ಕಾಮಣ್ಣರ ಕಾಟ ತಡೆಗೆ 'ಎಸ್ ಎಂ ಎಸ್' ಸೇವೆ..!
ಕಾಮಣ್ಣರ ಮೇಲೆ ಕಣ್ಣಿಡಲು ಮತ್ತು ಅವರನ್ನು ವಶಕ್ಕೆ ತೆಗೆದುಕೊಳ್ಳಲು ಎಸ್ಎಂಎಸ್ ಜಾಗೃತಾ ಸೇವೆ ಆರಂಭಕ್ಕೆ ಕೇರಳ ಮಹಿಳಾ ಆಯೋಗವು ಸಜ್ಜಾಗಿದೆ.
ತಿರುವನಂತಪುರ (ಪಿಟಿಐ): ಕಾಮಣ್ಣರ ಮೇಲೆ ಕಣ್ಣಿಡಲು ಮತ್ತು ಅವರನ್ನು ವಶಕ್ಕೆ ತೆಗೆದುಕೊಳ್ಳಲು ಎಸ್ಎಂಎಸ್ ಜಾಗೃತಾ ಸೇವೆ ಆರಂಭಕ್ಕೆ ಕೇರಳ ಮಹಿಳಾ ಆಯೋಗವು ಸಜ್ಜಾಗಿದೆ.
ಈ ಸೇವೆಯ ಅಡಿಯಲ್ಲಿ ಮಹಿಳೆಯೊಬ್ಬರು ಕಾಮಣ್ಣರಿಂದ ಕಿರುಕುಳಕ್ಕೆ ಈಡಾದರೆ, ಆಕೆ ತನ್ನ ಮೊಬೈಲಿನಲ್ಲಿ 'ವನಿತಾ' ಎಂಬ ಪದವನ್ನಷ್ಟೇ ಟೈಪ್ ಮಾಡಿ ಸ್ವಲ್ಪ ಸ್ಥಳ ಬಿಟ್ಟು ಅದನ್ನು ಆಯೋಗದ ನಂಬರಿಗೆ ಕಳುಹಿಸಿದರೆ ಸಾಕು. ಈ ನಂಬರನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
ಈ ಪದ ಸಂಜ್ಞೆ ಸಿಕ್ಕಿದ ತತ್ ಕ್ಷಣವೇ ಮಹಿಳಾ ಆಯೋಗದಲ್ಲಿನ ನೆರವು ಘಟಕವು, ತೊಂದರೆಗೊಳಗಾದ ಮಹಿಳೆಯಿಂದ ಸಂದೇಶ ಬಂದ ಸ್ಥಳದ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು.
ಏನಿದ್ದರೂ ಇಂತಹ ಸಂದೇಶ ಬಂದಾಗ ಅದು ನೈಜವೇ ಅಲ್ಲವೇ ಎಂಬುದನ್ನು ಖಾತರಿ ಮಾಡಿಕೊಳ್ಳಲು ಪ್ರಾಥಮಿಕ ಪರಿಶೀಲನೆ ಮಾಡಲಾಗುವುದು ಎಂದು ಆಯೋಗದ ಕಾರ್ಯದರ್ಶಿ ವಿ.ಪಿ. ರಾಮಚಂದ್ರನ್ ಪಿಟಿಐಗೆ ತಿಳಿಸಿದರು.
ಪ್ರಸ್ತಾವದ ಒಳಿತು- ಕೆಡುಕುಗಳ ಬಗ್ಗೆ ನಾವು ಪರಿಶೀಲಿಸಿದ್ದೇವೆ ಮತ್ತು ಐಟಿ ವಿಭಾಗದ ಅನುಮತಿಗಾಗಿ ಸರ್ಕಾರಕ್ಕೆ ಕಳುಹಿಸಿದ್ದೇವೆ. ಬಿಎಸ್ಎನ್ ಎಲ್ ನಂತಹ ಮೊಬೈಲ್ ಸೇವೆ ಒದಗಿಸುವ ಸಂಸ್ಥೆಗಳ ಜೊತೆಗೂ ಮಾತುಕತೆ ನಡೆಸಲಾಗಿದೆ. ಈ ಮಾಸಾಂತ್ಯಕ್ಕೆ ಈ ಯೋಜನೆ ಕಾರ್ಯಗತಗೊಳ್ಳಬಹುದು ಎಂದು ಅವರು
No comments:
Post a Comment