Saturday, May 26, 2012

15 ಸಚಿವರ ವಿರುದ್ಧ ಮೊದ್ಲು ಕ್ರಮ ಕೈಗೊಳ್ಳಿ:ಪ್ರಧಾನಿಗೆ ಅಣ್ಣಾ ಟೀಮ್

ಆಡಳಿತಾರೂಢ ಯುಪಿಎ ಸರ್ಕಾರದಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ 15ಮಂದಿ ಸಚಿವರ ವಿರುದ್ಧ ಪ್ರತ್ಯೇಕ ತನಿಖಾ ಏಜೆನ್ಸಿಯಿಂದ ತನಿಖೆ ನಡೆಸಬೇಕೆಂದು' ಅಣ್ಣಾ ತಂಡದ ಪ್ರಮುಖ ಸದಸ್ಯ ಅರವಿಂದ ಕೇಜ್ರಿವಾಲ್ ಶನಿವಾರ ಆಗ್ರಹಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ 15 ಸಚಿವರ ವಿರುದ್ಧ ಪ್ರತ್ಯೇಕ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಅಣ್ಣಾ ತಂಡ ಪತ್ರ ಬರೆದು ಮನವಿ ಮಾಡಿಕೊಂಡಿರುವುದಾಗಿ ವಿವರಿಸಿದರು.ಪತ್ರದಲ್ಲಿ 15 ಮಂದಿ ಸಚಿವರ ಹೆಸರನ್ನೂ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ ತನಿಖಾ ತಂಡ ರಚಿಸಲು ಆರು ಮಂದಿ ನ್ಯಾಯಾಧೀಶರ ಹೆಸರನ್ನೂ ಕೂಡ ನಮೂದಿಸಲಾಗಿದೆ. ಅದರಲ್ಲಿ ಸರ್ಕಾರ ಯಾರನ್ನ ಬೇಕಾದರೂ ಮುಖ್ಯಸ್ಥರನ್ನಾಗಿ ಮಾಡಿ ಸಮಿತಿ ರಚಿಸಲಿ ಎಂದು ಕೇಜ್ರಿವಾಲ್ ಹೇಳಿದರು.ಎಲ್ಲಿಯವರೆಗೆ ಈ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಪ್ರಬಲ ಲೋಕಪಾಲ್ ಮಸೂದೆ ಜಾರಿಯಾಗಲು ಸಾಧ್ಯವಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದರು.ನಾವು ಸ್ವತಂತ್ರ ತನಿಖಾ ಏಜೆನ್ಸಿಗಾಗಿ ಒತ್ತಾಯಿಸುತ್ತಿದ್ದೇವೆ. ಯಾಕೆಂದರೆ ಸಿಬಿಐ ಅಥವಾ ಆದಾಯ ತೆರಿಗೆ ಇಲಾಖೆಯಂತಹವು ನೇರವಾಗಿ ರಾಜಕಾರಣಿಗಳ ಹಿಡಿತದಲ್ಲಿದೆ. ಹಾಗಾಗಿ ಸಚಿವರ ವಿರುದ್ಧದ ತನಿಖೆಯಲ್ಲಿ ಈ ಸಂಸ್ಥೆಗಳಿಂದ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಿಲ್ಲ ಎಂದರು.




'

No comments:

Post a Comment