
ಗಟ್ಟಿಮುಟ್ಟಾಗಿ, ಗುಂಡಗುಂಡಗೆ ಓಡಾಡುತ್ತಿದ್ದಂಥವರೆಲ್ಲ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕೆಲವರ ಹೃದಯದ ಬಡಿತ ಏರುಪೇರಾಗತೊಡುತ್ತಿದೆ. ಕಳ್ಳನಿಗೆ ಪಿಳ್ಳೆ ನೆವ ಎಂಬಂತೆ ಅಕ್ರಮ ಗಣಿಗಾರಿಕೆ, ಭೂ ಕಬಳಿಕೆ, ಡಿ-ನೋಟಿಫಿಕೇಷನ್ ಮುಂತಾದ ಹಗರಣಗಳಲ್ಲೆಲ್ಲ ಸಿಲುಕಿರುವ ಕೋಟೆ ಕಟ್ಟಿ ಮೆರೆದೋರೆಲ್ಲ ಬೆಚ್ಚಿಬಿದ್ದಿದ್ದಾರೆ. ಎಂತೆಂಥವರೆಲ್ಲ ಜೈಲು ಕಂಡಿದ್ದಾರೆ ಇನ್ನೂ ನೀನ್ಯಾವ ಲೆಕ್ಕ ಹೇಳು ಎಂಬಂತೆ
ಪ್ರತಿದಿನ ತಪ್ಪದೆ ಅರ್ಧ ಗಂಟೆ ವಾಕಿಂಗ್ ಮಾಡುವ ಯಡಿಯೂರಪ್ಪನವರಿಗೆ ಇದ್ದಕ್ಕಿದ್ದಂತೆ ಭಯಂಕರ ಜ್ವರ, ಮಧುಮೇಹದ ತೊಂದರೆ, ಇನ್ನೂ ಏನೇನೋ. ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಎದೆನೋವು, ಅಧಿಕ ರಕ್ತದೊತ್ತಡ ಮತ್ತು ಅವರ ಧರ್ಮಪತ್ನಿ ಅನಿತಾ ಅವರಿಗೆ ಕೆಂಡದಂಥ ಜ್ವರ, ಸಂಧಿವಾತ, ಸ್ಲಿಪ್ ಡಿಸ್ಕ್ ಇತ್ಯಾದಿ ಇತ್ಯಾದಿ. ಈಗಾಗಲೆ ಜೈಲಿನ ಮುದ್ದೆ ರುಚಿ ಕಂಡಿರುವ ಕಟ್ಟಾ ಸುಬ್ರಮಣ್ಯ ನಾಯ್ಡುವಿಗೆ ರಕ್ತ ಬೇಧಿ, ಕುತ್ತಿಗೆಗೆ ಆಪರೇಷನ್.
these all are theees markhan... 420*3
ReplyDelete