Wednesday, February 6, 2013

ವಿಶ್ವದ ಅತಿ ಉದ್ದದ ಬೆಕ್ಕು ಸಾವನ್ನಪ್ಪಿದೆ.


ಲಾಸ್ ಏಂಜಲೀಸ್: ವಿಶ್ವದ ಅತಿ ಉದ್ದದ ಬೆಕ್ಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಎಂಟು ವರ್ಷ ವಯಸ್ಸಿನ `ಸ್ಟಿವಿ' ರೆನೊ ಸಾವನ್ನಪ್ಪಿದೆ. ಮೂಗಿನಿಂದ ಬಾಲದವರೆಗೆ ನಾಲ್ಕು ಅಡಿ ಉದ್ದವಿದ್ದ (48.5 ಅಂಗುಲ) ಮಾರ್ಜಾಲವನ್ನು ಗಿನ್ನಿಸ್ ವಿಶ್ವ ದಾಖಲೆಯು 2010ರಲ್ಲಿ ವಿಶ್ವದ ಅತಿ ಉದ್ದದ ಬೆಕ್ಕು ಎಂದು ಘೋಷಿಸಿತ್ತು. 2011ರಲ್ಲಿ ಉದ್ದ ಬಾಲ ಹೊಂದಿರುವ ಬೆಕ್ಕು ಎಂಬ ಕೀರ್ತಿಗೂ ಇದು ಪಾತ್ರವಾಗಿತ್ತು.

Tuesday, November 13, 2012

ಬರಿ ಗಾಳಿಯಿಂದಲೇ ಸಂಚರಿಸುವ ಬೈಕ್?


ಸುದ್ದಿ ಆಲಿಸುವಾಗಲೇ ನಿಮ್ಮಲ್ಲಿ ಅಚ್ಚರಿ ಮೂಡಿರಬಹುದು. ಬರಿ ಗಾಳಿಯ ಸಹಾಯದಿಂದಲೇ ಚಲಿಸುವ ಇದು. ನೀರ್ಮಾಣವಾಗಿರುವುದು ಆಸ್ಟ್ರೇಲಿಯಾದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಇಂತಹದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಕಂಪ್ರೆಸ್ಡ್ ಏರ್ ಟ್ಯಾಂಕ್ ಬೆಂಬಲದೊಂದಿಗೆ ಚಾಲಿತವಾಗಲಿರುವ ಈ ಒ2 ಪರ್ಸ್ಯೂಟ್ 100 ಕಿಲೋ ಮೀಟರ್ ತನಕ ಚಲಿಸಲಿದೆ. ಅಲ್ಲದೆ ಗಂಟೆಗೆ ಗರಿಷ್ಠ 100 ಕಿಲೋ ಮೀಟರ್ ವೇಗವನ್ನು ಒದಗಿಸಲಿದೆ.

 

Monday, November 12, 2012

ಸಂತೋಷವಾಗಿದ್ದರೆ ಈ 6 ಕಾಯಿಲೆ ಹತ್ತಿರ ಸುಳಿಯುವುದಿಲ್ಲ ಯಾವುದೇ ಸಮಸ್ಯೆಗಳಿಗೆ ಪರಿಹಾರ ಇದ್ದೇ ಇರುತ್ತದೆ.


ದುಃಖ ಅನ್ನುವುದು ಬರೀ ಮಾನಸಿಕವಾಗಿ ಮಾತ್ರವಲ್ಲ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಚಿಂತೆ ಚಿತೆಗ ದಾರಿ ಎಂದು ಹೇಳುವುದನ್ನು ನೀವು ಕೇಳಿರಬಹುದು. ಆದ್ದರಿಂದಲೇ ತುಂಬಾ ಚಿಂತೆ ಮಾಡಬೇಡಿ, ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ ಎಂದು ವೈದ್ಯರು ಹೇಳುತ್ತಾರೆ. ಪ್ರತಿದಿನ ನೀವೂ ಸಂತೋಷದಿಂದ ದಿನವನ್ನು ಕಳೆಯುವುದಾದರೆ ಕೆಲವೊಂದು ಕಾಯಿಲೆಗಳು ನಿಮ್ಮ ಹತ್ತಿರಕ್ಕೇ ಸುಳಿಯುವುದಿಲ್ಲ. ಇಷ್ಟೆಲ್ಲಾ ಒತ್ತಡಗಳ ನಡುವೆ ಸಂತೋಷದಿಂದ ಇರಲು ಹೇಗೆ ಸಾಧ್ಯ ಎಂದು ನೀವು ಕೇಳಬಹುದು? ಸಂತೋಷದಿಂದ ಇರಲು ಪ್ರಯತ್ನಿಸಿದರೆ ಸಂತೋಷದ ಬದುಕು ನಿಮ್ಮದಾಗುವುದು. ಸಂತೋಷದಿಂದ ಇದ್ದರೆ ಯಾವುದೆಲ್ಲಾ ಕಾಯಿಲೆಗಳಿಗೆ ಗುಡ್ ಬೈ ಹೇಳಬಹುದು ಎಂದು ನೋಡೋಣ ಬನ್ನಿ.

1. ಒತ್ತಡದ ಹಾರ್ಮೋನ್ ಗಳನ್ನು ಕಡಿಮೆ ಮಾಡುತ್ತದೆ: ಬೆಳಗ್ಗೆ ಎದ್ದು ನಗುವ ವ್ಯಾಯಾಮ ಮಾಡಿದರೆ ಒತ್ತಡದ ಹಾರ್ಮೋನ್ ಗಳು ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಅಲ್ಲದೆ ರೀತಿ ಮಾಡಿದರೆ ದಿನಪೂರ್ತಿ ಸಂತೋಷದಿಂದ ಇರಬಹುದು.

2. ತಲೆನೋವು ಕಡಿಮೆಯಾಗುತ್ತದೆ: ಕೆಲವರಿಗೆ ದಿನವೂ ತಲೆನೋವು ಕಾಣಿಸಿಕೊಳುತ್ತದೆ. ರೀತಿ ಒತ್ತಡದಿಂದಾಗಿ ಉಂಟಾಗುತ್ತದೆ. ಇಂತಹವರು ಒತ್ತಡವನ್ನು ಮರೆತು ಸಂತೋಷದಿಂದ ಇರಲು ಪ್ರಯತ್ನಿಸಿದರೆ ತಲೆನೋವು ಕಡಿಮೆಯಾಗುವುದು.

3. ಮೈಕೈ ನೋವು ಬರುವುದಿಲ್ಲ: ಸಂತೋಷದಿಂದ ಇರುವ ವ್ಯಕ್ತಿಗಳಿಗೆ ಮೈಕೈ ನೋವು ಕಾಣಿಸಿಕೊಳ್ಳುವುದಿಲ್ಲ. ಒತ್ತಡವಿದ್ದರೆ ಮೈಕೈ ನೋವು, ಸುಸ್ತು ಕಾಣಿಸಿಕೊಳ್ಳುವುದು.

4. ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಹೃದಯಾಘಾತ ಮಾನಸಿಕ ಒತ್ತಡದಿಂದಾಗಿ ಉಂಟಾಗುತ್ತದೆ. ಆದ್ದರಿಂದ ಚಿಂತೆ ಹಾಗೂ ಒತ್ತಡದಿಂದ ಮುಕ್ತರಾಗಿಲು ಪ್ರಯತ್ನಿಸಬೇಕು.

5. ತಲೆಸುತ್ತು ಬರುವುದಿಲ್ಲ: ಸ್ನಾಯುಗಳು ಬಿಗಿದುಕೊಂಡು ಕೆಲಸ ಮಾಡದಿದ್ದಾಗ ತಲೆನೋವು ಕಾಣಿಸಿಕೊಳ್ಳುತ್ತದೆ. ಸಂತೋಷದಿಂದ ಇದ್ದರೆ ಸ್ನಾಯುಗಳು ಸಡಿಲವಾಗುತ್ತದೆ ಮತ್ತೆ ತಲೆನೋವು ಕಾಣಿಸಿಕೊಳ್ಳುದಿಲ್ಲ.

6. ಆಯುಸ್ಸು ಹೆಚ್ಚು: ಸಂತೋಷವಾಗಿ ಇರುವವರು ಆರೋಗ್ಯವಂತರಾಗಿ ಇರುತ್ತಾರೆ. ಇದರಿಂದ ಆಯುಸ್ಸು ಕೂಡ ಹೆಚ್ಚುವುದು.

 

 

 

 

 

Friday, July 20, 2012

"ರಾಜೇಶ್ ಖನ್ನಾ" ಚಿತೆ ಆರುವ ಮುನ್ನವೇ ಗೆಳತಿಯ ನೋಟೀಸು.



ಬಾಲಿವುಡ್ ಸೂಪರ್ ಸ್ಟಾರ್ ರಾಜೇಶ್ ಖನ್ನಾ ವಿಧಿವಶರಾದ ಬಳಿಕ ಅವರ ಕೊನೆಯಾಸೆಯಂತೆ ಅವರ 'ಆಶೀರ್ವಾದ್' ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡಲಾಗುತ್ತಿದೆ. ಪಶ್ಚಿಮ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ಸಮುದ್ರಾಭಿಮುಖವಾಗಿ ಈ ಬಂಗಲೆ ಇದೆ.
ತನ್ನ ನಿಧನದ ನಂತರ ಈ ಬಂಗಲೆ ವಸ್ತುಸಂಗ್ರಹಾಲಯವಾಗಬೇಕು ಎಂದು ಖನ್ನಾ ಬಯಸಿದ್ದರು. ಗುರುವಾರವಷ್ಟೇ ಅವರ (ಜು.19) ಅಂತ್ಯಕ್ರಿಯೆ ನೆರವೇರಿತು. ಇನ್ನೂ ಅವರ ಚಿತೆ ಆರಿಲ್ಲ, ಅಷ್ಟರಲ್ಲಾಗಲೇ ಖನ್ನಾ ಜೊತೆಗೆ ಲಿವ್ ಇನ್ ಸಂಬಂಧ ಇಟ್ಟುಕೊಂಡಿದ್ದ 'ಮುಸ್ಸಂಜೆ' ಗೆಳೆತಿ ಲೀಗಲ್ ನೋಟೀಸು ರವಾನಿಸಿದ್ದಾರೆ.
ರಾಜೇಶ್ ಖನ್ನಾ ಬಾಳಿ ಬದುಕಿದ 'ಆಶೀರ್ವಾದ್' ಬಂಗಲೆ ತನಗೆ ಸೇರಬೇಕಾದದ್ದು ಎಂದು ಅನಿತಾ ಅದ್ವಾನಿ ಎಂಬುವವರು ಲೀಗಲ್ ನೋಟೀಸ್ ಜಾರಿ ಮಾಡಿದ್ದಾರೆ. ಖನ್ನಾ ಕಾಕಾ ಅವರ ಸಂಧ್ಯಾಕಾಲದಲ್ಲಿ ಅವರ ಜೊತೆಗಿದ್ದು ಕೊನೆಯ ಕಾಲದಲ್ಲಿ ಅವರಿಗೆ ಆಸರೆಯಾಗಿದ್ದರು ಅನಿತಾ.
ಕೌಟಂಬಿಕ ದೌರ್ಜನ್ಯ ಕಾಯಿದೆ ಪ್ರಕಾರ ಖನ್ನಾ ಕುಟುಂಬಿಕರಿಗೆ ಲೀಗಲ್ ನೋಟೀಸ್ ಜಾರಿ ಮಾಡಿದ್ದಾರೆ. ಕಳೆದ ಒಂದು ತಿಂಗಳಿಂದ ಅನಿತಾರನ್ನು ಆಶೀರ್ವಾದ ಬಂಗಲೆಯಿಂದ ಹೊರದಬ್ಬಲು ಖನ್ನಾ ಕುಟುಂಬಿಕರು ಕಿರುಕುಳ ನೀಡುತ್ತಿದ್ದರು ಎಂಬ ಸುದ್ದಿಯೂ ಇದೆ.
ಕಳೆದ ಎಂಟು ವರ್ಷಗಳಿಂದ ಖನ್ನಾ ಅವರೊಂದಿಗೆ ಅನಿತಾ ಅದ್ವಾನಿ ಸಹ ಬಾಳ್ವೆ ನಡೆಸುತ್ತಿದ್ದರು. ಹಾಗಾಗಿ ಈ ಮನೆಯ ಮೇಲೆ ತಮಗೂ ಹಕ್ಕಿದೆ ಎಂದು ಮೃದುಲಾ ಕದಮ್ ಎಂಬ ವಕೀಲರಿಂದ ಖನ್ನಾ ಕುಟುಂಬಿಕರಿಗೆ ಲೀಗಲ್ ನೋಟೀಸ್ ಕಳುಹಿಸಿದ್ದಾರೆ.
ಖನ್ನಾ ಕುಟುಂಬಿಕರು ಹಾಗೂ ಅನಿತಾ ನಡುವೆ ಮುಸುಕಿನ ಗುದ್ದಾಟ ಬಹಳ ದಿನಗಳಿಂದಲೂ ನಡೆಯುತ್ತಿತ್ತಂತೆ. ಮೊನ್ನೆ ಅವರ ನಿಧನದ ಬಳಿಕ ಈ ಕುಟುಂಬ ಕಲಹ ಬೀದಿಗೆ ಬಿದ್ದಿದೆ. ಆಗಲೇ ಖನ್ನಾ ಹಾಗೂ ಈಕೆಯ ನಡುವಿನ ಸಂಬಂಧ ಜಗಜ್ಜಾಹೀರಾಗಿತ್ತು.
ಸಾಕಷ್ಟು ದಿನ ಖನ್ನಾ ಅವರಿಂದ ದೂರವಿದ್ದ ಡಿಂಪಲ್ ಕಪಾಡಿಯಾ, ಅಕ್ಷಯ್ ಕುಮಾರ್, ಟ್ವಿಂಕಲ್ ಹಾಗೂ ರಿಂಕಿ ಅವರು ಖನ್ನಾ ಅವರ ಕೊನೆಯ ದಿನಗಳಲ್ಲಿ ಅವರಿಗೆ ಹತ್ತಿರವಾಗಿದ್ದರು. ಕಳೆದ ಹತ್ತು ವರ್ಷಗಳಿಂದ ತಾವು ಈ ಮನೆಯಲ್ಲಿದ್ದೇನೆ ಎಂದಿರುವ ಅನಿತಾ, ತಮ್ಮ ಕೊನೆ ದಿನಗಳಲ್ಲಿ 'ಕಾಕಾಜಿ' ಅವರು ಸ್ಮರಣಶಕ್ತಿ ಶಕ್ತಿ ಕಳೆದುಕೊಂಡಿದ್ದರು.
ಒಮ್ಮೊಮ್ಮೆ ನನ್ನನೂ ಗುರುತು ಹಿಡಿಯುತ್ತಿರಲಿಲ್ಲ. ಅವರ ಮನೆಯವರು ಬಂದರೆ ಅವರನ್ನು ಹೊರಗೆ ತಳ್ಳುತ್ತಿದ್ದರು. ಅವರ ಕುಟುಂಬದವರೊಂದಿಗೂ ಮಾತನಾಡುತ್ತಿರಲಿಲ್ಲ. ಕಡೆ ದಿನಗಳಲ್ಲಿ ನನನ್ನೂ ದೂರ ಮಾಡುತ್ತಿದ್ದರು. ಈಗ ಅವರಿಲ್ಲದ ನೋವು ನನ್ನನ್ನು ತೀವ್ರವಾಗಿ ಬಾಧಿಸುತ್ತಿದೆ. ಈಗ ಅವರಿಲ್ಲ. ನಾನು ಎಲ್ಲಿಗೆ ಹೋಗಲಿ? ಎಂದು 'ಮಿಡ್ ಡೇ' ಪತ್ರಿಕೆ ಜೊತೆಗೆ ಅನಿತಾ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

Friday, June 22, 2012

ರಾಯಲ್ ಎನ್ ಫೀಲ್ಡ್ ಬೈಕ್ ಭಾರತಕ್ಕೆ ಬಂದದ್ದು ಹೀಗೆ.


ರಾಯಲ್ ಎನ್ ಫೀಲ್ಡ್ ಬೈಕ್ ಇಷ್ಟವಾಗಲು ಎಷ್ಟು ಕಾರಣವಾದರೂ ಕೊಡಬಹುದು. ಅದರ ಸದ್ದು, ರಾಜಗಾಂಭಿರ್ಯ, ಗತ್ತು, ವಿನ್ಯಾಸ, ಬೃಹತ್ ಆಕೃತಿ ಎಲ್ಲವೂ ಎಲ್ಲರಿಗೂ ಇಷ್ಟ. ಇದೇ ಕಾರಣಕ್ಕೆ ಹೆಚ್ಚಿನವರಿಗೆ ಬುಲೆಟ್ ಅಂದ್ರೆ ಪಂಚ ಪ್ರಾಣ. ಈಗ ಭಾರತದಲ್ಲಿ ಹತ್ತು ಹಲವು ವಿನೂತನ ಮಾದರಿಗಳ ಎನ್ ಫೀಲ್ಡ್ ಬೈಕ್ ಗಳು ದೊರಕುತ್ತಿವೆ. ಆದರೆ ಈ ಬುಲೆಟ್ ಭಾರತಕ್ಕೆ ಬಂದದ್ದು ಎಲ್ಲ ಬೈಕ್ ಗಳಂತೆ ಅಲ್ಲ!

ಭಾರತಕ್ಕೆ ಎನ್ ಫೀಲ್ಡ್ ರಾಜಗತ್ತಿನಿಂದ ಬಂದಿತ್ತು. ಸ್ವಾತಂತ್ರ್ಯ ಸಿಕ್ಕ ನಂತರ 1955ರ ಸಮಯದಲ್ಲಿ ಭಾರತ ಸರಕಾರ ಪೋಲಿಸ್ ಮತ್ತು ಸೇನಾ ಅವಶ್ಯಕತೆಗೆ ಸೂಕ್ತವಾದ ಬೈಕೊಂದರ ಹುಡುಕಾಟದಲ್ಲಿತ್ತು. ಆಗ ದೇಶದ ಕಣ್ಣಿಗೆ ಬಿದ್ದದ್ದು ಇಂಗ್ಲೆಂಡ್ ನ ಎನ್ ಫೀಲ್ಡ್. ಗಡಿಯಲ್ಲಿ ಸೈನಿಕರು ಪಹರೆ ಕಾಯಲು, ಸೇನಾ ಅವಶ್ಯಕತೆಗೆ ಸೂಕ್ತವಾಗಿತ್ತು ಈ ಬುಲೆಟ್.  ಅದಕ್ಕಾಗಿ ಭಾರತ 500ಸಿಸಿ ಸಾಮರ್ಥ್ಯದ ಸುಮಾರು 800 ಬುಲೆಟ್ ಗಳಿಗೆ ಆರ್ಡರ್ ಮಾಡಿತ್ತು. ಹೀಗೆ ಸೈನಿಕ ಅವಶ್ಯಕತೆಗಾಗಿ ಬುಲೆಟ್ ಭಾರತಕ್ಕೆ ಪ್ರವೇಶಿಸಿತ್ತು.

ಆದರೆ ಮತ್ತೆ ಭಾರತ ಇನ್ನಷ್ಟು ಬುಲೆಟ್ ಬೈಕ್ ಬೇಕೆಂದು ಆರ್ಡರ್ ಮಾಡಿತ್ತು. ಭಾರತದ ಬೇಡಿಕೆಯನ್ನು ಪೂರೈಸುವುದು ಕಷ್ಟ ಎಂಬುದನ್ನು ಮನಗಂಡ
ಕಂಪನಿ ಭಾರತದಲ್ಲಿಯೇ ಉತ್ಪಾದಿಸುವ ಆಶಯ ವ್ಯಕ್ತಪಡಿಸಿತ್ತು. ಇದಕ್ಕೆ ಭಾರತದಿಂದ ಒಪ್ಪಿಗೆ ದೊರಕಿತು. ಪರಿಣಾಮವಾಗಿ ಮದ್ರಾಸ್ ಮೋಟರ್ ನೊಂದಿಗಿನ ಸಹಭಾಗಿತ್ವದಲ್ಲಿ ಎನ್ ಫೀಲ್ಡ್ ಇಂಡಿಯಾ ಎಂಬ ಕಂಪನಿ ಆರಂಭಿಸಿತ್ತು. ಭಾರತದ ಕಂಪನಿಗೆ ರಾಯಲ್ ಎನ್ ಫೀಲ್ಡ್ ಎಂಬ ಹೆಸರು ಬಳಕೆ ಮಾಡುವ ಹಕ್ಕು ದೊರಕಿದ್ದು 1995ರಲ್ಲಿ. ಹೀಗೆ 350 ಸಿಸಿ ಬೈಕ್ ಗಳಿಗೆ ಪರವಾನಿಗೆ ಪಡೆದು ಭಾರತದಲ್ಲಿ ಕಂಪನಿ ಉತ್ಪಾದನೆ ಆರಂಭಿಸಿ ದೇಶದ ರಸ್ತೆಯ ರಾಜನಾಗಿ ಮೆರೆಯಿತು. ಮತ್ತೆ ಈ ರಾಜಾ ಬೈಕ್ ಹಿಂತುರುಗಿ ನೋಡಲೇ ಇಲ್ಲ. ಇಂದಿನವರೆಗೂ ಒಂದಿಷ್ಟು ಗಾಂಭಿರ್ಯ ಕಳೆದುಕೊಳ್ಳದೇ ರೈಡ್ ಮಾಡುತ್ತಲೇ ಇದೆ.


Saturday, May 26, 2012

15 ಸಚಿವರ ವಿರುದ್ಧ ಮೊದ್ಲು ಕ್ರಮ ಕೈಗೊಳ್ಳಿ:ಪ್ರಧಾನಿಗೆ ಅಣ್ಣಾ ಟೀಮ್

ಆಡಳಿತಾರೂಢ ಯುಪಿಎ ಸರ್ಕಾರದಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ 15ಮಂದಿ ಸಚಿವರ ವಿರುದ್ಧ ಪ್ರತ್ಯೇಕ ತನಿಖಾ ಏಜೆನ್ಸಿಯಿಂದ ತನಿಖೆ ನಡೆಸಬೇಕೆಂದು' ಅಣ್ಣಾ ತಂಡದ ಪ್ರಮುಖ ಸದಸ್ಯ ಅರವಿಂದ ಕೇಜ್ರಿವಾಲ್ ಶನಿವಾರ ಆಗ್ರಹಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ 15 ಸಚಿವರ ವಿರುದ್ಧ ಪ್ರತ್ಯೇಕ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಅಣ್ಣಾ ತಂಡ ಪತ್ರ ಬರೆದು ಮನವಿ ಮಾಡಿಕೊಂಡಿರುವುದಾಗಿ ವಿವರಿಸಿದರು.ಪತ್ರದಲ್ಲಿ 15 ಮಂದಿ ಸಚಿವರ ಹೆಸರನ್ನೂ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ ತನಿಖಾ ತಂಡ ರಚಿಸಲು ಆರು ಮಂದಿ ನ್ಯಾಯಾಧೀಶರ ಹೆಸರನ್ನೂ ಕೂಡ ನಮೂದಿಸಲಾಗಿದೆ. ಅದರಲ್ಲಿ ಸರ್ಕಾರ ಯಾರನ್ನ ಬೇಕಾದರೂ ಮುಖ್ಯಸ್ಥರನ್ನಾಗಿ ಮಾಡಿ ಸಮಿತಿ ರಚಿಸಲಿ ಎಂದು ಕೇಜ್ರಿವಾಲ್ ಹೇಳಿದರು.ಎಲ್ಲಿಯವರೆಗೆ ಈ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಪ್ರಬಲ ಲೋಕಪಾಲ್ ಮಸೂದೆ ಜಾರಿಯಾಗಲು ಸಾಧ್ಯವಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದರು.ನಾವು ಸ್ವತಂತ್ರ ತನಿಖಾ ಏಜೆನ್ಸಿಗಾಗಿ ಒತ್ತಾಯಿಸುತ್ತಿದ್ದೇವೆ. ಯಾಕೆಂದರೆ ಸಿಬಿಐ ಅಥವಾ ಆದಾಯ ತೆರಿಗೆ ಇಲಾಖೆಯಂತಹವು ನೇರವಾಗಿ ರಾಜಕಾರಣಿಗಳ ಹಿಡಿತದಲ್ಲಿದೆ. ಹಾಗಾಗಿ ಸಚಿವರ ವಿರುದ್ಧದ ತನಿಖೆಯಲ್ಲಿ ಈ ಸಂಸ್ಥೆಗಳಿಂದ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಿಲ್ಲ ಎಂದರು.




'

Sunday, May 20, 2012

ನಾನು ಹಿರೇಮಠ್ರರನು ನೋಡಿದ್ದು ಸುಮಾರು ಮೂವತ್ತು ವರ್ಷಗಳ ಹಿಂದೆ ಪಶ್ಚಿಮ ಘಟ್ಟ ಉಳಿಸಿ ಜಾತಾದಲ್ಲಿ ಅವರ ಹೋರಾಟದ ಬದುಕುನು ಕಣ್ಣಾರೆ ಕಂಡವನು ನಾನು, ಆ ಜಾತಾದಲ್ಲಿ ಬಾಗವಹಿಸಿದ ಹೆಮ್ಮೆ ನನಗೆ ಆಗ ನಾನು ರಾಣಿಬೇನ್ನೂರು R T E S ಕಾಲೇಜಿನಲ್ಲಿ ಓದುತ್ತಿದ್ದೇ ಅವರು ಮೆಡ್ಲೆರೀ ಗ್ರಾಮದಲ್ಲಿ ಬಹಳಷ್ಟು ಸುಧಾರಣಿ ತರುವಲ್ಲಿ ಯಶಸ್ವಿಯಾಗಿದ್ದರು. ಆಮೇಲೆ ಹಿರೇಮಠ್ರರನು ನೋಡಿದ್ದು ಇತ್ತೀಚಿನ ದಿನಗಳಲ್ಲಿ.

ಹಿರೇಮಠ್: ಗಣಿಗಾರಿಕೆ ವಿರುದ್ಧ ಗಟ್ಟಿ ಧ್ವನಿ ಎತ್ತಿರುವ ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ತೊಡರುಗಲ್ಲಾಗಿ, ಭ್ರಷ್ಟಾಚಾರದ ವಿರುದ್ಧ ನಾಡಿನ ಪ್ರಜ್ಞಾವಂತರ ಸಾಕ್ಷಿಪ್ರಜ್ಞೆಯಾಗಿರುವ ಈ ಹಿರೇಮಠ್ ಅದೇ ಹುಬ್ಬಳ್ಳಿ-ಧಾರವಾಡದಲ್ಲಿರುವ ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷರು, ಅವರು ಸಂಗಯ್ಯ ರಾಚಯ್ಯ ಹಿರೇಮಠ್, ಅದೇ ಕಣ್ರಿ ಎಸ್ ಆರ್ ಹಿರೇಮಠ್. ಜನಾರ್ದನ ರೆಡ್ಡಿ ಸೇರಿದಂತೆ ಇನ್ನಿತರೆ ಅಕ್ರಮ ಗಣಿವೀರರು ಕೊರೆದಿಟ್ಟಿರುವ ಗಣಿ ಪಾತಾಳದಿಂದಲೇ ಅಕ್ರಮ ಗಣಿಗಾರಿಕೆ ವಿರುದ್ಧ ಗಟ್ಟಿ ಧ್ವನಿ ಎತ್ತಿರುವ ಸಾದಾಸೀದಾ ಮನುಷ್ಯ ಈ ಹಿರೇಮಠ್. ಹಿರೇಮಠ್ ಹುಟ್ಟು ಧಾರವಾಡದ ಬೆಳವಂಕಿಯಲ್ಲಿ 1944ರಲ್ಲಿ. ಶಿಕ್ಷಣ- ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರ. ಉನ್ನತ ವ್ಯಾಸಂಗ - 1969ರಲ್ಲಿ ಅಮೆರಿಕದಲ್ಲಿ ಎಂಎಸ್ ಜತೆಗೆ, ಎಂಬಿಎ. 10 ವರ್ಷಗಳ ಕಾಲ ಅಮೆರಿಕದಲ್ಲಿಯೇ ಸೇವೆ. ಆ ನಂತರ ತಾಯ್ನಾಡಿನ ಸೇವೆಗೆ ಮರಳಿದ ಹಿರೇಮಠ್, 1984ರಲ್ಲಿ ಧಾರವಾಡದಲ್ಲಿ 'ಸಮಾಜ ಪರಿವರ್ತನಾ ಸಮುದಾಯ'ವನ್ನು ಹುಟ್ಟುಹಾಕಿದರು. ತನ್ಮೂಲಕ ಪರಿಸರ, ಪಂಚಾಯತ್ ರಾಜ್ ಕ್ಷೇತ್ರಗಳಲ್ಲಿ ಹೋರಾಟ. ಅದಕ್ಕಾಗಿ, 1992ರಲ್ಲಿ ಇಂದಿರಾಗಾಂಧಿ ಪರ್ಯಾವರಣ ಪುರಸ್ಕಾರ ಮುಕುಟ. ಇದೀಗ ನಿಮಗೆಲ್ಲ ಗೊತ್ತಿರುವಂತೆ 'ಮೈನಿಂಗ್ ಮಾಫಿಯಾ' ವಿರುದ್ಧ ಅವರದು ಸುಪ್ರೀಂ ಹೋರಾಟ.