Tuesday, May 15, 2012

ಕಿಡ್ನಿಸ್ಟೋನ್ ನಿವಾರಣೆಗೆ ಮನೆಮದ್ದು.

ಕಿಡ್ನಿಯಲ್ಲಿ ಕಲ್ಲು (ಕಿಡ್ನಿ ಸ್ಟೋನ್) ಬಂದರೆ ಅದನ್ನು ಶಸ್ತ್ರ ಚಿಕಿತ್ಸೆ ಮಾಡಬೇಕಾಗುತ್ತದೆ. ಆದರೆ calculusನಲ್ಲಿ 5mmನಷ್ಟು ಇದ್ದರೆ ಅದನ್ನು ಮನೆ ಮದ್ದಿನಿಂದ ಹೋಗಲಾಡಿಸಬಹುದಾಗಿದೆ.ಈ ಕೆಳಗಿನ ವಿಧಾನಗಳು ಕಿಡ್ನಿಯಲ್ಲಿರುವ ಕಲ್ಲು ತೆಗೆಯಲು ಮಾತ್ರವಲ್ಲ, ಕಿಡ್ನಿಯಲ್ಲಿ ಕಲ್ಲು ಉಂಟಾಗದಂತೆ ತಡೆಯಲು ಸಹಕಾರಿಯಾಗಿದೆ.
1. ನೀರು: ಸಾಕಷ್ಟು ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹದಲ್ಲಿ ನಿರಿನಂಶ ಕಡಿಮೆಯಾದರೆ ನಿಶ್ಯಕ್ತಿ, ಕಿಡ್ನಿಯಲ್ಲಿ ಕಲ್ಲು , ತ್ವಚೆ ಸೌಂದರ್ಯ ಹಾಳಾಗುವುದು ಮುಂತಾದ ಸಮಸ್ಯೆ ಉಂಟಾಗುತ್ತದೆ. ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಂಡರೆ ದಿನಕ್ಕೆ 5-6 ಲೀಟರ್ ನೀರು ಕುಡಿದರೆ ಕಲ್ಲು ಮೂತ್ರದಲ್ಲಿ ಹೊರಹೋಗುವುದು. 2. ನೀರಿನಲ್ಲಿ ನೆನೆ ಹಾಕಿದ ಮೆಂತೆ: ಒಂದು ಚಮಚ ಮೆಂತೆಯನ್ನು ಒಂದು ಲೋಟ ನೀರಿನಲ್ಲಿ ನೆನೆ ಹಾಕಿ ಬೆಳ್ಳಗ್ಗೆ ತಿನ್ನಬೇಕು. ಈ ರೀತಿ ಮಾಡಿದರೆ ಕಿಡ್ನಿಯಲ್ಲಿರುವ ಕಲ್ಲು ಮಾತ್ರವಲ್ಲ ದೇಹದಲ್ಲಿರುವ ಕಷ್ಮಲಗಳನ್ನು ತೊಡೆದು ಹಾಕಲು ಸಹಕಾರಿಯಾಗಿದೆ. 3. ತಾಟಿನುಂಗು: ಇದನ್ನು ಪಾಮ್ ಫ್ರೂಟ್ ಅಂತ ಕೂಡ ಕರೆಯುತ್ತಾರೆ. ಇದರಿಂದ 'ತಾಲ್ ಮಿಶ್ರಿ' ಎಂಬ ಸಕ್ಕರೆ ತಯಾರಿಸಲಾಗುವುದು. ಇದನ್ನು ಒಂದು ರಾತ್ರಿ ನೀರಿನಲ್ಲಿ ಕಲೆಸಿ ಬೆಳಗ್ಗೆ ಎದ್ದು ಕುಡಿಯುವುದು ಒಳ್ಳೆಯದು. ಇದು ಸಿಗುವುದು ಸ್ವಲ್ಪ ಕಷ್ಟ. ಆದರೆ ಇದು ಕಿಡ್ನಿಯಲ್ಲಿರುವ ಕಲ್ಲು ನಿವಾರಣೆಗೆ ತುಂಬಾ ಸಹಕಾರಿಯಾಗಿದೆ. ಇಲ್ಲದಿದ್ದರೆ ತಾಟಿನುಂಗು ದಿನಾ ತಿನ್ನುವುದು ಕೂಡ ಒಳ್ಳೆಯದು. 4. ಬಾಳೆ ದಿಂಡು: ಬಾಳೆ ದಿಂಡಿನ ಒಳಭಾಗವನ್ನು ಪಲ್ಯ ಮಾಡಿ ತಿನ್ನಲಾಗುವುದು. ಇದು ಕಿಡಿಯಲ್ಲಿರುವ ಕಲ್ಲನ್ನು ಹೋಗಲಾಡಿಸಲು ಪರಿಣಾಮಕಾರಿಯಾದ ಮನೆ ಔಷಧಿಯಾಗಿದೆ. 5. ಕೊತ್ತಂಬರಿ ಸೊಪ್ಪು: ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದು ಕೂಡ ತುಂಬಾ ಒಳ್ಳೆಯದು.


Thursday, April 19, 2012

'ಕನ್ನಡದ ಕೋಟ್ಯಧಿಪತಿ' ರಾಮಾಯಣ ಮಹಾಭಾರತಕ್ಕೆ ಮಾತ್ರ ಸೀಮಿತ ಆಗಿದೆ.ಎಲ್ಲಾ ದರ್ಮದ ಬಗ್ಗೆ ಪ್ರಶ್ನೆ ಕೇಳಿದರೆ ಒಳ್ಳೆದು. “ಬೇಜಾರು ಮಾಡ್ಕೋಬೇಡಿ ಅರ್ಥಮಾಡ್ಕೊಳ್ಳಿ”

'ಕನ್ನಡದ ಕೋಟ್ಯಧಿಪತಿ' ನಿಜಕ್ಕೂ ಜ್ಞಾನ  ಹೆಚ್ಚು ಮಾಡುವ ಕಾರ್ಯಕ್ರಮ ಎರಡು ಮಾತಿಲ್ಲ. ಆದ್ರೆ ಪ್ರಶ್ನೆಗಳು ರಾಮಾಯಣ ಮಹಾಭಾರತಕ್ಕೆ ಮಾತ್ರ ಸೀಮಿತ ಆಗಿದೆ ! ಎಲ್ಲಾ  ದರ್ಮದ ಬಗ್ಗೆ ಪ್ರಶ್ನೆ ಕೇಳಿದರೆ ಒಳ್ಳೆದು. ಆವಾಗ ಕಾರ್ಯಕ್ರಮ ಇನ್ನೂ ಹೆಚ್ಚು ಜನಪ್ರಿಯವಾಗಿ ವಿಜೃಂಭಿಸುತ್ತೆ. ಏನಂತೀರಿ ? ಪುನೀತ್ ರಾಜಕುಮಾರ್  “ಬೇಜಾರು ಮಾಡ್ಕೋಬೇಡಿ ಅರ್ಥಮಾಡ್ಕೊಳ್ಳಿ”  ? !!!              

Thursday, April 5, 2012

ಹಳೇ ಮೊಬೈಲಿನಲ್ಲಿ ಚಿನ್ನವಿದೆ, ಬಿಸಾಕಬೇಡಿ

ನಂಬಿದರೆ ನಂಬಿ ಬಿಟ್ಟರೆ ಬಿಡಿ, ನಿಮ್ಮ ಮೊಬೈಲ್ ಫೋನಿನಲ್ಲಿ ಚಿನ್ನವಿದೆ. ಅದೂ ಅಲ್ಲದೆ ತಾಮ್ರ, ಬೆಳ್ಳಿ ಕೂಡ ಇದೆ. ಹೇಗೆ ಅಂತೀರಾ, ಮೊಬೈಲುಗಳಲ್ಲಿ ವಿದ್ಯುತ್ ಸಂಚರಿಸಲು ವಾಹಕಗಳನ್ನು ಬಳಸುತ್ತಾರೆ. ಚಿನ್ನ, ಬೆಳ್ಳಿ ಹಾಗು ತಾಮ್ರಗಳು ಉತ್ತಮ ವಾಹಕಗಳಾಗಿರುವುದರಿಂದ ಅವುಗಳನ್ನು ಮೊಬೈಲ್ನಲ್ಲಿ ಬಳಸುವ ಅವಶ್ಯಕತೆ ಬರುತ್ತದೆ. ಪ್ರತಿಯೊಂದು ಮೊಬೈಲ್ನಲ್ಲೂ ಕನಿಷ್ಠ 0.01% ನಷ್ಟು ಚಿನ್ನ ಇದ್ದೇ ಇರುತ್ತದಂತೆ. ಒಂದು ಟನ್ ಗುಜರಿ ಮೊಬೈಲ್ ನಿಂದ 150 ಗ್ರಾಂ ಚಿನ್ನವನ್ನು ಪಡೆಯಬಹುದಂತೆ!! ವಿಶ್ವದಲ್ಲಿ ಪ್ರತಿ ವರ್ಷ 400 ಮಿಲಿಯನ್ ಮೊಬೈಲ್ ಫೋನುಗಳು ಗುಜರಿಗೆ ಬರುತ್ತವೆಯಂತೆ. ಅದರಲ್ಲಿ ಚೀನಾ ದೇಶದವರೇ 100 ಮಿಲಿಯನ್ ಫೋನುಗಳನ್ನು ಬಿಸಾಕುತ್ತಾರೆ. ಅದರ ಒಟ್ಟು ತೂಕವೇ 10 ಸಾವಿರ ಟನ್ ಎಂದು ಅಂದಾಜು. ಇದರಲ್ಲಿರುವ ಲೋಹಾಂಶ ತೆಗೆದರೆ ಸುಮಾರು 1500 ಕೇಜಿ ಚಿನ್ನ ತೆಗೆಯಬಹುದು! ಅದಕ್ಕೆ ಹೇಳಿದ್ದು ನಿಮ್ಮ ಹಳೇ ಫೋನ್ ಮೊಬೈಲ್ ಅನ್ನು ಬಿಸಾಕಬೇಡಿ, ಚಿನ್ನವಿದೆ ಅಂತ.


Tuesday, March 20, 2012

ಪುನ್ನಿ ನಮ್ಮ ಗಾಜನೂರಿನ ಹುಡುಗ “ಕೋಟ್ಯಧಿಪತಿಗೆ” 15 ಕೋಟಿ ತಗಂಡ್ರಂತೆ..! ಕೋಟ್ಯಧಿಪತಿ ಆಗಿದ್ದು ಪುನೀತ್!!!. ???



ಮೊನ್ನೆ ತಾನೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದವರು, 'ಕನ್ನಡದ ಕೋಟ್ಯಧಿಪತಿ'ಯಿಂದಾಗಿ ನಿಜಕ್ಕೂ ನಾನು ಕೋಟ್ಯಧಿಪತಿಯಾಗಿದ್ದೇನೆ; ಆದರೆ ಜ್ಞಾನದ ವಿಚಾರದಲ್ಲಿ ಎಂದು ಪವರ್ ಸ್ಟಾರ್ ಪುನೀತ್ ಹೇಳಿದ್ದರು. ಈಗ ಲೀಕಾಗಿರುವ ಮಾಹಿತಿಗಳ ಪ್ರಕಾರ, ಪುನೀತ್ ಕೋಟಿ ಬಿಡಿ, ದಶಕೋಟಿಯನ್ನೂ ಮೀರಿಸಿದ್ದಾರೆ. ಪುನೀತ್ ಸಿನಿಮಾ ಒಂದರಲ್ಲಿ ನಾಯಕನಾಗಲು ಹಲವು ಕೋಟಿಗಳನ್ನು ಕಿಸೆಗಿಳಿಸುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತು. ಈ ಡೀಲುಗಳನ್ನೆಲ್ಲ ಕುದುರಿಸುವುದು ಸಹೋದರ ರಾಘವೇಂದ್ರ ರಾಜ್‌ಕುಮಾರ್. ಮೂಲಗಳ ಪ್ರಕಾರ ಪುನೀತ್ ಈಗ ಮೂರು ಕೋಟಿ ರೂಪಾಯಿಯಿಂದ ನಾಲ್ಕು ಕೋಟಿಯಷ್ಟು ಬೆಲೆ ಬಾಳುತ್ತಾರೆ. ಅಷ್ಟಿಲ್ಲದೆ ಯಾವ ಚಿತ್ರಗಳಲ್ಲೂ ನಟಿಸುತ್ತಿಲ್ಲ. ಈ ಬೆಳವಣಿಗೆಗಳು ಜೋರಾಗಿ ನಡೆದಿರುವುದು 'ಜಾಕಿ' ಸೂಪರ್ ಹಿಟ್ ಆದ ನಂತರ. ಹೇಳಿ ಕೇಳಿ ಪುನೀತ್ ನಂಬರ್ ವನ್ ನಟ. ಅದೂ ಕಳೆದ ಹಲವಾರು ವರ್ಷಗಳಿಂದ. ಹೀಗಿರುವಾಗ ಕಿರುತೆರೆಗೆ, ಅದರಲ್ಲೂ 'ಕನ್ನಡದ ಕೋಟ್ಯಧಿಪತಿ'ಯಂತಹ ಪಕ್ಕಾ ಕಮರ್ಷಿಯಲ್ ಕಾರ್ಯಕ್ರಮ ಎಂದ ಮೇಲೆ ಕೇಳಬೇಕೇ? ಈ ಕಾರ್ಯಕ್ರಮ ಹೆಚ್ಚು ಕಡಿಮೆ ನಡೆಯೋದೇ ಪುನೀತ್ ಚಾರ್ಮ್‌ನಿಂದ. ಅವರಿಲ್ಲದಿದ್ದರೆ ಇಡೀ ಕಾರ್ಯಕ್ರಮ ಡಲ್ಲೋ ಡಲ್ಲು. ಆದರೆ ಇದಕ್ಕಾಗಿ ಪುನೀತ್ ಪಡೆಯೋ ಸಂಭಾವನೆ ಎಷ್ಟು ಗೊತ್ತಾ? 15 ಕೋಟಿ ರೂಪಾಯಿ! ಒಂದೆರಡಲ್ಲ, ಹದಿನೈದು ಕೋಟಿ ರೂಪಾಯಿ. ಇದು ವರ್ಷಗಟ್ಟಲೆ ಶೂಟಿಂಗ್‌ಗಾಗಿ ಎಂದು ತಿಳಿದುಕೊಳ್ಳಬೇಡಿ. ಒಟ್ಟು 50 ಸಂಚಿಕೆಗಳಿಗೆ. ಅಂದರೆ, ಒಂದು ಸಂಚಿಕೆಗೆ 30 ಲಕ್ಷ ರೂಪಾಯಿ..! 'ಕನ್ನಡದ ಕೋಟ್ಯಧಿಪತಿ' ಚಿತ್ರೀಕರಣ ನಡೆಯೋದು ಚೆನ್ನೈಯಲ್ಲಿ. ಒಂದು ಸಲ ಒಂದೇ ಸಂಚಿಕೆಯ ಚಿತ್ರೀಕರಣವಲ್ಲ, ಒಂದಷ್ಟು ಸಂಚಿಕೆಗಳನ್ನು ಒಂದೇ ಬಾರಿ ಶೂಟಿಂಗ್ ಮಾಡಲಾಗುತ್ತದೆ. ಹೀಗಾಗಿ ತಿಂಗಳಿಗೊಮ್ಮೆ ನಾಲ್ಕೈದು ದಿನಗಳನ್ನು ಹೊಂದಿಸಿಕೊಂಡು ಚೆನ್ನೈಯತ್ತ ಹೋದರಾಯಿತು. ಈ ನಡುವೆ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪುನೀತ್ ಮುಗಿಸುತ್ತಾರೆ. ಹೀಗೆ 'ಕನ್ನಡದ ಕೋಟ್ಯಧಿಪತಿ' ಒಂದು ಆವೃತ್ತಿ ಯಶಸ್ಸು ಕಂಡರೆ, ಮುಂದಿನ ಆವೃತ್ತಿಯಲ್ಲೂ ಇವರೇ ಮುಂದುವರಿಯುತ್ತಾರಂತೆ.



Saturday, March 10, 2012

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಖಿಲೇಶ್ ಯಾದವ್. ಮೂಗಿನ ರಹಸ್ಯ ಬಹಿರಂಗ



ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಸರ್ಕಾರ ರಚನೆ ಸಿದ್ಧತೆಯಲ್ಲಿ ತೊಡಗಿದೆ. ಈ ನಡುವೆ ಎಸ್ ಪಿಗೆ ಭರ್ಜರಿ ಗೆಲುವು ತಂದು ಕೊಡುವಲ್ಲಿ ಮಹತ್ವದ ಪಾತ್ರವಹಿಸಿದ ಯುವ ನೇತಾರ ಅಖಿಲೇಶ್ ಯಾದವ್ ಅವರ ಮೂಗಿನ ಮೇಲೆ ಎಲ್ಲರ ಗಮನ ನೆಟ್ಟಿದೆ. ಅವರ ಮೂಗಿನ ರಹಸ್ಯ ಈಗ ಬಹಿರಂಗವಾಗಿದೆ. ಅಪ್ಪಟ ಫುಟ್ಬಾಲ್ ಪ್ರೇಮಿಯಾಗಿರುವ ಅಖಿಲೇಶ್ ಅವರು ಮೈಸೂರಿನಲ್ಲಿ ಶ್ರೀಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ಕಾಲ. ಒಮ್ಮೆ ಫುಟ್ಬಾಲ್ ಆಡುತ್ತಿದ್ದ ಅಖಿಲೇಶ್ ಮುಖಕ್ಕೆ ಚೆಂಡು ರಭಸವಾಗಿ ಬಡಿದು ಮೂಗಿನಿಂದ ಬಳಬಳನೆ ರಕ್ತ ಸುರಿಯತೊಡಗಿತು. ಆಗ ಪಕ್ಕಕ್ಕೆ ತಿರುಗಿದ ಮೂಗು ಇನ್ನೂ ಸರಿ ಹೋಗಿಲ್ಲ. ಕುತೂಹಲದ ಸಂಗತಿ ಎಂದರೆ ಮೂಗನ್ನು ಇನ್ನೂ 'ಫಿಕ್ಸ್' ಮಾಡಿಲ್ಲ. ಹೌದು, ಮೂಗಿನ ಮೂಳೆ ಮುರಿದರೂ ಅದಕ್ಕೆ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ ಮೇಲೆ ಅಖಿಲ್ ಮೂಗಿನ ತಂಟೆಗೆ ಹೋಗಿಲ್ಲ.ಮೈಸೂರು ಎಂದರೆ ಮೂಗು: ಈಗಲೂ ಮೈಸೂರಿನ ವಿಷಯ ಮಾತನಾಡತೊಡಗಿದರೆ ಅಖಿಲೇಶ್ ತನಗರಿವಿಲ್ಲದಂತೆ ಮೂಗನ್ನು ಮುಟ್ಟಿಕೊಳ್ಳುವುದಿದೆ ಎಂದು ಅವರ ಸಿನೀಯರ್ ಎಂಎಸ್ ಕರುಣಾ ಹೇಳುತ್ತಾರೆ.
ಅಖಿಲೇಶ್ ನನ್ನ ಕಾರಿಡಾರ್ ಫ್ರೆಂಡ್. ಕಾಲೇಜು ಕ್ಯಾಂಪಸ್ ನಲ್ಲಿ ಯಾವಗಾಲು ಕಾರಿಡರ್ ನಲ್ಲೇ ಸಿಗುತ್ತಿದ್ದ. ಹಾಗಾಗಿ ಆತನ ಹೆಸರು 'ಕಾರಿಡಾರ್ ಫ್ರೆಂಡ್' ಎಂದು ಇಟ್ಟಿದ್ದೆ. ಅಖಿಲ್ ಬಳಿ ಓಪನ್ ಜೀಪ್ ಇತ್ತು. ನಾವೆಲ್ಲ ರಜೆ ಇದ್ದಾಗ ಮೈಸೂರು ಸುತ್ತಾ ಮುತ್ತಾ ಓಡಾಡುತ್ತಿದ್ದೆವು. ಒಂಟಿಕೊಪ್ಪಲಿನಲ್ಲಿದ್ದ ನಮ್ಮ ಮನೆಗೆ ಅವನು ಲಿಫ್ಟ್ ಕೊಡುತ್ತಿದ್ದ. 1994 ರಲ್ಲಿ ಪರಿಸರ ವಿಜ್ಞಾನ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಮೈಸೂರು ತೊರೆದರೂ ನಮ್ಮ ಸ್ನೇಹ ಇನ್ನೂ ಹಾಗೇ ಇದೆ ಎಂದು ಕರುಣಾ ಗೆಳೆತನದ ದಿನಗಳನ್ನು ಸ್ಮರಿಸುತ್ತಾರೆ. ಯುವಕರು ರಾಜಕೀಯಕ್ಕೆ ಬರಬೇಕು ಎಂಬ ಮಾತಿದೆ. ಅಖಿಲೇಶ್ ನಂತವರು ರಾಜಕೀಯಕ್ಕೆ ಬರಬೇಕು ಆಗ ಏನಾದರೂ ಬದಲಾವಣೆ ಕಾಣಲು ಸಾಧ್ಯ. ಅವನ ರಾಜಕೀಯ ಏಳಿಗೆ ಹೀಗೆ ಮುಂದುವರೆಯಲಿ, ಅವನ ಟ್ರೆಂಡ್ ಮಾರ್ಕ್ ಮೂಗು ಮರೆಯಲು ಸಾಧ್ಯವಿಲ್ಲ ಎಂದು ಕರುಣಾ ನಗುನಗುತ್ತಾ ಹೇಳಿದರು.

Thursday, March 8, 2012

ಗ್ಯಾಸ್ಟ್ರಿಕ್ಗೆ ಇಲ್ಲಿದೆ ಮದ್ದು. ಈ ಆಹಾರಗಳು ಒಗ್ಗುವುದಿಲ್ಲ.



ಗ್ಯಾಸ್ಟ್ರಿಕ್ ಸಮಸ್ಯೆಯಿದ್ದರೆ ಅದರಿಂದ ಹೊಟ್ಟೆ ನೋವು ಅಷ್ಟೆ ಅಲ್ಲ ಮುಜುಗರ ಕೂಡ ಉಂಟಾಗುತ್ತದೆ. ಈ ರೀತಿಯ ಗ್ಯಾಸ್ ಸಮಸ್ಯೆಯಿದ್ದರೆ ಅದರ ಸೌಂಡ್ ಕೇಳಿದಾಗ ಉಳಿದವರು ನಗುತ್ತಾರೆ ಅಥವಾ ವಾಸನೆಯೆಂದು ಮುಖ ಕಿವುಚುತ್ತಾರೆ. ಈ ರೀತಿಯ ಗ್ಯಾಸ್ ಸಮಸ್ಯೆಯನ್ನು ಈ ಕೆಳಗಿನ ಮನೆ ಮದ್ದಿನಿಂದ ಪರಿಹರಿಸಬಹುದು.1.ಶುಂಠಿ: ಒಂದು ಚಿಕ್ಕ ತುಂಡು ಶುಂಠಿಯನ್ನು ಜಜ್ಜಿ ಒಂದು ಲೋಟ ನೀರಿಗೆ ಹಾಕಿ ಕುದಿಸಿ ನೀರು ತಣ್ಣಗಾದ ಮೇಲೆ ಕುಡಿದರೆ ಗ್ಯಾಸ್ ಸಮಸ್ಯೆ ಕಡಿಮೆಯಾಗುವುದು. * ಟೀಗೆ ಶುಂಠಿ ಹಾಕಿ ಕುಡಿದರೂ ಈ ಸಮಸ್ಯೆ ಪರಿಹಾರವಾಗುವುದು.2. ನೀರು ಕುಡಿಯುವುದು: ನೀರು ಕುಡಿದರೆ ಈ ರೀತಿಯ ಗ್ಯಾಸ್ ಸಮಸ್ಯೆ ನಿವಾರಣೆಯಗುವುದು. ನೀರು ಕುಡಿದಾಗ ಹೊಟ್ಟೆಯಲ್ಲಿರುವ ಬೇಡದ ಗ್ಯಾಸ್ ಮೂತ್ರದ ಮುಖಾಂತರ ಹೊರಹೋಗುವುದು.3. ಸೋಂಪು: ಹೊಟ್ಟೆ ನೋವು, ಅಜೀರ್ಣ ಮುಂತಾದ ಸಮಸ್ಯೆಗಳಿಗೆ ಸೋಂಪು ಪರಿಣಾಮಕಾರಿಯಾದ ಮನೆ ಮದ್ದಾಗಿದೆ. ಊಟದ ಮುಂಚೆ ಮತ್ತು ನಂತರ ಸೋಂಪು ತಿನ್ನುವುದರಿಂದ ಗ್ಯಾಸ್ ಸಮಸ್ಯೆ ಉಂಟಾಗುವುದಿಲ್ಲ.4.ಆಪಲ್ ಸೈಡರ್ ವಿನಿಗರ್: ಕೆಲವೊಮ್ಮೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿದಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಅಗ 2 ಚಮಚ ಆಪಲ್ ಸೈಡರ್ ವಿನಿಗರ್ ಅನ್ನು ಒಂದು ಲೋಟ ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ನೋವು ಕಡಿಮೆಯಾಗುವುದು.5. ಅಡುಗೆ ಸೋಡಾ: 1/4 ಚಮಚ ಅಡುಗೆ ಸೋಡಾವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕುಡಿದರೆ ತಕ್ಷಣವೆ ಗ್ಯಾಸ್ ಸಮಸ್ಯೆ ನಿವಾರಣೆಯಾಗುವುದು.6. ಪಲಾವ್ ಎಲೆ: ಪಲಾವ್ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಬೇಕು. ಆ ನೀರನ್ನು ಕುಡಿದರೆ ಗ್ಯಾಸ್ ಸಮಸ್ಯೆ ನಿವಾರಣೆಯಾಗುವುದು.

ಈ ಆಹಾರಗಳು ಒಗ್ಗುವುದಿಲ್ಲ-----------
ಆರೋಗ್ಯಕರವಲ್ಲದ ಆಹಾರ ಕ್ರಮದಿಂದ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳು ಸರ್ವೇಸಾಮನ್ಯ. ಕೆಲವರಿಗೆ ಕೆಲವೊಂದು ಆಹಾರಗಳು ಒಗ್ಗುವುದಿಲ್ಲ. ಸಾಮಾನ್ಯವಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚು ಮಾಡುವ ಆಹಾರಗಳ ಪಟ್ಟಿ ನೋಡಿ ಇಲ್ಲಿದೆ.1. ಬೀನ್ಸ್, ಅಣಬೆ, ಹೂಕೋಸ್, ದವಸ ಧ್ಯಾನ್ಯಗಳು, ಸೇಮು, ಸಕ್ಕರೆ ಅಂಶ ಅಧಿಕವಿರುವ ಹಣ್ಣು ತರಕಾರಿಗಳು ಸುಲಭವಾಗಿ ಜೀರ್ಣವಾಗುವುದಿಲ್ಲ ಇದು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ.2.ಚೀಸ್, ಮೊಟ್ಟೆ, ಹಾಲಿನ ಉತ್ಪನ್ನಗಳು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ.3. ಆಲೂಗೆಡ್ಡೆ, ಜೋಳ, ಗೋದಿಯ ಉತ್ಪನ್ನಗಳಾದ ಬ್ರೆಡ್ ಇವುಗಳನ್ನು ಸೇವಿಸಿದಾಗಲೂ ಕೆಲವರಿಗೆ ಹೊಟ್ಟೆ ನೋವು ಬರುತ್ತದೆ.4. ಕೆಲವೊಂದು ನಾರು ಪದಾರ್ಥಗಳನ್ನು ನಾರಿನ ಜೊತೆ ತಿನ್ನ ಬಹುದು ಅಂತಹ ಆಹಾರ ಸೇವನೆಯಿಂದ ಕೆಲವರಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುವುದು.5. ಕೆಲವೊಂದು ಬೇಕರಿ ತಿಂಡಿಗಳನ್ನು ತಿಂದಾಗ ಸಹ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುವರಿಗೆ ಕೆಲವರಿಗೆ ಕೆಲ ಆಹಾರಗಳು ಒಗ್ಗುವುದಿಲ್ಲ, ಆದ್ದರಿಂದ ಅವುಗಳನ್ನು ಗಮನಿಸಿ ಅದನ್ನು ಸೇವಿಸದಿದ್ದರೆ ಒಳ್ಳೆಯದು.

Thursday, March 1, 2012

ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗುವ ಎಲ್ಲ ಊರುಗಳ ಹೆಸರುಗಳು ಕನ್ನಡಮಯವಾಗಲಿವೆ.



ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ 12 ನಗರಗಳ ಮರುನಾಮಕರಣ ಆಗುವ ದಿನ ಇನ್ನೇನು ದೂರವಿಲ್ಲ. ಎಲ್ಲ ಅಡೆತಡೆಗಳೂ ದೂರವಾಗಿ, ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗುವ ಎಲ್ಲ ಊರುಗಳ ಹೆಸರುಗಳು ಕನ್ನಡಮಯವಾಗಲಿವೆ. ಸತತ ಪ್ರಯತ್ನಗಳ ನಂತರ ಭಾರತ ಸರ್ವೇಕ್ಷಣ ಇಲಾಖೆಯಿಂದ ಅನುಮತಿ ಪತ್ರ ದೊರೆತಿದೆ
1) Bangalore Bengaluru 2) Bellary Ballary 3) Bijapur Vijapur 4) Belgaum Belagavi 5) Chikmagalur Chikkamagaluru 6) Gulbarga Kalburgi 7) Mysore Mysuru 8) Hospet Hosapete 9) Shimoga Shivamogga 10) Hubli Hubballi 11) Tumkur Tumakuru) 12 Mangalore Mangaluru.