9 -10ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಬುಧವಾರ (ಅ.19) ಮುಖ್ಯಮಂತ್ರಿ ಸದಾನಂದಗೌಡ ಅವರು ವಿಧಾನಸೌಧದಲ್ಲಿ ಪ್ರಕಟಿಸಿದರು. ಮೊದಲ ಅತ್ಯುತ್ತಮ ಚಿತ್ರವಾಗಿ ಋತ್ವಿಕ್ ಸಿಂಹ ಚೊಚ್ಚಿಲ ನಿರ್ದೇಶನದ 'ರಸಋಷಿ ಕುವೆಂಪು' ಆಯ್ಕೆಯಾಗಿದೆ. ಎರಡನೇ ಅತ್ಯುತ್ತಮ ಚಿತ್ರವಾಗಿ ಯೋಗರಾಜ್ ಭಟ್ ನಿರ್ದೇಶನದ ಮನಸಾರೆ ಹಾಗೂ ಮೂರನೆ ಅತ್ಯುತ್ತಮ ಚಿತ್ರವಾಗಿ ಪ್ರಶಾಂತ್ ರಾಜ್ ನಿರ್ದೇಶನದ ಲವ್ ಗುರು ಚಿತ್ರಗಳು ಆಯ್ಕೆಯಾಗಿವೆ. ಉತ್ತಮ ಸಾಮಾಜಿಕ ಚಿತ್ರ ಪ್ರಶಸ್ತಿಯನ್ನು ಬರಗೂರು ರಾಮಚಂದ್ರಪ್ಪನವರ ಶಬರಿ ಚಿತ್ರ ಪಡೆದುಕೊಂಡಿದೆ. ಆಪ್ತರಕ್ಷಕ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ದಿವಂಗತ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ನೀಡಲಾಗಿದೆ. ಪರೀಕ್ಷೆ ಚಿತ್ರದಲ್ಲಿನ ಅತ್ಯ್ಯುತ್ತಮ ಅಭಿನಯಕ್ಕಾಗಿ ಉತ್ತಮ ನಟಿ ಪ್ರಶಸ್ತಿ ಅನುಪ್ರಭಾಕರ್ ಪಾಲಾಗಿದೆ. ಪರೀಕ್ಷೆ ಚಿತ್ರವನ್ನು ಸೀತಾರಾಂ ಕಾರಂತ್ ನಿರ್ದೇಶಿಸಿದ್ದಾರೆ. ನಟ ನೀನಾಸಂ ಅಶ್ವತ್ಥ್ ಅವರು ಉತ್ತಮ ಪೋಷಕ ನಟರಾಗಿ ಆಯ್ಕೆಯಗಿದ್ದರೆ ವೇಣುಅತ್ಯುತ್ತಮ ಕಲಾ ನಿರ್ದೇಶಕರಾಗಿ ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಒಲವೇ ಜೀವನ ಲೆಕ್ಕಾಚಾರ ಚಿತ್ರಕ್ಕೆ ಅತ್ಯುತ್ತಮ ಕತೆ ಪ್ರಶಸ್ತಿಗಳು ಲಭಿಸಿವೆ. ದ್ವಾರಕೀಶ್ ನೇತೃತ್ವದ ಆಯ್ಕೆ ಸಮಿತಿ ಈ ಚಿತ್ರಗಳನ್ನು ಆಯ್ಕೆ ಮಾಡಿದೆ.
No comments:
Post a Comment