ಸುರಕ್ಷಿತ ವಾಹನ ಚಾಲನೆ ಅಂದಾಕ್ಷಣ ತಕ್ಷಣ ನೆನಪಿಗೆ ಬರುವುದು ಸೀಟ್ ಬೆಲ್ಟ್, ಆಲ್ಕೋಹಾಲ್ ಅಥವಾ ಇತರ ಡ್ರಗ್ಸ್ ಸೇವನೆ. ಆದರೆ ಈಗ ಇವೆಲ್ಲಕ್ಕಿಂತ ಅಗ್ರಸ್ಥಾನದಲ್ಲಿರುವುದು ಸಣ್ಣ ಗಿಝ್ಮೊ ಸಾಧನ "ಸೆಲ್ ಫೋನ್".
ಡಾಕ್ಟರ್, ಉಪನ್ಯಾಸಕರು ಅಥವಾ ಐಟಿ ಉದ್ಯಮಿಗಳು ಸೇರಿದಂತೆ ಎಲ್ಲರೂ ವಾಹನ ಚಲಾಯಿಸುತ್ತ ಮೊಬೈಲ್ ಬಳಕೆ ಮಾಡುತ್ತಾರೆ. ಹೀಗೆ ಎಲ್ಲರೂ ವಾಹನ ಚಲಾಯಿಸುತ್ತ ಮೊಬೈಲ್ ಫೋನ್ ಬಳಕೆ ಮಾಡುತ್ತಿರುವುದರಿಂದ ಅಪಘಾತಗಳು ಕೂಡ ಜಾಸ್ತಿಯಾಗುತ್ತಿವೆ.
ಅಂಕಿಅಂಶಗಳು ತಿಳಿಸುವ ಪ್ರಕಾರ ಪ್ರತಿದಿನ 4 ರಸ್ತೆ ಅಪಘಾತಗಳಲ್ಲಿ ಒಂದು ಅಪಘಾತವು ಮೊಬೈಲ್ ಫೋನ್ ಬಳಕೆಯಿಂದಾಗುತ್ತದೆ. ವಾಹನ ಚಲಾಯಿಸುವಾಗ ಮೊಬೈಲ್ ನತ್ತ ಮುಖ ಮಾಡಿ ರಸ್ತೆಯ ಮೇಲಿನ ಗಮನವನ್ನು ಒಂದು ಕ್ಷಣ ಕಳೆದುಕೊಂಡು ಭೀಕರ ಅಪಘಾತಗಳಿಗೆ ಈಡಾಗುತ್ತಾರೆ.
ಕೆಲವು ಸಂದರ್ಭದಲ್ಲಿ ವಾಹನ ಚಲಾಯಿಸುತ್ತಿರುವಾಗ ಮೊಬೈಲ್ ಫೋನ್ ಬಳಕೆ ಅನಿವಾರ್ಯವಾಗಿರಬಹುದು. ಮೊಬೈಲ್ ಪೋನ್ ನಿಂದ ಆಗುವ ವಾಹನ ಅಪಘಾತಗಳನ್ನು ತಪ್ಪಿಸಲು ಕೆಲವು ಸಲಹೆಗಳು ಇಲ್ಲಿವೆ.
* ಕಾರನ್ನು ಸ್ಟಾರ್ಟ್ ಮಾಡುವ ಮುನ್ನ ಒಮ್ಮೆ ಮೊಬೈಲ್ ಫೋನ್ ನೋಡಿ. ಈ ಸಮಯಕ್ಕೆ ಯಾವುದೇ ನಿರೀಕ್ಷಿತ ಕರೆ ಬರಲಿದೆಯೇ? ಅಥವಾ ನೀವು ಕಳುಹಿಸಿದ ಸಂದೇಶಕ್ಕೆ ಮಾರುತ್ತರ ಬರಲಿದೆಯೇ ಅಂತ. ಹಾಗಿದ್ದಲ್ಲಿ ಆ ಕರೆ ಸ್ವೀಕರಿಸಿ ಅಥವಾ ಆ ಸಂದೇಶಕ್ಕೆ ಮಾರುತ್ತರ ಬರೆದು ವಾಹನ ಸ್ಟಾರ್ಟ್ ಮಾಡಿ.
* ಅಗತ್ಯ ಕರೆಗಳನ್ನು ಮಾತ್ರ ರಿಸಿವ್ ಮಾಡಿ. ಕಡಿಮೆ ಮಾತನಾಡಿ. ವಾತಾವರಣ, ರಸ್ತೆ ಸ್ಥಿತಿ ಸರಿಯಿಲ್ಲದಾಗ, ಸಂಚಾರ ದಟ್ಟಣೆ, ಮತ್ತು ಪಾದಚಾರಿಗಳ ಓಡಾಟ ಹೆಚ್ಚಿದ್ದಾಗ ಮೊಬೈಲ್ ನಲ್ಲಿ ಮಾತನಾಡಬೇಡಿ. ವಾಹನ ಚಲಾಯಿಸುತ್ತ ಭಾವನಾತ್ಮಕವಾಗಿ ಮಾತನಾಡದಿರಿ.
* ಡ್ರೈವಿಂಗ್ ಮಾಡುತ್ತಿರುವುದಾಗಿ ಕರೆ ಮಾಡಿದವರಿಗೆ ತಿಳಿಸಿ. ಒಂದ್ನಿಮಿಷ ಹೋಲ್ಡ್ ಮಾಡಿಟ್ಟುಕೊಳ್ಳಿ ಅಂತಲೂ ಹೇಳಬಹುದು.
* ವಾಹನ ಚಾಲನೆ ಮಾಡುತ್ತಿರುವಾಗ ನಂಬರ್ ಡಯಲ್ ಮಾಡಬೇಡಿ. ರಿಡಯಲ್ ಅಥವಾ ಸ್ಪೀಡ್ ಡಯಲ್ ಫೀಚರ್ ಬಳಕೆ ಮಾಡಿ.
* ಮೊಬೈಲ್ ಸಾಧನವನ್ನು ಕೈಗೆಟುಕುವ ಸ್ಥಳದಲ್ಲಿ ಇಡಿ. ಅಂದ್ರೆ ರಸ್ತೆಯ ಮೇಲಿನ ದೃಷ್ಟಿ ತೆಗೆಯದೇ ಮೊಬೈಲ್ ಕೈಗೆ ಸಿಗುವಂತಿರಲಿ.
* ವಾಹನ ಚಲಾಯಿಸುತ್ತಿರುವಾಗ ಮೊಬೈಲ್ ಸಂದೇಶಗಳನ್ನು ಓದಬೇಡಿ ಮತ್ತು ಬರೆಯಬೇಡಿ. ಅಷ್ಟು ಅಗತ್ಯವಿದ್ದರೆ ವಾಹನ ಬದಿಗೆ ನಿಲ್ಲಿಸಿ ಮೆಸೆಜ್ ಮಾಡಿ.
* ಸೆಲ್ ಫೋನ್ ನಲ್ಲಿ ವಾಯ್ಸ್ ಮೇಯ್ಲ್ ಆನ್ ಮಾಡಿಡಿ. ಇದರಿಂದ ಯಾವುದೇ ಕರೆಗಳು ಮಿಸ್ ಆಗೋ ಸಾಧ್ಯತೆಯಿಲ್ಲ.
* ಹ್ಯಾಂಡ್ಸ್ ಫ್ರೀ ಹೆಡ್ ಸೆಟ್ ಇರೋ ಮೊಬೈಲ್ ಬಳಸಿ. ಆದರೆ ನೆನಪಿಡಿ. ವಾಹನ ಸ್ಟಾರ್ಟ್ ಮಾಡೋ ಮುನ್ನ ಹೆಡ್ ಫೋನನ್ನು ಮೊಬೈಲ್ ಗೆ ಕನೆಕ್ಟ್ ಮಾಡಿದನ್ನು ಖಾತ್ರಿ ಪಡಿಸಿಕೊಂಡು ವಾಹನ ಚಲಾಯಿಸಿರಿ.
* ಎಲ್ಲಕ್ಕಿಂತ ಅತ್ಯುತ್ತಮ ಮಾರ್ಗವೆಂದರೆ ವಾಹನ ಚಲಾಯಿಸುವಾಗ ಮೊಬೈಲ್ ಸ್ವಿಚ್ ಆಫ್ ಮಾಡುವುದು.
ವಾಹನ ಚಲಾಯಿಸುವಾಗ ಇಂತಹ ಸಣ್ಣ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡರೆ ದೊಡ್ಡ ಅಪಾಯಗಳನ್ನು ತಪ್ಪಿಸಬಹುದು.
No comments:
Post a Comment