Tuesday, May 15, 2012

ಕಿಡ್ನಿಸ್ಟೋನ್ ನಿವಾರಣೆಗೆ ಮನೆಮದ್ದು.

ಕಿಡ್ನಿಯಲ್ಲಿ ಕಲ್ಲು (ಕಿಡ್ನಿ ಸ್ಟೋನ್) ಬಂದರೆ ಅದನ್ನು ಶಸ್ತ್ರ ಚಿಕಿತ್ಸೆ ಮಾಡಬೇಕಾಗುತ್ತದೆ. ಆದರೆ calculusನಲ್ಲಿ 5mmನಷ್ಟು ಇದ್ದರೆ ಅದನ್ನು ಮನೆ ಮದ್ದಿನಿಂದ ಹೋಗಲಾಡಿಸಬಹುದಾಗಿದೆ.ಈ ಕೆಳಗಿನ ವಿಧಾನಗಳು ಕಿಡ್ನಿಯಲ್ಲಿರುವ ಕಲ್ಲು ತೆಗೆಯಲು ಮಾತ್ರವಲ್ಲ, ಕಿಡ್ನಿಯಲ್ಲಿ ಕಲ್ಲು ಉಂಟಾಗದಂತೆ ತಡೆಯಲು ಸಹಕಾರಿಯಾಗಿದೆ.
1. ನೀರು: ಸಾಕಷ್ಟು ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹದಲ್ಲಿ ನಿರಿನಂಶ ಕಡಿಮೆಯಾದರೆ ನಿಶ್ಯಕ್ತಿ, ಕಿಡ್ನಿಯಲ್ಲಿ ಕಲ್ಲು , ತ್ವಚೆ ಸೌಂದರ್ಯ ಹಾಳಾಗುವುದು ಮುಂತಾದ ಸಮಸ್ಯೆ ಉಂಟಾಗುತ್ತದೆ. ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಂಡರೆ ದಿನಕ್ಕೆ 5-6 ಲೀಟರ್ ನೀರು ಕುಡಿದರೆ ಕಲ್ಲು ಮೂತ್ರದಲ್ಲಿ ಹೊರಹೋಗುವುದು. 2. ನೀರಿನಲ್ಲಿ ನೆನೆ ಹಾಕಿದ ಮೆಂತೆ: ಒಂದು ಚಮಚ ಮೆಂತೆಯನ್ನು ಒಂದು ಲೋಟ ನೀರಿನಲ್ಲಿ ನೆನೆ ಹಾಕಿ ಬೆಳ್ಳಗ್ಗೆ ತಿನ್ನಬೇಕು. ಈ ರೀತಿ ಮಾಡಿದರೆ ಕಿಡ್ನಿಯಲ್ಲಿರುವ ಕಲ್ಲು ಮಾತ್ರವಲ್ಲ ದೇಹದಲ್ಲಿರುವ ಕಷ್ಮಲಗಳನ್ನು ತೊಡೆದು ಹಾಕಲು ಸಹಕಾರಿಯಾಗಿದೆ. 3. ತಾಟಿನುಂಗು: ಇದನ್ನು ಪಾಮ್ ಫ್ರೂಟ್ ಅಂತ ಕೂಡ ಕರೆಯುತ್ತಾರೆ. ಇದರಿಂದ 'ತಾಲ್ ಮಿಶ್ರಿ' ಎಂಬ ಸಕ್ಕರೆ ತಯಾರಿಸಲಾಗುವುದು. ಇದನ್ನು ಒಂದು ರಾತ್ರಿ ನೀರಿನಲ್ಲಿ ಕಲೆಸಿ ಬೆಳಗ್ಗೆ ಎದ್ದು ಕುಡಿಯುವುದು ಒಳ್ಳೆಯದು. ಇದು ಸಿಗುವುದು ಸ್ವಲ್ಪ ಕಷ್ಟ. ಆದರೆ ಇದು ಕಿಡ್ನಿಯಲ್ಲಿರುವ ಕಲ್ಲು ನಿವಾರಣೆಗೆ ತುಂಬಾ ಸಹಕಾರಿಯಾಗಿದೆ. ಇಲ್ಲದಿದ್ದರೆ ತಾಟಿನುಂಗು ದಿನಾ ತಿನ್ನುವುದು ಕೂಡ ಒಳ್ಳೆಯದು. 4. ಬಾಳೆ ದಿಂಡು: ಬಾಳೆ ದಿಂಡಿನ ಒಳಭಾಗವನ್ನು ಪಲ್ಯ ಮಾಡಿ ತಿನ್ನಲಾಗುವುದು. ಇದು ಕಿಡಿಯಲ್ಲಿರುವ ಕಲ್ಲನ್ನು ಹೋಗಲಾಡಿಸಲು ಪರಿಣಾಮಕಾರಿಯಾದ ಮನೆ ಔಷಧಿಯಾಗಿದೆ. 5. ಕೊತ್ತಂಬರಿ ಸೊಪ್ಪು: ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದು ಕೂಡ ತುಂಬಾ ಒಳ್ಳೆಯದು.


No comments:

Post a Comment