Sunday, August 7, 2011

ಭ್ರಷ್ಟಾಚಾರ ವಿರುದ್ಧದ ಹೋರಾಟ ನಿರಂತರ: ಸಂತೋಷ್ ಹೆಗ್ಡೆ


ಭ್ರಷ್ಟಾಚಾರ ವಿರುದ್ಧದ ಹೋರಾಟ ನಿರಂತರ: ಸಂತೋಷ್ ಹೆಗ್ಡೆ
2006ರಲ್ಲಿ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯದ ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನರಾಗಿ ಕಾಡಿದ್ದ ಸಂತೋಷ್ ಹೆಗ್ಡೆ, ರಾಜ್ಯದ ಜನತೆಯಲ್ಲಿ ಭಾರಿ ಜನಪ್ರಿಯತೆಯನ್ನೇ ಗಳಿಸಿದ್ದರು.

ಅಕ್ರಮ ಗಣಿಗಾರಿಕೆಯ ತನಿಖಾ ವರದಿಯನ್ನು ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಕುರ್ಚಿಯಿಂದ ಬಿ. ಎಸ್. ಯಡಿಯೂರಪ್ಪ ಅವರನ್ನು ಕೆಳಗೆಳಿಸಿದ ಲೋಕಾಯುಕ್ತರು ಭ್ರಷ್ಟಚಾರದ ವಿರುದ್ಧ ಸಮರವನ್ನೇ ಸಾರಿದ್ದರು.

ಅವರು ಲೋಕಾಯುಕ್ತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿರುವುದು ತನಗೆ ಅತೀವ ತೃಪ್ತಿ ತಂದಿದ್ದು, ಸಂತೋಷದಿಂದಲೇ ನಿವೃತ್ತಿಯಾಗುತ್ತಿದ್ದೇನೆ ಎಂದಿದ್ದಾರೆ.

ಲೋಕಾಯುಕ್ತ ಹುದ್ದೆಯಿಂದ ನಿವೃತ್ತಿ ಹೊಂದಿದ ಬಳಿಕ ಜನ ಸಾಮಾನ್ಯರೊಂದಿಗೆ ಸೇರಿ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಲಿದ್ದೇನೆ. ಭ್ರಷ್ಟಾಚಾರ ವಿರುದ್ಧದ ತನ್ನ ಹೋರಾಟ ನಿರಂತರ ಎಂದು ಹೇಳಿದ ಅವರು ಜನ ಲೋಕಪಾಲ್ ಕರಡು ಸಮಿತಿಯ ಸದಸ್ಯನಾಗಿ ನಾಗರಿಕ ಸಮಿತಿಯ ಅಣ್ಣಾ ಹಜಾರೆಯವರೊಂದಗೆ ಕೆಲಸ ಮಾಡುವುದಾಗಿ ತಿಳಿಸಿದರು.


No comments:

Post a Comment