Friday, August 12, 2011
ಆಧಾರ್ ಚೀಟಿ ಅರ್ಜಿ ಪಡೆಯುವುದು ಎಲ್ಲಿ? ಹೇಗೆ?
ಬೆಂಗಳೂರು ಆ.12: ವಿಶಿಷ್ಟ ಗುರುತಿನ ಚೀಟಿ(UID) ಆಧಾರ್ ನೋಂದಾಣಿ ಕಾರ್ಯಕ್ರಮ ಆ.17ರಂದು ಆರಂಭಗೊಂಡು ಎರಡು ಹಂತದಲ್ಲಿ ಮುಕ್ತಾಯಗೊಳ್ಳಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ಒನ್ ಕೇಂದ್ರ ಸೇರಿದಂತೆ ವಿವಿಧ ನೋಂದಣಿ ಕೇಂದ್ರಗಳಲ್ಲಿ ಅರ್ಜಿ ಪಡೆಯಬಹುದು.
ಮೊದಲ ಹಂತದ ಅರ್ಜಿ ವಿತರಣೆ ಕೇಂದ್ರ:
* ರಾಜಾಜಿನಗರ ವಾಣಿಜ್ಯ ಸಂಕೀರ್ಣ,
* ಪಾಲಿಕೆ ಸಮುದಯ ಕೇಂದ್ರ, ಸರ್ಕಾರಿ ಸಾಬೂನು ಕಾರ್ಖಾನೆ ಹಿಂಭಾಗ ಅಶೋಕಪುರ
* ಸಮುದಾಯ ಕೇಂದ್ರ ಸುಬ್ರಮಣ್ಯ ನಗರ
* ಅಕ್ಕಿತಿಮ್ಮನಹಳ್ಳಿ ಸಮುದಾಯ ಭವನ, ಶಾಂತಿನಗರ
* ಮರ್ಫಿ ಸಮುದಾಯ ಭವನ, ಮರ್ಫಿ ಟೌನ್, ಹಲಸೂರು
* ಸಿಂಧಿ ಕಾಲೋನಿ ಸಮುದಾಯ ಭವನ ವೀಲರ್ ರಸ್ತೆ
* ಯಡಿಯೂರು ಸಮುದಾಯ ಭವನ, ಕನಕಪುರ ರಸ್ತೆ
* ಕೆಂಪೇಗೌಡ ಸಮುದಾಯ ಭವನ, ಆಡುಗೋಡಿ
* ಡಾ.ರಾಜ್ ರಂಗಮಂದಿರ ಶಾಸ್ತ್ರಿನಗರ
ಎರಡನೇ ಹಂತದ ನೋಂದಣಿ ಕೇಂದ್ರಗಳು:
* ಸಮುದಾಯ ಭವನ, ಶ್ರೀರಾಮಂಪುರ ಪೊಲೀಸ್ ಠಾಣೆ ಹಿಂಭಾಗ, ದಯಾನಂದ ನಗರ
* ಸಮುದಾಯ ಭವನ, ಹಲಸೂರು ಕೆರೆ ಬಳಿ
* ಸಮುದಾಯ ಭವನ, ಭಾರತಿನಗರ
* ಸಮುದಾಯ ಭವನ, ಜೋಗುಪಾಳ್ಯ
* ಆರ್ ಜಿಎಸ್ ಸಂಕೀರ್ಣ ಸಭಾಂಗಣ, ಬೃಂದಾವನನಗರ
ತೀರಾ ಸಮಯವಕಾಶ ಇಲ್ಲದವರು ಮುಂಚಿತವಾಗಿ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಬಹುದು. ಇದಕ್ಕಾಗಿ ವಿಶೇಷ ಕೇಂದ್ರಗಳನ್ನು ತೆರೆಯಲಾಗಿದೆ.
* ಬಿಡಿಎ ಸಂಕೀರ್ಣ, 2ನೇ ಹಂತ, ಬನಶಂಕರಿ
* ಬಿಡಿಎ ಸಂಕೀರ್ಣ, ನಾಗರಬಾವಿ 2 ನೇ ಹಂತ
* ಬಿಡಿಎ ಸಂಕೀರ್ಣ ಆರ್ ಟಿಓ ಕಚೇರಿ ಬಳಿ, ರಾಜಾಜಿನಗರ
* ದಿವ್ಯಶ್ರೀ ಚೇಂಬರ್ಸ್, ಶಾಂತಿನಗರ
* ಬಿಡಿಎ ಸಂಕೀರ್ಣ, ಹಳೆ ಮದ್ರಾಸ್ ರಸ್ತೆ, ಇಂದಿರಾನಗರ
ಸಮಯ: ಎಲ್ಲಾ ಕೇಂದ್ರಗಳು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಕಾರ್ಯ ನಿರ್ವಹಿಸಲಿದೆ. ರಾತ್ರಿ ವೇಳೆ ನೋಂದಣಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಬೆಂಗಳೂರು ಒನ್ ಕೇಂದ್ರಗಳು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ತೆರೆದಿರುತ್ತದೆ. ಇದಲ್ಲದೆ ಕೆಳಗಂಡ ಕೇಂದ್ರಗಳು ಕೂಡಾ ರಾತ್ರಿ ವೇಳೆ ಕಾರ್ಯ ನಿರ್ವಹಿಸಲಿದೆ.
* ಬೆಸ್ಕಾಂ ಉಪವಿಭಾಗ ವಿಮಾನನಿಲ್ದಾಣರಸ್ತೆ
* ಬೆಸ್ಕಾಂ ಕಟ್ಟಡ, 14ನೇ ಅಡ್ಡರಸ್ತೆ, 1ನೇ ಹಂತ, ಜೆಪಿ ನಗರ
* ಬೆಂಗಳೂರು ಜಲಮಂಡಳಿ ಕಟ್ಟಡ, 18ನೇ ಅಡ್ಡರಸ್ತೆ, ಮಲ್ಲೇಶ್ವರ
* ಎನ್ ಜಿವಿ ಪಾಸ್ ಪೋರ್ಟ್ ಕಚೇರಿ ಬಳಿ, ಕೋರಮಂಗಲ
* ಬಿಡಿಎ ಸಂಕೀರ್ಣ, ವಿಜಯನಗರ
Subscribe to:
Post Comments (Atom)
No comments:
Post a Comment