Friday, July 29, 2011

ಆಟೊ ಚಾಲಕರ ಕಿರುಕುಳಕ್ಕೆ sms ನಿಂದ ಮುಕ್ತಿ

ಬೆಂಗಳೂರು, ಆಟೊರಿಕ್ಷಾ ಚಾಲಕನ ಕಿರಿಕಿರಿ ಮಿತಿಮೀರಿ ಆತನ ವಿರುದ್ಧ ದೂರು ದಾಖಲಿಸಲು ಆಲೋಚಿಸುತ್ತಿದ್ದೀರಾ!? ಹೇಳಿದ ಕಡೆ ಬರಲು ಆಟೊ ಚಾಲಕ ನಿರಾಕರಿಸಿದರೆ ಅಥವಾ ಹೆಚ್ಚು ಹಣ ಕೇಳಿದರೆ ಇನ್ನು ಮುಂದೆ ನೀವು ಎಸ್‌ಎಂಎಸ್ ಮೊರೆಹೋಗಬಹುದು.

ಇಂತಹ ಹೊಸ ಯೋಜನೆಯನ್ನು ಬೆಂಗಳೂರು ನಗರ ಸಂಚಾರ ಪೊಲೀಸರು ಜಾರಿಗೆ ತಂದಿದ್ದಾರೆ. ಪಾರ್ಕಿಂಗ್ ಸ್ಥಳ, ವಾಹನದ ಮಾಲೀಕತ್ವದ ಮಾಹಿತಿ ಮತ್ತು ಬಾಕಿ ಇರುವ ಪ್ರಕರಣಗಳನ್ನು ಎಸ್‌ಎಂಎಸ್ ಕಳುಹಿಸುವ ಮೂಲಕ ತಿಳಿಯಬಹುದು. ಆಟೊ ಚಾಲಕ ನೀವು ಹೇಳಿದ ಸ್ಥಳಕ್ಕೆ ಬರಲು ನಿರಾಕರಿಸಿದರೆ ಆಟೊ ಸ್ಪೇಸ್ ಆರ್ಇಎಫ್ ಸ್ಪೇಸ್ ಆಟೊ ನೋಂದಣಿ ಸಂಖ್ಯೆ ಸ್ಪೇಸ್, ಸ್ಥಳ ಸ್ಪೇಸ್ ಸಮಯವನ್ನು ಟೈಪ್ ಮಾಡಿ 52225 ಸಂಖ್ಯೆಗೆ ಕಳುಹಿಸಬೇಕು.

ಉದಾಹರಣೆಗೆ AUTO REF KA01XY4321 BASAVANAGUDI TO KORAMANGALA 6 PM ಎಂದು ಟೈಪ್ ಮಾಡಿ 52225ಕ್ಕೆ ಕಳುಹಿಸಬೇಕು.

ಇದೇ ರೀತಿ ಅಧಿಕ ಬಾಡಿಗೆ ಕೇಳಿದರೆ AUTO OVR KA01XY4321 BASAVANAGUDI TO KORAMANGALA 6 PM ಎಂದು ಟೈಪ್ ಮಾಡಿ 52225ಕ್ಕೆ ಕಳುಹಿಸಬೇಕು.

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಮಾಹಿತಿ ಪಡೆಯಬಹುದು. ಉದಾಹರಣೆಗೆ BTIS FINE KA01XY4321 ಎಂದು ಟೈಪ್ ಮಾಡಿ 52225ಗೆ ಕಳುಹಿಸಿದರೆ ನೀವು ದಂಡ ಬಾಕಿ ಉಳಿಸಿಕೊಂಡಿದ್ದರೆ ಆ ಬಗ್ಗೆ ಮಾಹಿತಿ ಬರುತ್ತದೆ.

No comments:

Post a Comment