Monday, February 27, 2012

ನೀಲಿಚಿತ್ರ ನೀವು ನೋಡಿಲ್ಲವೆ? ಪತ್ರಕರ್ತರಿಗೆ ಯಡ್ಡಿ ಪ್ರಶ್ನೆ (ನಿನ್ನ ಮೊಮ್ಮಕ್ಕಳು ಇದೆ ಪ್ರಶ್ನೆ ಕೇಳಿದ್ದರೆ ಎನು ? ಉತ್ತರ ಕೊಡುತ್ತಿದ್ದಿ ಯಡಿಯೂರಪ್ಪ ನಾಚಿಕೆ ಆಗ್ಬೇಕು. ನಿನ್ನ

"ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರವನ್ನು ಶಾಸಕರು ನೋಡಿದ ಹಗರಣದ ಹಿಂದೆಯೇ ಏಕೆ ಬಿದ್ದಿದ್ದೀರಿ? ನೀವೇನು ಮನೆಯಲ್ಲಿ ಅಂತಹ ವಿಡಿಯೋಗಳನ್ನು ನೋಡುವುದಿಲ್ಲವೆ?" ಎಂದು ಪತ್ರಕರ್ತರನ್ನೇ ಪ್ರಶ್ನಿಸಿರುವುದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ! ವಿಧಾನಸಭೆಯಂಥ ಪವಿತ್ರ ಸ್ಥಳದಲ್ಲೇ ನೀಲಿ ಚಿತ್ರ ನೋಡಿದ ಕಳಂಕಿತ ಶಾಸಕರನ್ನು ಬಹಿರಂಗವಾಗಿ ಬೆಂಬಲಿಸಿರುವ ಯಡಿಯೂರಪ್ಪ ಅವರ ಪ್ರಶ್ನೆಗಳಿಗೆ ಮಾಧ್ಯಮದವರು ಮಾತ್ರವಲ್ಲ ವೇದಿಕೆಯ ಮೇಲೆ ಕುಳಿತಿದ್ದ ಗಣ್ಯರು ಕೂಡ ದಂಗಾದರು. ಯಡಿಯೂರಪ್ಪ ಇಂಥ ಹೇಳಿಕೆಯನ್ನು ನೀಡಿರುವುದು ಶಿವಮೊಗ್ಗದಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ. ವೇದಿಕೆಯ ಮೇಲೆ ಯಡಿಯೂರಪ್ಪನವರ ಅಕ್ಕಪಕ್ಕದಲ್ಲಿ ಮಗ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ನೂರಾರು ಸಾರ್ವಜನಿಕರ ನಡುವೆ ಹಲವಾರು ಹೆಂಗಳೆಯರೂ ಇದ್ದರು. ಆಗ ಮಾತನಾಡುತ್ತ, ಆವೇಶಕ್ಕೊಳಗಾದ ಯಡಿಯೂರಪ್ಪ ಮೇಲಿನಂತೆ ಪ್ರಶ್ನೆ ಹಾಕಿದ್ದಾರೆ. ನೀಲಿ ಚಿತ್ರ ಹಗರಣದಲ್ಲಿ ಸಿಕ್ಕಿಬಿದ್ದಿರುವ ಮೂವರು ಶಾಸಕರಾದ ಲಕ್ಷ್ಮಣ ಸವದಿ, ಸಿಸಿ ಪಾಟೀಲ ಮತ್ತು ಕೃಷ್ಣ ಜೆ. ಪಾಲೇಮಾರ್ ಅವರು ಯಡಿಯೂರಪ್ಪನವರ ಬೆಂಬಲಿಗರು. ಬಿಜೆಪಿ ಸರಕಾರ ರಾಜ್ಯದಲ್ಲಿ ಅನೇಕ ಉತ್ತಮ ಯೋಜನೆಗಳನ್ನು ಹಮ್ಮಿಕೊಂಡಿದೆ, ಅನೇಕ ಸಾಧನೆಗಳನ್ನು ಮಾಡಿದೆ. ಅವುಗಳ ಬಗ್ಗೆ ಬರೆಯುವುದು ಬಿಟ್ಟು ನೀಲಿ ಚಿತ್ರ ವೀಕ್ಷಣೆಯಂಥ ಕ್ಷುಲ್ಲಕ ವಿಷಯದ ಹಿಂದೆ ಏಕೆ ಬಿದ್ದಿದ್ದೀರಿ ಎಂದು ಯಡಿಯೂರಪ್ಪ ಕಿಡಿಕಾರಿದರು. ತಮ್ಮ ಬೆಂಬಲಿಗರು ಅಶ್ಲೀಲ ಚಿತ್ರ ವೀಕ್ಷಣೆಯ ಹಗರಣದಲ್ಲಿ ಸಿಲುಕಿರುವುದು ಮತ್ತು ಬಿಜೆಪಿ ಸರಕಾರ ಅವರ ಬೆಂಬಲಕ್ಕೆ ಬಾರದಿರುವುದು ಯಡಿಯೂರಪ್ಪನವರನ್ನು ಸಹಜವಾಗಿ ಮುಜುಗರಕ್ಕೆ ಈಡುಮಾಡಿದೆ.

(ನಿನ್ನ ಮೊಮ್ಮಕ್ಕಳು ಇದೆ ಪ್ರಶ್ನೆ ಕೇಳಿದ್ದರೆ ಎನು ? ಉತ್ತರ ಕೊಡುತ್ತಿದ್ದಿ ಯಡಿಯೂರಪ್ಪ ನಾಚಿಕೆ ಆಗ್ಬೇಕು. ನಿನ್ನ ಪಕ್ಕದಲ್ಲಿ ಇರೋ ಹಾಲಪ್ಪ, ರೇಣುಕಾಚಾರ್ಯ, ಲಕ್ಷ್ಮಣ ಸವದಿ, ಸಿಸಿ ಪಾಟೀಲ ಮತ್ತು ಕೃಷ್ಣ ಜೆ. ಪಾಲೇಮಾರ್ ಇವರನ್ನ ಸಮರ್ಥನೇ ಮಾಡುತ್ತಿರಲ್ಲ ಬುದ್ಧಿ ನೆಟ್ಟಗಿಲ್ಲವೆ ?)

No comments:

Post a Comment