ಮಧುಮೇಹದಿಂದ ಮೂತ್ರಪಿಂಡ ಕಾಯಿಲೆ ಬಂದರೆ ಅದು ಹೃದಯ ಮತ್ತು ಮೆದುಳಿಗೆ ತುಂಬಾ ಅಪಾಯಕಾರಿಯಾಗುತ್ತದೆ. ಅಧ್ಯಯನವೊಂದರ ಪ್ರಕಾರ ಶೇ. 98 ತೀವ್ರತರರ ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವವರು ಕೊನೆಕೊನೆಗೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಹತ್ತಿರವಾಗುತ್ತಾರೆ ಎಂಬುದು ದೃಢಪಟ್ಟಿದೆ.
ಅಂದರೆ ಮಧುಮೇಹ ನೇರವಾಗಿ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಅದು ಕಿಡ್ನಿ ವೈಫಲ್ಯಕ್ಕೆ ದಾರಿಯಾಗುತ್ತದೆ. ಅದಕ್ಕೂ ಮುನ್ನ ಹೃದಯ ಮತ್ತು ಮೆದುಳಿಮವರೆಗೂ ಹಾದುಹೋಗುವ ರಕ್ತನಾಳಗಳಿಗೆ ಧಕ್ಕೆ ತರುತ್ತದೆ. ಹೀಗೆ ಒಂದಕ್ಕೊಂದು ಅನಪೇಕ್ಷೀಯ ಸಂಬಂಧ ಹೊಂದಿವೆ. ಅಂದರೆ ಕಿಡ್ನಿ ವೈಫಲ್ಯಕ್ಕೊಳಗಾದರೆ ಹೃದ್ರೋಗ ಗ್ಯಾರಂಟಿ ಅಥವಾ ಹೃದ್ರೋಗ ಬಂದರೆ ಕಿಡ್ನಿ ವೈಫಲ್ಯ ಉಚಿತ ಎನ್ನುವಂತಾಗಿದೆ.
ಇನ್ನೂ ಆತಂಕಕಾರಿ ಎಂದರೆ ಕಿಡ್ನಿ ವೈಫಲ್ಯಕ್ಕೀಡಾಗುತ್ತಿದ್ದಂತೆ ವಿಷಕಾರಿ ತ್ಯಾಜ್ಯಗಳು ಶೇಖರಣೆಯಾಗುತ್ತಾ ಸಾಗುತ್ತದೆ. ಕೊನೆಗೆ ಅದು ಹೃದಯದ ಕಾರ್ಯವೈಖರಿ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಆದ್ದರಿಂದ ಹೃದ್ರೋಗ ಚಿಕಿತ್ಸೆ ಅಥವಾ ಕಿಡ್ನಿ ಚಿಕಿತ್ಸೆ ಎಂದು ಪ್ರತ್ಯೇಕಗೊಳಿಸದೆ ಎರಡರತ್ತಲೂ ಗಮನಹರಿಸುವುದು ಕ್ಷೇಮ. ಅದಕ್ಕೇ ಹೇಳಿದ್ದು ಕಿಡ್ನಿ ಸಮಸ್ಯೆ ಕಾಣಿಸಿಕೊಂಡರೆ ಒಮ್ಮೆ ನಿಮ್ಮ ಹೃದಯವನ್ನು ಮುಟ್ಟಿನೋಡಿಕೊಳ್ಳಿ.
ಪ್ರತಿ ವರ್ಷ ಮಾರ್ಚ್ 10ರಂದು ವಿಶ್ವ ಕಿಡ್ನಿ ದಿನ ಆಚರಿಸಲಾಗುತ್ತದೆ. ಕನಿಷ್ಠ ಈ ಸಂದರ್ಭದಲ್ಲಾದರೂ ಜನ ತಮ್ಮ ಕಿಡ್ನಿಗಳ ಕಡೆ ನೋಡಿಕೊಳ್ಳಲಿ ಎಂದು. ಜತೆಗೆ ಸಂಬಂಧಪಟ್ಟ ವೈದ್ಯರು ಇದರ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸಿ, ರೋಗಿಗಳ ಪಾಳಿಗೆ ಸಂಜೀವಿನಾಯಗಲಿ ಎಂಬ ಒತ್ತಾಸೆ ಈ ಆಚರಣೆಯದ್ದಾಗಿದೆ.
ಕಿಡ್ನಿ ಕಾಯಿಲೆ ಆರಂಭದಲ್ಲಿಯೇ ಗಮನಕ್ಕೆ ಬಂದರೆ ಸೂಕ್ತ ಚಿಕಿತ್ಸೆಯಿಂದ ಅದನ್ನು ಕ್ರಾನಿಕ್ ಕಿಡ್ನಿ ಡಿಸೀಸ್ (ಸಿಕೆಡಿ) ಆಗಿ ಕಾಡದಂತೆ ತಡೆಗಟ್ಟಬಹುದು. ಅಷ್ಟಕ್ಕೂ ಕಿಡ್ನಿ ಸಮಸ್ಯೆ ಪತ್ತೆ ಹಚ್ಚುವುದು ಕಷ್ಟವೇನೂ ಅಲ್ಲ. ಕೆಲವೊಂದು ಸುಲಭೋಪಾಯಗಳು ಹೀಗಿವೆ:
1. ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಪರೀಕ್ಷಿಸುತ್ತಿರಿ. ಅದಕ್ಕೂ ಮುನ್ನ ನಿಯಮಿತವಾಗಿ ದೈನಂದಿನ ವ್ಯಾಯಾಮದಲ್ಲಿ ತೊಡಗಿ.
2. ರಕ್ತದಲ್ಲಿನ ಸಕ್ಕರೆಮಟ್ಟ ಪರೀಕ್ಷಿಸುತ್ತಿರಿ. ಆರೋಗ್ಯಕರ ಆಹಾರ ಸೇವಿಸಿ.
3. ರಕ್ತದೊತ್ತಡ 140/90ನ್ನು ದಾಟುತ್ತಿದ್ದಂತೆ ವೈದ್ಯರನ್ನು ಕಂಡು ಕಿಡ್ನಿ ಪರೀಕ್ಷೆಯನ್ನೂ ನಡೆಸಿ. ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಹೃದಯ ಸಂಬಂಧಿ ಕಾಯಿಲೆಗಳು ಜತೆಜತೆಯಲ್ಲೇ ಇದ್ದರೆ ವಿಳಂಬ ಮಾಡದೆ ವೈದ್ಯರ ಮೊರೆ ಹೋಗಿ.
4. ನಿಮ್ಮ ತೋಕ ಆಯ ತಪ್ಪದಿರಲಿ. ನಿಮ್ಮ ದೇಹವನ್ನು ಹೊತ್ತುಕೊಳ್ಳುವುದು ನಿಮಗೇ ದುಸ್ತರವಾಗಾದಾಗ ತೂಕ ನಿಯಂತ್ರಿಸಿ. ಜತೆಗೆ, ಉಪ್ಪ ತಿನ್ನುವುದನ್ನು ಕಡಿಮೆ ಮಾಡಿ. ಸಂಸ್ಕರಿತ, ದಿಢೀರ್, ಜಂಕ್ ಫುಡ್-ಗೆ ಗುಡ್ ಬೈ ಹೇಳಿ.
5. ಧೂಮಲೀಲೆ ಕಡಿಮೆಯಾಗಲಿ. ಧೂಮಪಾನ ಮಾಡುವುದರಿಂದ ಕಿಡ್ನಿಯತ್ತ ರಕ್ತದ ಹರಿವು ನಿಧಾನಗೊಳ್ಳುತ್ತದೆ. ಕಿಡ್ನಿಯಲ್ಲಿ ರಕ್ತ ಕಡಿಮೆಯಾಗುತ್ತಿದ್ದಂತೆ ಅದರ ಕಾರ್ಯಕ್ಷಮತೆ ತಂತಾನೇ ಕ್ಷೀಣಿಸುತ್ತದೆ.
No comments:
Post a Comment