Saturday, July 16, 2011

ಸದೃಢ ಆರೋಗ್ಯಕ್ಕಾಗಿ ಹನ್ನೆರಡು ಸೂತ್ರಗಳು

ಆರೋಗ್ಯವೇ ಭಾಗ್ಯ. ನಾವು ಪ್ರತಿದಿನ ದುಡಿಯುವುದೇ ತಿನ್ನುವದಕ್ಕಾಗಿ. ಆರೋಗ್ಯ ಹಿತವಾಗಿಟ್ಟುಕೊಂಡಾಗ ಮಾತ್ರ ತಿನ್ನುವುದಕ್ಕಾಗಿ ದುಡಿಯಲು ಸಾಧ್ಯ ಎಂಬ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅನಾರೋಗ್ಯ ಬಂದಾಗ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವ ಬದಲು, ಆರೋಗ್ಯ ಕೆಡದಂತೆ ಜಾಗರೂಕತೆ ವಹಿಸುವುದು ಜಾಣತನ.

ಬೆಳಿಗ್ಗೆ ಎದ್ದು ರಾತ್ರಿ ನಿದ್ದೆಗೆ ಶರಣಾಗುವವರೆಗೆ ನಾನಾ ಕಾರ್ಯಗಳಲ್ಲಿ ನಾವು ನಿರತರಾಗಿರುತ್ತೇವೆ. ಸ್ನಾನ-ಉಪಹಾರ, ಕಚೇರಿ ಕೆಲಸ, ಸ್ನೇಹಿತರೊಡನೆ ಮಾತುಕತೆ, ಕಚೇರಿ ಕೆಲಸದ ನಡುವೆ ಕಾಫಿ ಬ್ರೆಕ್, ಬೈಕಲ್ಲಿ ಓಡಾಟ ಇತ್ಯಾದಿ. ದಿನದ ಕೊನೆ ಬಂದಾಗ ನಮ್ಮ ಜೀವನಶೈಲಿ ನಮ್ಮನ್ನು ಹಿಂಡಿ ಹಿಪ್ಪೆ ಮಾಡಿಬಿಟ್ಟಿರುತ್ತದೆ. ಸದ್ಯ ಊಟ ಮಾಡಿ ಹಾಸಿಗೆಗೆ ಮೈಯೊಡ್ಡಿದರೆ ಸಾಕಪ್ಪಾ ಸಾಕು ಎನ್ನುವಂತೆ.

ಈ ದಿನನಿತ್ಯದ ಚಟುವಟಿಕೆಗಳಲ್ಲಿ ಅನೇಕ ಸಣ್ಣಪುಟ್ಟ ವಿಷಯಗಳ ಬಗ್ಗೆ ಜಾಗರೂಕತೆ ವಹಿಸಿರುವುದೇ ಇಲ್ಲ. ಇಂಥದ್ದು ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ ಎಂದು ತಿಳಿದಿರುತ್ತದೆ. ಆದರೆ, ಆಚರಣೆಗೆ ತರಲು ಏನೋ ಬೇಸರ, ಆಲಸ್ಯತನ ಅಥವಾ ಸಮಯ ಇಲ್ಲದಿರುವುದು. ಕಾರಣಗಳೇನೇ ಇದ್ದರೂ, ಕೆಳಗೆ ನಮೂದಿಸಿರುವ ಸಂಗತಿಗಳನ್ನು ಗಮನದಲ್ಲಿಟ್ಟು ಜೀವನಕ್ರಮವನ್ನು ಬದಲಾಯಿಸಿಕೊಂಡರೆ ಉತ್ತಮ ಆರೋಗ್ಯ ನಮ್ಮದಾಗುತ್ತದೆ.

ಇವನ್ನು ನಿರ್ಲಕ್ಷಿಸಿದರೆ, ಅನಾರೋಗ್ಯ ಗ್ಯಾರಂಟಿ. ಅನವಶ್ಯಕ ಕಾರಣಗಳಿಗೆಲ್ಲ ದುಡಿದ ದುಡ್ಡನೆಲ್ಲ ವೈದ್ಯರಲ್ಲಿಗೆ ಸುರಿದು ಜೇಬನ್ನು ಬರಿದು ಮಾಡಿಕೊಂಡಿರುತ್ತೇವೆ. ಜೇಬು ಖಾಲಿಯಾಗುತ್ತದೆ ಅನ್ನುವುದಕ್ಕಿಂತ, ದಿವಿನಾದ ಆರೋಗ್ಯ ನಮ್ಮದಾಗುತ್ತದೆ. ಅದಕ್ಕೇ ಹೇಳುವುದು, 'Health is wealth' ಅಂತ.

1) ಮೊಬೈಲಿನಲ್ಲಿ ಅಥವಾ ದೂರವಾಣಿಯಲ್ಲಿ ಮಾತಾಡುವಾಗ ಎಡಗಿವಿಗೆ ರಿಸೀವರ್ ಹಿಡಿಯಿರಿ.

2) ದಿನದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಕಾಫಿ ಸೇವಿಸಬೇಡಿ.

3) ತಣ್ಣೀರಿನಲ್ಲಿ ಮಾತ್ರೆಗಳನ್ನು ನುಂಗಬೇಡಿ. ಉಗುರು ಬೆಚ್ಚಗೆ ನೀರಿನಲ್ಲಿ ತೆಗೆದುಕೊಳ್ಳಿ.

4) ಸಂಜೆ 5 ಗಂಟೆಯ ನಂತರ ಆಹಾರ ಹಿತಮಿತವಾಗಿರಲಿ. ವಿಪರೀತ ತಿನ್ನಬೇಡಿ.

5) ಅನಿಸಿದಾಗಲೆಲ್ಲ ಚಹಾ ಕುಡಿಯುವ ಚಟಕ್ಕೆ ಆದಷ್ಟು ಬೇಗ ಕಡಿವಾಣ ಹಾಕಿರಿ.

6) ಆಹಾರದಲ್ಲಿ ಎಣ್ಣೆಯ ಪ್ರಮಾಣ ತಗ್ಗಿಸಲು ಸಾಧ್ಯವಾದಷ್ಟು ಯತ್ನಿಸಿ.

7) ಬೆಳಗಿನ ಜಾವ ನೀರು ಹೆಚ್ಚು ಕುಡಿಯಿರಿ, ಮಲಗುವಾಗ ಕಡಿಮೆ ನೀರು ಕಡಿಮೆ ಕುಡಿಯಿರಿ.

8) ಮೊಬೈಲ್ ಚಾರ್ಜ್ ಮಾಡುತ್ತಿರುವಾಗ ಸಾಧ್ಯವಾದಷ್ಟು ದೂರ ಇರಿ.

9) ಹೆಡ್ ಫೋನ್ ಅಥವಾ ಇಯರ್ ಫೋನ್ ಜಾಸ್ತಿ ಹೊತ್ತು ಬಳಸಬೇಡಿ.

10) ಮಲಗುವ ಮುನ್ನ ಮಾತ್ರೆ ಸೇವಿಸಿದ ನಂತರ ಕೂಡಲೆ ಮಲಗಬೇಡಿ.

11) ರಾತ್ರಿ 10ರಿಂದ ಬೆಳಗಿನ 5 ಗಂಟೆಯ ಸಮಯ ಮಲಗಲು ಮೀಸಲಿಡಿ.

12) ಮೊಬೈಲ್ ಬ್ಯಾಟರಿ ಕಡಿಮೆಯಿದ್ದಾಗ ಹೆಚ್ಚು ಬಳಸಬೇಡಿ. ರೇಡಿಯೇಷನ್ 1000 ಪಟ್ಟು ಹೆಚ್ಚಿರುತ್ತದಂತೆ.

1 comment:

  1. thanks for the valuable info.. i ll try to manage all the listed things.. hope it works

    ReplyDelete