Wednesday, July 20, 2011

ಆರೋಗ್ಯಕ್ಕೆ ಸಿಹಿ ಹಾಗಲಕಾಯಿ

ಹಾಗಲಕಾಯಿ ಎಂದಾಕ್ಷಣ ಅದು ಮಧುಮೇಹಿಗಳಿಗೆ ಸೀಮಿತ, ನಾವ್ಯಾಕೆ ತಿಂದು ಬಾಯಿ ಕಹಿ ಮಾಡಿಕೊಳ್ಳಬೇಕು ಅನ್ನೋ ಯೋಚನೆ ಬರೋದು ಸಹಜ. ಹಿತ್ತಲ ಗಿಡ ಹಾಗಲಕಾಯಿ ಎಂದರೆ ಮೂಗು ಮುರಿಯುವವರೇ ಹೆಚ್ಚು.

ಆದರೆ ಕಡು ಕಹಿಯಾದ ಹಾಗಲಕಾಯನ್ನು ಸ್ವಲ್ಪ ಪ್ರಮಾಣವಾದರೂ ನಿಯಮಿತವಾಗಿ ಸೇವಿಸುತ್ತ ಬಂದರೆ ಸಾಕು ಅದು ಆರೋಗ್ಯದ ಮೇಲೆ ಎಂತ ಪರಿಣಾಮ ಬೀರುತ್ತೆ ಅನ್ನೋದನ್ನ ನೀವೇ ನೋಡಬಹುದು.

* ರಕ್ತ ಶುದ್ಧೀಕರಣ: ರಕ್ತಕ್ಕೆ ಸಂಬಂಧಿಸಿದ ಅನೇಕ ತೊಂದರೆಗಳನ್ನು ನೀಗಿಸುವಲ್ಲಿ ಹಾಗಲ ಕಾಯಿಯದು ಮೊದಲ ಸ್ಥಾನ. ಕೆಟ್ಟ ರಕ್ತದಿಂದ ಉಂಟಾಗುವ ಹುಣ್ಣು, ಚರ್ಮದ ತುರಿಕೆ ಮತ್ತು ಕೀವು ಸೋರುವುದನ್ನು ತಡೆಯುತ್ತದೆ. ನಿಂಬೆಹಣ್ಣು ಮತ್ತು ಸ್ವಲ್ಪ ಜೇನಿನೊಂದಿಗೆ ಇದನ್ನು ಸೇವಿಸುತ್ತ ಬಂದರೆ ಕ್ರಮೇಣ ರಕ್ತ ಶುದ್ಧಿಯಾಗುತ್ತದೆ.

* ಕಾಲರಾ, ಜಾಂಡೀಸ್ ನಂತಹ ಅಪಾಯಕಾರಿ ರೋಗಗಳ ತಡೆಗೆ ಇದು ರಾಮಬಾಣ. ಅಷ್ಟೇ ಅಲ್ಲ, ಹುಳುಕಡ್ಡಿ ಮುಂತಾದ ಅಲರ್ಜಿ ಸಂಬಂಧಿತ ಕಾಯಿಲೆಗಳನ್ನು ಅತಿ ಬೇಗ ಗುಣಪಡಿಸುತ್ತದೆ.

* ಮಧುಮೇಹ: ಕಹಿಯಾದ ಹಾಗಲಕಾಯಿಯಲ್ಲಿನ ಹೈಪೊಗ್ಲೈಸಮಿಕ್ ಎಂಬ ನೈಸರ್ಗಿಕ ಇನ್ಸುಲಿನ್ ರಕ್ತದಲ್ಲಿನ ಸಕ್ಕರೆ ಅಂಶವನ್ನು ತಗ್ಗಿಸುವುದಲ್ಲದೆ, ರಕ್ತಕ್ಕೆ ಗ್ಲೂಕೋಸ್ ನೀಡಿ ಸಾಮರ್ಥ್ಯ ಹೆಚ್ಚುವಂತೆ ಮಾಡುತ್ತದೆ.

* ರೋಗ ನಿರೋಧಕ ಶಕ್ತಿ: ಹಾಗಲಕಾಯಿಯಲ್ಲಿನ ಸತ್ವ ರಕ್ತದಲ್ಲಿನ ಕೆಲವು ಸೂಕ್ಷ್ಮಾಣು ಜೀವಿಗಳನ್ನು ಕೊಂದು ಜೀರ್ಣಕ್ರಿಯೆಗೆ ಸ್ಪಂದಿಸುವಂತೆ ಮಾಡುತ್ತದೆ. ಶಕ್ತಿಯ ಮೂಲವಾಗಿರುವ ಈ ಹಾಗಲಕಾಯಿ ರಸವನ್ನು ಸೇವಿಸಿದರೆ ತಲೆ ಸುತ್ತು ಕಡೆಮೆಯಾಗಿ, ದೈಹಿಕ ಚಟುವಟಿಕೆಗಳು ಸರಾಗವಾಗಿ ಸಾಗುವಂತೆ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

* ಉಸಿರಾಟ ಸಂಬಂಧಿ ಕಾಯಿಲೆಗಳಾದ ಅಸ್ತಮಾ, ಗೂರಲು ಕೆಮ್ಮು ಮತ್ತು ಗಂಟಲಿನ ಸಮಸ್ಯೆಗಳಿಗೆ ಇದರ ಸೇವನೆ ಅತಿ ಶೀಘ್ರ ಪರಿಣಾಮ ಬೀರುತ್ತದೆ.

ಹಾಗಾದರೆ ಏಕೆ ತಡ ಮಾಡ್ತೀರ? ಇನ್ನು ಮುಂದೆ ಸ್ವಲ್ಪ ಸ್ವಲ್ಪವಾದರೂ ದಿನ ನಿತ್ಯ ಹಾಗಲಕಾಯಿ ಸೇವಿಸೋದನ್ನ ರೂಢಿ ಮಾಡಿಕೊಳ್ಳಿ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ....

No comments:

Post a Comment