು ಮಕ್ಕಳ ಮೇಲೆ ಕಣ್ಣಾಕುತ್ತಿದ್ದ. ಇಂತಿಪ್ಪ ಗಂಗಾಧರಪ್ಪ, ವಂಶೋದ್ದಾರಕನನ್ನು ಪಡೆಯಲು ಹೆಣ್ಣಿಗಾಗಿ ಊರೂರು ಸುತ್ತುತ್ತಿದ್ದ. ಕೊನೆಗೆ ಸೋಲೂರು ಹೋಬಳಿಯ ಮುತ್ತುಂಪಾಳ್ಯದ ಬಳಿ ಇರುವ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಕರ್ನಾಟಕ ಮೂಲದ ಯುವತಿಯನ್ನು ಮದುವೆಯಾಗುವ ಪ್ರಸ್ತಾಪವಿಟ್ಟಿದ್ದ. ಬಡತನದಲ್ಲಿದ್ದ ಯುವತಿಯ ಪೋಷಕರು ಮುದುಕನಿಗೆ ಧಾರೆ ಎರೆದುಕೊಟ್ಟಿದ್ದಾರೆ. ಚಿಕ್ಕಪುಟ್ಟೇಗೌಡ 30ರ ಯುವತಿಯನ್ನು ಆಕೆಯ ತಾಯಿಯ ಸಮ್ಮುಖದಲ್ಲೇ ವಿವಾಹವಾಗಿದ್ದಾನೆ.

No comments:

Post a Comment