Tuesday, September 20, 2011

( ಏನಕ್ಕೂ ಹುಷಾರು ರಾಮಣ್ಣ ಜಡದಾರು)ಭ್ರಷ್ಟಾಚಾರದ ಕಪ್ಪುಹಣದ ವಿರುದ್ಧ ಯಾತ್ರೆ



ಭ್ರಷ್ಟಾಚಾರ ಮತ್ತು ಕಪ್ಪು ಹಣ ಸ್ವದೇಶಕ್ಕೆ ಮರಳಿ ತರುವಂತೆ ಒತ್ತಾಯಿಸಿ ಯೋಗ ಗುರು ಬಾಬಾ ರಾಮದೇವ್, ಮಧ್ಯಪ್ರದೇಶದ ಝಾನ್ಸಿ ನಗರದಿಂದ 1 ಲಕ್ಷ ಕಿ.ಮೀ. ದೂರದ ಯಾತ್ರೆಯನ್ನು ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೇಶದಲ್ಲಿ ಪ್ರಾಮಾಣಿಕರು ಹಾಗೂ ದೇಶದ್ರೋಹಿ ಜನರಿದ್ದಾರೆ. ಪ್ರಾಮಾಣಿಕ ಜನರು ಭ್ರಷ್ಟಾಚಾರ ಮತ್ತು ಕಪ್ಪುಹಣ ವಿರುದ್ಧದ ತಮ್ಮ ಹೋರಾಟವನ್ನು ಬೆಂಬಲಿಸುತ್ತಿದ್ದಾರೆ ವಿದೇಶಿ ಬ್ಯಾಂಕ್ಗಳಲ್ಲಿರುವ ಭಾರತದ ಹಣವನ್ನು ದೇಶಕ್ಕೆ ಮರಳಿ ತರುವ ಸರಕಾರದ ಮೇಲೆ ಒತ್ತಡ ತರಲು, ಜನರಲ್ಲಿ ಜಾಗೃತಿಗಾಗಿ ಯಾತ್ರೆಯನ್ನು ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಗ್ವಾಲಿಯರ್ನಿಂದ ಆರಂಭವಾದ ಯಾತ್ರೆ 1ಲಕ್ಷ ಕಿ.ಮೀ.ದೂರವನ್ನು ಕ್ರಮಿಸಿ ಉತ್ತರ ಪ್ರದೇಶದ ಪ್ರಯಾಗ್ ಜಿಲ್ಲೆಯಲ್ಲಿ ಮುಕ್ತಾಯಗೊಳ್ಳಲಿದೆ ಎಂದು ರಾಮದೇವ್ ವಿವರಣೆ ನೀಡಿದ್ದಾರೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ ಪೊಲೀಸರು ಎಸಗಿದ ದೌರ್ಜನ್ಯ, ಯಾತ್ರೆಯಲ್ಲಿ ಪುನರಾವರ್ತನೆಯಾಗುವ ಸಾಧ್ಯತೆಗಳಿವೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಮಲೀಲಾ ಮೈದಾನದಲ್ಲಿ ಎಸಗಿದ ದೌರ್ಜನ್ಯಕ್ಕೆ ಸರಕಾರ ತಕ್ಕ ಪಾಠ ಕಲಿತಿದೆ. ಮತ್ತೊಂದು ಬಾರಿ ಇಂತಹ ಘಟನೆ ನಡೆಯುವುದಿಲ್ಲ ಎನ್ನುವ ನಂಬಿಕೆಯಿದೆ ಎಂದು ಹೇಳಿದ್ದಾರೆ.

No comments:

Post a Comment