ಲಾಸ್ ಏಂಜಲೀಸ್: ವಿಶ್ವದ ಅತಿ ಉದ್ದದ
ಬೆಕ್ಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ
ಎಂಟು ವರ್ಷ ವಯಸ್ಸಿನ `ಸ್ಟಿವಿ'
ರೆನೊ ಸಾವನ್ನಪ್ಪಿದೆ. ಮೂಗಿನಿಂದ ಬಾಲದವರೆಗೆ ನಾಲ್ಕು ಅಡಿ ಉದ್ದವಿದ್ದ
(48.5 ಅಂಗುಲ) ಈ ಮಾರ್ಜಾಲವನ್ನು ಗಿನ್ನಿಸ್
ವಿಶ್ವ ದಾಖಲೆಯು 2010ರಲ್ಲಿ ವಿಶ್ವದ ಅತಿ
ಉದ್ದದ ಬೆಕ್ಕು ಎಂದು ಘೋಷಿಸಿತ್ತು.
2011ರಲ್ಲಿ ಉದ್ದ ಬಾಲ ಹೊಂದಿರುವ
ಬೆಕ್ಕು ಎಂಬ ಕೀರ್ತಿಗೂ ಇದು
ಪಾತ್ರವಾಗಿತ್ತು.
Wednesday, February 6, 2013
Tuesday, November 13, 2012
ಬರಿ ಗಾಳಿಯಿಂದಲೇ ಸಂಚರಿಸುವ ಬೈಕ್?
ಸುದ್ದಿ
ಆಲಿಸುವಾಗಲೇ ನಿಮ್ಮಲ್ಲಿ ಅಚ್ಚರಿ ಮೂಡಿರಬಹುದು.
ಬರಿ ಗಾಳಿಯ ಸಹಾಯದಿಂದಲೇ ಚಲಿಸುವ ಇದು. ನೀರ್ಮಾಣವಾಗಿರುವುದು ಆಸ್ಟ್ರೇಲಿಯಾದ ಎಂಜಿನಿಯರಿಂಗ್
ವಿದ್ಯಾರ್ಥಿಗಳು ಇಂತಹದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಕಂಪ್ರೆಸ್ಡ್ ಏರ್ ಟ್ಯಾಂಕ್ ಬೆಂಬಲದೊಂದಿಗೆ
ಚಾಲಿತವಾಗಲಿರುವ ಈ ಒ2 ಪರ್ಸ್ಯೂಟ್ 100 ಕಿಲೋ ಮೀಟರ್ ತನಕ ಚಲಿಸಲಿದೆ. ಅಲ್ಲದೆ ಗಂಟೆಗೆ ಗರಿಷ್ಠ
100 ಕಿಲೋ ಮೀಟರ್ ವೇಗವನ್ನು ಒದಗಿಸಲಿದೆ.
Monday, November 12, 2012
ಸಂತೋಷವಾಗಿದ್ದರೆ ಈ 6 ಕಾಯಿಲೆ ಹತ್ತಿರ ಸುಳಿಯುವುದಿಲ್ಲ ಯಾವುದೇ ಸಮಸ್ಯೆಗಳಿಗೆ ಪರಿಹಾರ ಇದ್ದೇ ಇರುತ್ತದೆ.
ದುಃಖ ಅನ್ನುವುದು ಬರೀ ಮಾನಸಿಕವಾಗಿ ಮಾತ್ರವಲ್ಲ
ದೈಹಿಕ ಆರೋಗ್ಯದ ಮೇಲೂ ಪರಿಣಾಮ
ಬೀರುತ್ತದೆ. ಚಿಂತೆ ಚಿತೆಗ ದಾರಿ
ಎಂದು ಹೇಳುವುದನ್ನು ನೀವು ಕೇಳಿರಬಹುದು. ಆದ್ದರಿಂದಲೇ
ತುಂಬಾ ಚಿಂತೆ ಮಾಡಬೇಡಿ, ಒತ್ತಡವನ್ನು
ಕಡಿಮೆ ಮಾಡಿಕೊಳ್ಳಿ ಎಂದು ವೈದ್ಯರು ಹೇಳುತ್ತಾರೆ.
ಪ್ರತಿದಿನ ನೀವೂ ಸಂತೋಷದಿಂದ ದಿನವನ್ನು
ಕಳೆಯುವುದಾದರೆ ಕೆಲವೊಂದು ಕಾಯಿಲೆಗಳು ನಿಮ್ಮ ಹತ್ತಿರಕ್ಕೇ ಸುಳಿಯುವುದಿಲ್ಲ.
ಇಷ್ಟೆಲ್ಲಾ ಒತ್ತಡಗಳ ನಡುವೆ ಸಂತೋಷದಿಂದ
ಇರಲು ಹೇಗೆ ಸಾಧ್ಯ ಎಂದು
ನೀವು ಕೇಳಬಹುದು? ಸಂತೋಷದಿಂದ ಇರಲು ಪ್ರಯತ್ನಿಸಿದರೆ ಸಂತೋಷದ
ಬದುಕು ನಿಮ್ಮದಾಗುವುದು. ಸಂತೋಷದಿಂದ ಇದ್ದರೆ ಯಾವುದೆಲ್ಲಾ ಕಾಯಿಲೆಗಳಿಗೆ
ಗುಡ್ ಬೈ ಹೇಳಬಹುದು ಎಂದು
ನೋಡೋಣ ಬನ್ನಿ.
1. ಒತ್ತಡದ
ಹಾರ್ಮೋನ್ ಗಳನ್ನು ಕಡಿಮೆ ಮಾಡುತ್ತದೆ:
ಬೆಳಗ್ಗೆ ಎದ್ದು ನಗುವ ವ್ಯಾಯಾಮ
ಮಾಡಿದರೆ ಒತ್ತಡದ ಹಾರ್ಮೋನ್ ಗಳು
ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಅಲ್ಲದೆ
ಈ ರೀತಿ ಮಾಡಿದರೆ
ದಿನಪೂರ್ತಿ ಸಂತೋಷದಿಂದ ಇರಬಹುದು.
2. ತಲೆನೋವು
ಕಡಿಮೆಯಾಗುತ್ತದೆ: ಕೆಲವರಿಗೆ ದಿನವೂ ತಲೆನೋವು ಕಾಣಿಸಿಕೊಳುತ್ತದೆ.
ಈ ರೀತಿ ಒತ್ತಡದಿಂದಾಗಿ
ಉಂಟಾಗುತ್ತದೆ. ಇಂತಹವರು ಒತ್ತಡವನ್ನು ಮರೆತು
ಸಂತೋಷದಿಂದ ಇರಲು ಪ್ರಯತ್ನಿಸಿದರೆ ತಲೆನೋವು
ಕಡಿಮೆಯಾಗುವುದು.
3. ಮೈಕೈ
ನೋವು ಬರುವುದಿಲ್ಲ: ಸಂತೋಷದಿಂದ ಇರುವ ವ್ಯಕ್ತಿಗಳಿಗೆ ಮೈಕೈ
ನೋವು ಕಾಣಿಸಿಕೊಳ್ಳುವುದಿಲ್ಲ. ಒತ್ತಡವಿದ್ದರೆ ಮೈಕೈ ನೋವು, ಸುಸ್ತು
ಕಾಣಿಸಿಕೊಳ್ಳುವುದು.
4. ಹೃದಯದ
ಆರೋಗ್ಯಕ್ಕೆ ಒಳ್ಳೆಯದು: ಹೃದಯಾಘಾತ ಮಾನಸಿಕ ಒತ್ತಡದಿಂದಾಗಿ ಉಂಟಾಗುತ್ತದೆ.
ಆದ್ದರಿಂದ ಚಿಂತೆ ಹಾಗೂ ಒತ್ತಡದಿಂದ
ಮುಕ್ತರಾಗಿಲು ಪ್ರಯತ್ನಿಸಬೇಕು.
5. ತಲೆಸುತ್ತು
ಬರುವುದಿಲ್ಲ: ಸ್ನಾಯುಗಳು ಬಿಗಿದುಕೊಂಡು ಕೆಲಸ ಮಾಡದಿದ್ದಾಗ ತಲೆನೋವು
ಕಾಣಿಸಿಕೊಳ್ಳುತ್ತದೆ. ಸಂತೋಷದಿಂದ ಇದ್ದರೆ ಸ್ನಾಯುಗಳು ಸಡಿಲವಾಗುತ್ತದೆ
ಮತ್ತೆ ತಲೆನೋವು ಕಾಣಿಸಿಕೊಳ್ಳುದಿಲ್ಲ.
6. ಆಯುಸ್ಸು
ಹೆಚ್ಚು: ಸಂತೋಷವಾಗಿ ಇರುವವರು ಆರೋಗ್ಯವಂತರಾಗಿ ಇರುತ್ತಾರೆ.
ಇದರಿಂದ ಆಯುಸ್ಸು ಕೂಡ ಹೆಚ್ಚುವುದು.
Friday, July 20, 2012
"ರಾಜೇಶ್ ಖನ್ನಾ" ಚಿತೆ ಆರುವ ಮುನ್ನವೇ ಗೆಳತಿಯ ನೋಟೀಸು.
ಬಾಲಿವುಡ್ ಸೂಪರ್ ಸ್ಟಾರ್ ರಾಜೇಶ್ ಖನ್ನಾ ವಿಧಿವಶರಾದ ಬಳಿಕ ಅವರ ಕೊನೆಯಾಸೆಯಂತೆ ಅವರ 'ಆಶೀರ್ವಾದ್' ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡಲಾಗುತ್ತಿದೆ. ಪಶ್ಚಿಮ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ಸಮುದ್ರಾಭಿಮುಖವಾಗಿ ಈ ಬಂಗಲೆ ಇದೆ.
ತನ್ನ ನಿಧನದ ನಂತರ ಈ ಬಂಗಲೆ ವಸ್ತುಸಂಗ್ರಹಾಲಯವಾಗಬೇಕು ಎಂದು ಖನ್ನಾ ಬಯಸಿದ್ದರು. ಗುರುವಾರವಷ್ಟೇ ಅವರ (ಜು.19) ಅಂತ್ಯಕ್ರಿಯೆ ನೆರವೇರಿತು. ಇನ್ನೂ ಅವರ ಚಿತೆ ಆರಿಲ್ಲ, ಅಷ್ಟರಲ್ಲಾಗಲೇ ಖನ್ನಾ ಜೊತೆಗೆ ಲಿವ್ ಇನ್ ಸಂಬಂಧ ಇಟ್ಟುಕೊಂಡಿದ್ದ 'ಮುಸ್ಸಂಜೆ' ಗೆಳೆತಿ ಲೀಗಲ್ ನೋಟೀಸು ರವಾನಿಸಿದ್ದಾರೆ.
ರಾಜೇಶ್ ಖನ್ನಾ ಬಾಳಿ ಬದುಕಿದ 'ಆಶೀರ್ವಾದ್' ಬಂಗಲೆ ತನಗೆ ಸೇರಬೇಕಾದದ್ದು ಎಂದು ಅನಿತಾ ಅದ್ವಾನಿ ಎಂಬುವವರು ಲೀಗಲ್ ನೋಟೀಸ್ ಜಾರಿ ಮಾಡಿದ್ದಾರೆ. ಖನ್ನಾ ಕಾಕಾ ಅವರ ಸಂಧ್ಯಾಕಾಲದಲ್ಲಿ ಅವರ ಜೊತೆಗಿದ್ದು ಕೊನೆಯ ಕಾಲದಲ್ಲಿ ಅವರಿಗೆ ಆಸರೆಯಾಗಿದ್ದರು ಅನಿತಾ.
ಕೌಟಂಬಿಕ ದೌರ್ಜನ್ಯ ಕಾಯಿದೆ ಪ್ರಕಾರ ಖನ್ನಾ ಕುಟುಂಬಿಕರಿಗೆ ಲೀಗಲ್ ನೋಟೀಸ್ ಜಾರಿ ಮಾಡಿದ್ದಾರೆ. ಕಳೆದ ಒಂದು ತಿಂಗಳಿಂದ ಅನಿತಾರನ್ನು ಆಶೀರ್ವಾದ ಬಂಗಲೆಯಿಂದ ಹೊರದಬ್ಬಲು ಖನ್ನಾ ಕುಟುಂಬಿಕರು ಕಿರುಕುಳ ನೀಡುತ್ತಿದ್ದರು ಎಂಬ ಸುದ್ದಿಯೂ ಇದೆ.
ಕಳೆದ ಎಂಟು ವರ್ಷಗಳಿಂದ ಖನ್ನಾ ಅವರೊಂದಿಗೆ ಅನಿತಾ ಅದ್ವಾನಿ ಸಹ ಬಾಳ್ವೆ ನಡೆಸುತ್ತಿದ್ದರು. ಹಾಗಾಗಿ ಈ ಮನೆಯ ಮೇಲೆ ತಮಗೂ ಹಕ್ಕಿದೆ ಎಂದು ಮೃದುಲಾ ಕದಮ್ ಎಂಬ ವಕೀಲರಿಂದ ಖನ್ನಾ ಕುಟುಂಬಿಕರಿಗೆ ಲೀಗಲ್ ನೋಟೀಸ್ ಕಳುಹಿಸಿದ್ದಾರೆ.
ಖನ್ನಾ ಕುಟುಂಬಿಕರು ಹಾಗೂ ಅನಿತಾ ನಡುವೆ ಮುಸುಕಿನ ಗುದ್ದಾಟ ಬಹಳ ದಿನಗಳಿಂದಲೂ ನಡೆಯುತ್ತಿತ್ತಂತೆ. ಮೊನ್ನೆ ಅವರ ನಿಧನದ ಬಳಿಕ ಈ ಕುಟುಂಬ ಕಲಹ ಬೀದಿಗೆ ಬಿದ್ದಿದೆ. ಆಗಲೇ ಖನ್ನಾ ಹಾಗೂ ಈಕೆಯ ನಡುವಿನ ಸಂಬಂಧ ಜಗಜ್ಜಾಹೀರಾಗಿತ್ತು.
ಸಾಕಷ್ಟು ದಿನ ಖನ್ನಾ ಅವರಿಂದ ದೂರವಿದ್ದ ಡಿಂಪಲ್ ಕಪಾಡಿಯಾ, ಅಕ್ಷಯ್ ಕುಮಾರ್, ಟ್ವಿಂಕಲ್ ಹಾಗೂ ರಿಂಕಿ ಅವರು ಖನ್ನಾ ಅವರ ಕೊನೆಯ ದಿನಗಳಲ್ಲಿ ಅವರಿಗೆ ಹತ್ತಿರವಾಗಿದ್ದರು. ಕಳೆದ ಹತ್ತು ವರ್ಷಗಳಿಂದ ತಾವು ಈ ಮನೆಯಲ್ಲಿದ್ದೇನೆ ಎಂದಿರುವ ಅನಿತಾ, ತಮ್ಮ ಕೊನೆ ದಿನಗಳಲ್ಲಿ 'ಕಾಕಾಜಿ' ಅವರು ಸ್ಮರಣಶಕ್ತಿ ಶಕ್ತಿ ಕಳೆದುಕೊಂಡಿದ್ದರು.
ಒಮ್ಮೊಮ್ಮೆ ನನ್ನನೂ ಗುರುತು ಹಿಡಿಯುತ್ತಿರಲಿಲ್ಲ. ಅವರ ಮನೆಯವರು ಬಂದರೆ ಅವರನ್ನು ಹೊರಗೆ ತಳ್ಳುತ್ತಿದ್ದರು. ಅವರ ಕುಟುಂಬದವರೊಂದಿಗೂ ಮಾತನಾಡುತ್ತಿರಲಿಲ್ಲ. ಕಡೆ ದಿನಗಳಲ್ಲಿ ನನನ್ನೂ ದೂರ ಮಾಡುತ್ತಿದ್ದರು. ಈಗ ಅವರಿಲ್ಲದ ನೋವು ನನ್ನನ್ನು ತೀವ್ರವಾಗಿ ಬಾಧಿಸುತ್ತಿದೆ. ಈಗ ಅವರಿಲ್ಲ. ನಾನು ಎಲ್ಲಿಗೆ ಹೋಗಲಿ? ಎಂದು 'ಮಿಡ್ ಡೇ' ಪತ್ರಿಕೆ ಜೊತೆಗೆ ಅನಿತಾ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
Friday, June 22, 2012
ರಾಯಲ್ ಎನ್ ಫೀಲ್ಡ್ ಬೈಕ್ ಭಾರತಕ್ಕೆ ಬಂದದ್ದು ಹೀಗೆ.
ರಾಯಲ್ ಎನ್ ಫೀಲ್ಡ್ ಬೈಕ್ ಇಷ್ಟವಾಗಲು ಎಷ್ಟು ಕಾರಣವಾದರೂ ಕೊಡಬಹುದು. ಅದರ ಸದ್ದು,
ರಾಜಗಾಂಭಿರ್ಯ, ಗತ್ತು, ವಿನ್ಯಾಸ, ಬೃಹತ್ ಆಕೃತಿ ಎಲ್ಲವೂ ಎಲ್ಲರಿಗೂ ಇಷ್ಟ. ಇದೇ ಕಾರಣಕ್ಕೆ ಹೆಚ್ಚಿನವರಿಗೆ
ಬುಲೆಟ್ ಅಂದ್ರೆ ಪಂಚ ಪ್ರಾಣ. ಈಗ ಭಾರತದಲ್ಲಿ ಹತ್ತು ಹಲವು ವಿನೂತನ ಮಾದರಿಗಳ ಎನ್ ಫೀಲ್ಡ್ ಬೈಕ್
ಗಳು ದೊರಕುತ್ತಿವೆ. ಆದರೆ ಈ ಬುಲೆಟ್ ಭಾರತಕ್ಕೆ ಬಂದದ್ದು ಎಲ್ಲ ಬೈಕ್ ಗಳಂತೆ ಅಲ್ಲ!
ಭಾರತಕ್ಕೆ ಎನ್ ಫೀಲ್ಡ್ ರಾಜಗತ್ತಿನಿಂದ ಬಂದಿತ್ತು. ಸ್ವಾತಂತ್ರ್ಯ ಸಿಕ್ಕ ನಂತರ 1955ರ ಸಮಯದಲ್ಲಿ ಭಾರತ ಸರಕಾರ ಪೋಲಿಸ್ ಮತ್ತು ಸೇನಾ ಅವಶ್ಯಕತೆಗೆ ಸೂಕ್ತವಾದ ಬೈಕೊಂದರ ಹುಡುಕಾಟದಲ್ಲಿತ್ತು. ಆಗ ದೇಶದ ಕಣ್ಣಿಗೆ ಬಿದ್ದದ್ದು ಇಂಗ್ಲೆಂಡ್ ನ ಎನ್ ಫೀಲ್ಡ್. ಗಡಿಯಲ್ಲಿ ಸೈನಿಕರು ಪಹರೆ ಕಾಯಲು, ಸೇನಾ ಅವಶ್ಯಕತೆಗೆ ಸೂಕ್ತವಾಗಿತ್ತು ಈ ಬುಲೆಟ್. ಅದಕ್ಕಾಗಿ ಭಾರತ 500ಸಿಸಿ ಸಾಮರ್ಥ್ಯದ ಸುಮಾರು 800 ಬುಲೆಟ್ ಗಳಿಗೆ ಆರ್ಡರ್ ಮಾಡಿತ್ತು. ಹೀಗೆ ಸೈನಿಕ ಅವಶ್ಯಕತೆಗಾಗಿ ಬುಲೆಟ್ ಭಾರತಕ್ಕೆ ಪ್ರವೇಶಿಸಿತ್ತು.
ಆದರೆ ಮತ್ತೆ ಭಾರತ ಇನ್ನಷ್ಟು ಬುಲೆಟ್ ಬೈಕ್ ಬೇಕೆಂದು ಆರ್ಡರ್ ಮಾಡಿತ್ತು. ಭಾರತದ ಬೇಡಿಕೆಯನ್ನು ಪೂರೈಸುವುದು ಕಷ್ಟ ಎಂಬುದನ್ನು ಮನಗಂಡ ಕಂಪನಿ ಭಾರತದಲ್ಲಿಯೇ ಉತ್ಪಾದಿಸುವ ಆಶಯ ವ್ಯಕ್ತಪಡಿಸಿತ್ತು. ಇದಕ್ಕೆ ಭಾರತದಿಂದ ಒಪ್ಪಿಗೆ ದೊರಕಿತು. ಪರಿಣಾಮವಾಗಿ ಮದ್ರಾಸ್ ಮೋಟರ್ ನೊಂದಿಗಿನ ಸಹಭಾಗಿತ್ವದಲ್ಲಿ ಎನ್ ಫೀಲ್ಡ್ ಇಂಡಿಯಾ ಎಂಬ ಕಂಪನಿ ಆರಂಭಿಸಿತ್ತು. ಭಾರತದ ಕಂಪನಿಗೆ ರಾಯಲ್ ಎನ್ ಫೀಲ್ಡ್ ಎಂಬ ಹೆಸರು ಬಳಕೆ ಮಾಡುವ ಹಕ್ಕು ದೊರಕಿದ್ದು 1995ರಲ್ಲಿ. ಹೀಗೆ 350 ಸಿಸಿ ಬೈಕ್ ಗಳಿಗೆ ಪರವಾನಿಗೆ ಪಡೆದು ಭಾರತದಲ್ಲಿ ಕಂಪನಿ ಉತ್ಪಾದನೆ ಆರಂಭಿಸಿ ದೇಶದ ರಸ್ತೆಯ ರಾಜನಾಗಿ ಮೆರೆಯಿತು. ಮತ್ತೆ ಈ ರಾಜಾ ಬೈಕ್ ಹಿಂತುರುಗಿ ನೋಡಲೇ ಇಲ್ಲ. ಇಂದಿನವರೆಗೂ ಒಂದಿಷ್ಟು ಗಾಂಭಿರ್ಯ ಕಳೆದುಕೊಳ್ಳದೇ ರೈಡ್ ಮಾಡುತ್ತಲೇ ಇದೆ.
ಭಾರತಕ್ಕೆ ಎನ್ ಫೀಲ್ಡ್ ರಾಜಗತ್ತಿನಿಂದ ಬಂದಿತ್ತು. ಸ್ವಾತಂತ್ರ್ಯ ಸಿಕ್ಕ ನಂತರ 1955ರ ಸಮಯದಲ್ಲಿ ಭಾರತ ಸರಕಾರ ಪೋಲಿಸ್ ಮತ್ತು ಸೇನಾ ಅವಶ್ಯಕತೆಗೆ ಸೂಕ್ತವಾದ ಬೈಕೊಂದರ ಹುಡುಕಾಟದಲ್ಲಿತ್ತು. ಆಗ ದೇಶದ ಕಣ್ಣಿಗೆ ಬಿದ್ದದ್ದು ಇಂಗ್ಲೆಂಡ್ ನ ಎನ್ ಫೀಲ್ಡ್. ಗಡಿಯಲ್ಲಿ ಸೈನಿಕರು ಪಹರೆ ಕಾಯಲು, ಸೇನಾ ಅವಶ್ಯಕತೆಗೆ ಸೂಕ್ತವಾಗಿತ್ತು ಈ ಬುಲೆಟ್. ಅದಕ್ಕಾಗಿ ಭಾರತ 500ಸಿಸಿ ಸಾಮರ್ಥ್ಯದ ಸುಮಾರು 800 ಬುಲೆಟ್ ಗಳಿಗೆ ಆರ್ಡರ್ ಮಾಡಿತ್ತು. ಹೀಗೆ ಸೈನಿಕ ಅವಶ್ಯಕತೆಗಾಗಿ ಬುಲೆಟ್ ಭಾರತಕ್ಕೆ ಪ್ರವೇಶಿಸಿತ್ತು.
ಆದರೆ ಮತ್ತೆ ಭಾರತ ಇನ್ನಷ್ಟು ಬುಲೆಟ್ ಬೈಕ್ ಬೇಕೆಂದು ಆರ್ಡರ್ ಮಾಡಿತ್ತು. ಭಾರತದ ಬೇಡಿಕೆಯನ್ನು ಪೂರೈಸುವುದು ಕಷ್ಟ ಎಂಬುದನ್ನು ಮನಗಂಡ ಕಂಪನಿ ಭಾರತದಲ್ಲಿಯೇ ಉತ್ಪಾದಿಸುವ ಆಶಯ ವ್ಯಕ್ತಪಡಿಸಿತ್ತು. ಇದಕ್ಕೆ ಭಾರತದಿಂದ ಒಪ್ಪಿಗೆ ದೊರಕಿತು. ಪರಿಣಾಮವಾಗಿ ಮದ್ರಾಸ್ ಮೋಟರ್ ನೊಂದಿಗಿನ ಸಹಭಾಗಿತ್ವದಲ್ಲಿ ಎನ್ ಫೀಲ್ಡ್ ಇಂಡಿಯಾ ಎಂಬ ಕಂಪನಿ ಆರಂಭಿಸಿತ್ತು. ಭಾರತದ ಕಂಪನಿಗೆ ರಾಯಲ್ ಎನ್ ಫೀಲ್ಡ್ ಎಂಬ ಹೆಸರು ಬಳಕೆ ಮಾಡುವ ಹಕ್ಕು ದೊರಕಿದ್ದು 1995ರಲ್ಲಿ. ಹೀಗೆ 350 ಸಿಸಿ ಬೈಕ್ ಗಳಿಗೆ ಪರವಾನಿಗೆ ಪಡೆದು ಭಾರತದಲ್ಲಿ ಕಂಪನಿ ಉತ್ಪಾದನೆ ಆರಂಭಿಸಿ ದೇಶದ ರಸ್ತೆಯ ರಾಜನಾಗಿ ಮೆರೆಯಿತು. ಮತ್ತೆ ಈ ರಾಜಾ ಬೈಕ್ ಹಿಂತುರುಗಿ ನೋಡಲೇ ಇಲ್ಲ. ಇಂದಿನವರೆಗೂ ಒಂದಿಷ್ಟು ಗಾಂಭಿರ್ಯ ಕಳೆದುಕೊಳ್ಳದೇ ರೈಡ್ ಮಾಡುತ್ತಲೇ ಇದೆ.
Saturday, May 26, 2012
15 ಸಚಿವರ ವಿರುದ್ಧ ಮೊದ್ಲು ಕ್ರಮ ಕೈಗೊಳ್ಳಿ:ಪ್ರಧಾನಿಗೆ ಅಣ್ಣಾ ಟೀಮ್
ಆಡಳಿತಾರೂಢ ಯುಪಿಎ ಸರ್ಕಾರದಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ 15ಮಂದಿ ಸಚಿವರ ವಿರುದ್ಧ ಪ್ರತ್ಯೇಕ ತನಿಖಾ ಏಜೆನ್ಸಿಯಿಂದ ತನಿಖೆ ನಡೆಸಬೇಕೆಂದು' ಅಣ್ಣಾ ತಂಡದ ಪ್ರಮುಖ ಸದಸ್ಯ ಅರವಿಂದ ಕೇಜ್ರಿವಾಲ್ ಶನಿವಾರ ಆಗ್ರಹಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ 15 ಸಚಿವರ ವಿರುದ್ಧ ಪ್ರತ್ಯೇಕ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಅಣ್ಣಾ ತಂಡ ಪತ್ರ ಬರೆದು ಮನವಿ ಮಾಡಿಕೊಂಡಿರುವುದಾಗಿ ವಿವರಿಸಿದರು.ಪತ್ರದಲ್ಲಿ 15 ಮಂದಿ ಸಚಿವರ ಹೆಸರನ್ನೂ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ ತನಿಖಾ ತಂಡ ರಚಿಸಲು ಆರು ಮಂದಿ ನ್ಯಾಯಾಧೀಶರ ಹೆಸರನ್ನೂ ಕೂಡ ನಮೂದಿಸಲಾಗಿದೆ. ಅದರಲ್ಲಿ ಸರ್ಕಾರ ಯಾರನ್ನ ಬೇಕಾದರೂ ಮುಖ್ಯಸ್ಥರನ್ನಾಗಿ ಮಾಡಿ ಸಮಿತಿ ರಚಿಸಲಿ ಎಂದು ಕೇಜ್ರಿವಾಲ್ ಹೇಳಿದರು.ಎಲ್ಲಿಯವರೆಗೆ ಈ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಪ್ರಬಲ ಲೋಕಪಾಲ್ ಮಸೂದೆ ಜಾರಿಯಾಗಲು ಸಾಧ್ಯವಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದರು.ನಾವು ಸ್ವತಂತ್ರ ತನಿಖಾ ಏಜೆನ್ಸಿಗಾಗಿ ಒತ್ತಾಯಿಸುತ್ತಿದ್ದೇವೆ. ಯಾಕೆಂದರೆ ಸಿಬಿಐ ಅಥವಾ ಆದಾಯ ತೆರಿಗೆ ಇಲಾಖೆಯಂತಹವು ನೇರವಾಗಿ ರಾಜಕಾರಣಿಗಳ ಹಿಡಿತದಲ್ಲಿದೆ. ಹಾಗಾಗಿ ಸಚಿವರ ವಿರುದ್ಧದ ತನಿಖೆಯಲ್ಲಿ ಈ ಸಂಸ್ಥೆಗಳಿಂದ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಿಲ್ಲ ಎಂದರು.
'
'
Sunday, May 20, 2012
ನಾನು ಹಿರೇಮಠ್ರರನು ನೋಡಿದ್ದು ಸುಮಾರು ಮೂವತ್ತು ವರ್ಷಗಳ ಹಿಂದೆ ಪಶ್ಚಿಮ ಘಟ್ಟ ಉಳಿಸಿ ಜಾತಾದಲ್ಲಿ ಅವರ ಹೋರಾಟದ ಬದುಕುನು ಕಣ್ಣಾರೆ ಕಂಡವನು ನಾನು, ಆ ಜಾತಾದಲ್ಲಿ ಬಾಗವಹಿಸಿದ ಹೆಮ್ಮೆ ನನಗೆ ಆಗ ನಾನು ರಾಣಿಬೇನ್ನೂರು R T E S ಕಾಲೇಜಿನಲ್ಲಿ ಓದುತ್ತಿದ್ದೇ ಅವರು ಮೆಡ್ಲೆರೀ ಗ್ರಾಮದಲ್ಲಿ ಬಹಳಷ್ಟು ಸುಧಾರಣಿ ತರುವಲ್ಲಿ ಯಶಸ್ವಿಯಾಗಿದ್ದರು. ಆಮೇಲೆ ಹಿರೇಮಠ್ರರನು ನೋಡಿದ್ದು ಇತ್ತೀಚಿನ ದಿನಗಳಲ್ಲಿ.
ಹಿರೇಮಠ್: ಗಣಿಗಾರಿಕೆ ವಿರುದ್ಧ ಗಟ್ಟಿ ಧ್ವನಿ ಎತ್ತಿರುವ ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ತೊಡರುಗಲ್ಲಾಗಿ, ಭ್ರಷ್ಟಾಚಾರದ ವಿರುದ್ಧ ನಾಡಿನ ಪ್ರಜ್ಞಾವಂತರ ಸಾಕ್ಷಿಪ್ರಜ್ಞೆಯಾಗಿರುವ ಈ ಹಿರೇಮಠ್ ಅದೇ ಹುಬ್ಬಳ್ಳಿ-ಧಾರವಾಡದಲ್ಲಿರುವ ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷರು, ಅವರು ಸಂಗಯ್ಯ ರಾಚಯ್ಯ ಹಿರೇಮಠ್, ಅದೇ ಕಣ್ರಿ ಎಸ್ ಆರ್ ಹಿರೇಮಠ್. ಜನಾರ್ದನ ರೆಡ್ಡಿ ಸೇರಿದಂತೆ ಇನ್ನಿತರೆ ಅಕ್ರಮ ಗಣಿವೀರರು ಕೊರೆದಿಟ್ಟಿರುವ ಗಣಿ ಪಾತಾಳದಿಂದಲೇ ಅಕ್ರಮ ಗಣಿಗಾರಿಕೆ ವಿರುದ್ಧ ಗಟ್ಟಿ ಧ್ವನಿ ಎತ್ತಿರುವ ಸಾದಾಸೀದಾ ಮನುಷ್ಯ ಈ ಹಿರೇಮಠ್. ಹಿರೇಮಠ್ ಹುಟ್ಟು ಧಾರವಾಡದ ಬೆಳವಂಕಿಯಲ್ಲಿ 1944ರಲ್ಲಿ. ಶಿಕ್ಷಣ- ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರ. ಉನ್ನತ ವ್ಯಾಸಂಗ - 1969ರಲ್ಲಿ ಅಮೆರಿಕದಲ್ಲಿ ಎಂಎಸ್ ಜತೆಗೆ, ಎಂಬಿಎ. 10 ವರ್ಷಗಳ ಕಾಲ ಅಮೆರಿಕದಲ್ಲಿಯೇ ಸೇವೆ. ಆ ನಂತರ ತಾಯ್ನಾಡಿನ ಸೇವೆಗೆ ಮರಳಿದ ಹಿರೇಮಠ್, 1984ರಲ್ಲಿ ಧಾರವಾಡದಲ್ಲಿ 'ಸಮಾಜ ಪರಿವರ್ತನಾ ಸಮುದಾಯ'ವನ್ನು ಹುಟ್ಟುಹಾಕಿದರು. ತನ್ಮೂಲಕ ಪರಿಸರ, ಪಂಚಾಯತ್ ರಾಜ್ ಕ್ಷೇತ್ರಗಳಲ್ಲಿ ಹೋರಾಟ. ಅದಕ್ಕಾಗಿ, 1992ರಲ್ಲಿ ಇಂದಿರಾಗಾಂಧಿ ಪರ್ಯಾವರಣ ಪುರಸ್ಕಾರ ಮುಕುಟ. ಇದೀಗ ನಿಮಗೆಲ್ಲ ಗೊತ್ತಿರುವಂತೆ 'ಮೈನಿಂಗ್ ಮಾಫಿಯಾ' ವಿರುದ್ಧ ಅವರದು ಸುಪ್ರೀಂ ಹೋರಾಟ.
Tuesday, May 15, 2012
ಕಿಡ್ನಿಸ್ಟೋನ್ ನಿವಾರಣೆಗೆ ಮನೆಮದ್ದು.
ಕಿಡ್ನಿಯಲ್ಲಿ ಕಲ್ಲು (ಕಿಡ್ನಿ ಸ್ಟೋನ್) ಬಂದರೆ ಅದನ್ನು ಶಸ್ತ್ರ ಚಿಕಿತ್ಸೆ ಮಾಡಬೇಕಾಗುತ್ತದೆ. ಆದರೆ calculusನಲ್ಲಿ 5mmನಷ್ಟು ಇದ್ದರೆ ಅದನ್ನು ಮನೆ ಮದ್ದಿನಿಂದ ಹೋಗಲಾಡಿಸಬಹುದಾಗಿದೆ.ಈ ಕೆಳಗಿನ ವಿಧಾನಗಳು ಕಿಡ್ನಿಯಲ್ಲಿರುವ ಕಲ್ಲು ತೆಗೆಯಲು ಮಾತ್ರವಲ್ಲ, ಕಿಡ್ನಿಯಲ್ಲಿ ಕಲ್ಲು ಉಂಟಾಗದಂತೆ ತಡೆಯಲು ಸಹಕಾರಿಯಾಗಿದೆ.
1. ನೀರು: ಸಾಕಷ್ಟು ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹದಲ್ಲಿ ನಿರಿನಂಶ ಕಡಿಮೆಯಾದರೆ ನಿಶ್ಯಕ್ತಿ, ಕಿಡ್ನಿಯಲ್ಲಿ ಕಲ್ಲು , ತ್ವಚೆ ಸೌಂದರ್ಯ ಹಾಳಾಗುವುದು ಮುಂತಾದ ಸಮಸ್ಯೆ ಉಂಟಾಗುತ್ತದೆ. ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಂಡರೆ ದಿನಕ್ಕೆ 5-6 ಲೀಟರ್ ನೀರು ಕುಡಿದರೆ ಕಲ್ಲು ಮೂತ್ರದಲ್ಲಿ ಹೊರಹೋಗುವುದು. 2. ನೀರಿನಲ್ಲಿ ನೆನೆ ಹಾಕಿದ ಮೆಂತೆ: ಒಂದು ಚಮಚ ಮೆಂತೆಯನ್ನು ಒಂದು ಲೋಟ ನೀರಿನಲ್ಲಿ ನೆನೆ ಹಾಕಿ ಬೆಳ್ಳಗ್ಗೆ ತಿನ್ನಬೇಕು. ಈ ರೀತಿ ಮಾಡಿದರೆ ಕಿಡ್ನಿಯಲ್ಲಿರುವ ಕಲ್ಲು ಮಾತ್ರವಲ್ಲ ದೇಹದಲ್ಲಿರುವ ಕಷ್ಮಲಗಳನ್ನು ತೊಡೆದು ಹಾಕಲು ಸಹಕಾರಿಯಾಗಿದೆ. 3. ತಾಟಿನುಂಗು: ಇದನ್ನು ಪಾಮ್ ಫ್ರೂಟ್ ಅಂತ ಕೂಡ ಕರೆಯುತ್ತಾರೆ. ಇದರಿಂದ 'ತಾಲ್ ಮಿಶ್ರಿ' ಎಂಬ ಸಕ್ಕರೆ ತಯಾರಿಸಲಾಗುವುದು. ಇದನ್ನು ಒಂದು ರಾತ್ರಿ ನೀರಿನಲ್ಲಿ ಕಲೆಸಿ ಬೆಳಗ್ಗೆ ಎದ್ದು ಕುಡಿಯುವುದು ಒಳ್ಳೆಯದು. ಇದು ಸಿಗುವುದು ಸ್ವಲ್ಪ ಕಷ್ಟ. ಆದರೆ ಇದು ಕಿಡ್ನಿಯಲ್ಲಿರುವ ಕಲ್ಲು ನಿವಾರಣೆಗೆ ತುಂಬಾ ಸಹಕಾರಿಯಾಗಿದೆ. ಇಲ್ಲದಿದ್ದರೆ ತಾಟಿನುಂಗು ದಿನಾ ತಿನ್ನುವುದು ಕೂಡ ಒಳ್ಳೆಯದು. 4. ಬಾಳೆ ದಿಂಡು: ಬಾಳೆ ದಿಂಡಿನ ಒಳಭಾಗವನ್ನು ಪಲ್ಯ ಮಾಡಿ ತಿನ್ನಲಾಗುವುದು. ಇದು ಕಿಡಿಯಲ್ಲಿರುವ ಕಲ್ಲನ್ನು ಹೋಗಲಾಡಿಸಲು ಪರಿಣಾಮಕಾರಿಯಾದ ಮನೆ ಔಷಧಿಯಾಗಿದೆ. 5. ಕೊತ್ತಂಬರಿ ಸೊಪ್ಪು: ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದು ಕೂಡ ತುಂಬಾ ಒಳ್ಳೆಯದು.
1. ನೀರು: ಸಾಕಷ್ಟು ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹದಲ್ಲಿ ನಿರಿನಂಶ ಕಡಿಮೆಯಾದರೆ ನಿಶ್ಯಕ್ತಿ, ಕಿಡ್ನಿಯಲ್ಲಿ ಕಲ್ಲು , ತ್ವಚೆ ಸೌಂದರ್ಯ ಹಾಳಾಗುವುದು ಮುಂತಾದ ಸಮಸ್ಯೆ ಉಂಟಾಗುತ್ತದೆ. ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಂಡರೆ ದಿನಕ್ಕೆ 5-6 ಲೀಟರ್ ನೀರು ಕುಡಿದರೆ ಕಲ್ಲು ಮೂತ್ರದಲ್ಲಿ ಹೊರಹೋಗುವುದು. 2. ನೀರಿನಲ್ಲಿ ನೆನೆ ಹಾಕಿದ ಮೆಂತೆ: ಒಂದು ಚಮಚ ಮೆಂತೆಯನ್ನು ಒಂದು ಲೋಟ ನೀರಿನಲ್ಲಿ ನೆನೆ ಹಾಕಿ ಬೆಳ್ಳಗ್ಗೆ ತಿನ್ನಬೇಕು. ಈ ರೀತಿ ಮಾಡಿದರೆ ಕಿಡ್ನಿಯಲ್ಲಿರುವ ಕಲ್ಲು ಮಾತ್ರವಲ್ಲ ದೇಹದಲ್ಲಿರುವ ಕಷ್ಮಲಗಳನ್ನು ತೊಡೆದು ಹಾಕಲು ಸಹಕಾರಿಯಾಗಿದೆ. 3. ತಾಟಿನುಂಗು: ಇದನ್ನು ಪಾಮ್ ಫ್ರೂಟ್ ಅಂತ ಕೂಡ ಕರೆಯುತ್ತಾರೆ. ಇದರಿಂದ 'ತಾಲ್ ಮಿಶ್ರಿ' ಎಂಬ ಸಕ್ಕರೆ ತಯಾರಿಸಲಾಗುವುದು. ಇದನ್ನು ಒಂದು ರಾತ್ರಿ ನೀರಿನಲ್ಲಿ ಕಲೆಸಿ ಬೆಳಗ್ಗೆ ಎದ್ದು ಕುಡಿಯುವುದು ಒಳ್ಳೆಯದು. ಇದು ಸಿಗುವುದು ಸ್ವಲ್ಪ ಕಷ್ಟ. ಆದರೆ ಇದು ಕಿಡ್ನಿಯಲ್ಲಿರುವ ಕಲ್ಲು ನಿವಾರಣೆಗೆ ತುಂಬಾ ಸಹಕಾರಿಯಾಗಿದೆ. ಇಲ್ಲದಿದ್ದರೆ ತಾಟಿನುಂಗು ದಿನಾ ತಿನ್ನುವುದು ಕೂಡ ಒಳ್ಳೆಯದು. 4. ಬಾಳೆ ದಿಂಡು: ಬಾಳೆ ದಿಂಡಿನ ಒಳಭಾಗವನ್ನು ಪಲ್ಯ ಮಾಡಿ ತಿನ್ನಲಾಗುವುದು. ಇದು ಕಿಡಿಯಲ್ಲಿರುವ ಕಲ್ಲನ್ನು ಹೋಗಲಾಡಿಸಲು ಪರಿಣಾಮಕಾರಿಯಾದ ಮನೆ ಔಷಧಿಯಾಗಿದೆ. 5. ಕೊತ್ತಂಬರಿ ಸೊಪ್ಪು: ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದು ಕೂಡ ತುಂಬಾ ಒಳ್ಳೆಯದು.
Thursday, April 19, 2012
Thursday, April 5, 2012
ಹಳೇ ಮೊಬೈಲಿನಲ್ಲಿ ಚಿನ್ನವಿದೆ, ಬಿಸಾಕಬೇಡಿ
ನಂಬಿದರೆ ನಂಬಿ ಬಿಟ್ಟರೆ ಬಿಡಿ, ನಿಮ್ಮ ಮೊಬೈಲ್ ಫೋನಿನಲ್ಲಿ ಚಿನ್ನವಿದೆ. ಅದೂ ಅಲ್ಲದೆ ತಾಮ್ರ, ಬೆಳ್ಳಿ ಕೂಡ ಇದೆ. ಹೇಗೆ ಅಂತೀರಾ, ಮೊಬೈಲುಗಳಲ್ಲಿ ವಿದ್ಯುತ್ ಸಂಚರಿಸಲು ವಾಹಕಗಳನ್ನು ಬಳಸುತ್ತಾರೆ. ಚಿನ್ನ, ಬೆಳ್ಳಿ ಹಾಗು ತಾಮ್ರಗಳು ಉತ್ತಮ ವಾಹಕಗಳಾಗಿರುವುದರಿಂದ ಅವುಗಳನ್ನು ಮೊಬೈಲ್ನಲ್ಲಿ ಬಳಸುವ ಅವಶ್ಯಕತೆ ಬರುತ್ತದೆ. ಪ್ರತಿಯೊಂದು ಮೊಬೈಲ್ನಲ್ಲೂ ಕನಿಷ್ಠ 0.01% ನಷ್ಟು ಚಿನ್ನ ಇದ್ದೇ ಇರುತ್ತದಂತೆ. ಒಂದು ಟನ್ ಗುಜರಿ ಮೊಬೈಲ್ ನಿಂದ 150 ಗ್ರಾಂ ಚಿನ್ನವನ್ನು ಪಡೆಯಬಹುದಂತೆ!! ವಿಶ್ವದಲ್ಲಿ ಪ್ರತಿ ವರ್ಷ 400 ಮಿಲಿಯನ್ ಮೊಬೈಲ್ ಫೋನುಗಳು ಗುಜರಿಗೆ ಬರುತ್ತವೆಯಂತೆ. ಅದರಲ್ಲಿ ಚೀನಾ ದೇಶದವರೇ 100 ಮಿಲಿಯನ್ ಫೋನುಗಳನ್ನು ಬಿಸಾಕುತ್ತಾರೆ. ಅದರ ಒಟ್ಟು ತೂಕವೇ 10 ಸಾವಿರ ಟನ್ ಎಂದು ಅಂದಾಜು. ಇದರಲ್ಲಿರುವ ಲೋಹಾಂಶ ತೆಗೆದರೆ ಸುಮಾರು 1500 ಕೇಜಿ ಚಿನ್ನ ತೆಗೆಯಬಹುದು! ಅದಕ್ಕೆ ಹೇಳಿದ್ದು ನಿಮ್ಮ ಹಳೇ ಫೋನ್ ಮೊಬೈಲ್ ಅನ್ನು ಬಿಸಾಕಬೇಡಿ, ಚಿನ್ನವಿದೆ ಅಂತ.
Tuesday, March 20, 2012
ಪುನ್ನಿ ನಮ್ಮ ಗಾಜನೂರಿನ ಹುಡುಗ “ಕೋಟ್ಯಧಿಪತಿಗೆ” 15 ಕೋಟಿ ತಗಂಡ್ರಂತೆ..! ಕೋಟ್ಯಧಿಪತಿ ಆಗಿದ್ದು ಪುನೀತ್!!!. ???

ಮೊನ್ನೆ ತಾನೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದವರು, 'ಕನ್ನಡದ ಕೋಟ್ಯಧಿಪತಿ'ಯಿಂದಾಗಿ ನಿಜಕ್ಕೂ ನಾನು ಕೋಟ್ಯಧಿಪತಿಯಾಗಿದ್ದೇನೆ; ಆದರೆ ಜ್ಞಾನದ ವಿಚಾರದಲ್ಲಿ ಎಂದು ಪವರ್ ಸ್ಟಾರ್ ಪುನೀತ್ ಹೇಳಿದ್ದರು. ಈಗ ಲೀಕಾಗಿರುವ ಮಾಹಿತಿಗಳ ಪ್ರಕಾರ, ಪುನೀತ್ ಕೋಟಿ ಬಿಡಿ, ದಶಕೋಟಿಯನ್ನೂ ಮೀರಿಸಿದ್ದಾರೆ. ಪುನೀತ್ ಸಿನಿಮಾ ಒಂದರಲ್ಲಿ ನಾಯಕನಾಗಲು ಹಲವು ಕೋಟಿಗಳನ್ನು ಕಿಸೆಗಿಳಿಸುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತು. ಈ ಡೀಲುಗಳನ್ನೆಲ್ಲ ಕುದುರಿಸುವುದು ಸಹೋದರ ರಾಘವೇಂದ್ರ ರಾಜ್ಕುಮಾರ್. ಮೂಲಗಳ ಪ್ರಕಾರ ಪುನೀತ್ ಈಗ ಮೂರು ಕೋಟಿ ರೂಪಾಯಿಯಿಂದ ನಾಲ್ಕು ಕೋಟಿಯಷ್ಟು ಬೆಲೆ ಬಾಳುತ್ತಾರೆ. ಅಷ್ಟಿಲ್ಲದೆ ಯಾವ ಚಿತ್ರಗಳಲ್ಲೂ ನಟಿಸುತ್ತಿಲ್ಲ. ಈ ಬೆಳವಣಿಗೆಗಳು ಜೋರಾಗಿ ನಡೆದಿರುವುದು 'ಜಾಕಿ' ಸೂಪರ್ ಹಿಟ್ ಆದ ನಂತರ. ಹೇಳಿ ಕೇಳಿ ಪುನೀತ್ ನಂಬರ್ ವನ್ ನಟ. ಅದೂ ಕಳೆದ ಹಲವಾರು ವರ್ಷಗಳಿಂದ. ಹೀಗಿರುವಾಗ ಕಿರುತೆರೆಗೆ, ಅದರಲ್ಲೂ 'ಕನ್ನಡದ ಕೋಟ್ಯಧಿಪತಿ'ಯಂತಹ ಪಕ್ಕಾ ಕಮರ್ಷಿಯಲ್ ಕಾರ್ಯಕ್ರಮ ಎಂದ ಮೇಲೆ ಕೇಳಬೇಕೇ? ಈ ಕಾರ್ಯಕ್ರಮ ಹೆಚ್ಚು ಕಡಿಮೆ ನಡೆಯೋದೇ ಪುನೀತ್ ಚಾರ್ಮ್ನಿಂದ. ಅವರಿಲ್ಲದಿದ್ದರೆ ಇಡೀ ಕಾರ್ಯಕ್ರಮ ಡಲ್ಲೋ ಡಲ್ಲು. ಆದರೆ ಇದಕ್ಕಾಗಿ ಪುನೀತ್ ಪಡೆಯೋ ಸಂಭಾವನೆ ಎಷ್ಟು ಗೊತ್ತಾ? 15 ಕೋಟಿ ರೂಪಾಯಿ! ಒಂದೆರಡಲ್ಲ, ಹದಿನೈದು ಕೋಟಿ ರೂಪಾಯಿ. ಇದು ವರ್ಷಗಟ್ಟಲೆ ಶೂಟಿಂಗ್ಗಾಗಿ ಎಂದು ತಿಳಿದುಕೊಳ್ಳಬೇಡಿ. ಒಟ್ಟು 50 ಸಂಚಿಕೆಗಳಿಗೆ. ಅಂದರೆ, ಒಂದು ಸಂಚಿಕೆಗೆ 30 ಲಕ್ಷ ರೂಪಾಯಿ..! 'ಕನ್ನಡದ ಕೋಟ್ಯಧಿಪತಿ' ಚಿತ್ರೀಕರಣ ನಡೆಯೋದು ಚೆನ್ನೈಯಲ್ಲಿ. ಒಂದು ಸಲ ಒಂದೇ ಸಂಚಿಕೆಯ ಚಿತ್ರೀಕರಣವಲ್ಲ, ಒಂದಷ್ಟು ಸಂಚಿಕೆಗಳನ್ನು ಒಂದೇ ಬಾರಿ ಶೂಟಿಂಗ್ ಮಾಡಲಾಗುತ್ತದೆ. ಹೀಗಾಗಿ ತಿಂಗಳಿಗೊಮ್ಮೆ ನಾಲ್ಕೈದು ದಿನಗಳನ್ನು ಹೊಂದಿಸಿಕೊಂಡು ಚೆನ್ನೈಯತ್ತ ಹೋದರಾಯಿತು. ಈ ನಡುವೆ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪುನೀತ್ ಮುಗಿಸುತ್ತಾರೆ. ಹೀಗೆ 'ಕನ್ನಡದ ಕೋಟ್ಯಧಿಪತಿ' ಒಂದು ಆವೃತ್ತಿ ಯಶಸ್ಸು ಕಂಡರೆ, ಮುಂದಿನ ಆವೃತ್ತಿಯಲ್ಲೂ ಇವರೇ ಮುಂದುವರಿಯುತ್ತಾರಂತೆ.Saturday, March 10, 2012
ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಖಿಲೇಶ್ ಯಾದವ್. ಮೂಗಿನ ರಹಸ್ಯ ಬಹಿರಂಗ

ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಸರ್ಕಾರ ರಚನೆ ಸಿದ್ಧತೆಯಲ್ಲಿ ತೊಡಗಿದೆ. ಈ ನಡುವೆ ಎಸ್ ಪಿಗೆ ಭರ್ಜರಿ ಗೆಲುವು ತಂದು ಕೊಡುವಲ್ಲಿ ಮಹತ್ವದ ಪಾತ್ರವಹಿಸಿದ ಯುವ ನೇತಾರ ಅಖಿಲೇಶ್ ಯಾದವ್ ಅವರ ಮೂಗಿನ ಮೇಲೆ ಎಲ್ಲರ ಗಮನ ನೆಟ್ಟಿದೆ. ಅವರ ಮೂಗಿನ ರಹಸ್ಯ ಈಗ ಬಹಿರಂಗವಾಗಿದೆ. ಅಪ್ಪಟ ಫುಟ್ಬಾಲ್ ಪ್ರೇಮಿಯಾಗಿರುವ ಅಖಿಲೇಶ್ ಅವರು ಮೈಸೂರಿನಲ್ಲಿ ಶ್ರೀಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ಕಾಲ. ಒಮ್ಮೆ ಫುಟ್ಬಾಲ್ ಆಡುತ್ತಿದ್ದ ಅಖಿಲೇಶ್ ಮುಖಕ್ಕೆ ಚೆಂಡು ರಭಸವಾಗಿ ಬಡಿದು ಮೂಗಿನಿಂದ ಬಳಬಳನೆ ರಕ್ತ ಸುರಿಯತೊಡಗಿತು. ಆಗ ಪಕ್ಕಕ್ಕೆ ತಿರುಗಿದ ಮೂಗು ಇನ್ನೂ ಸರಿ ಹೋಗಿಲ್ಲ. ಕುತೂಹಲದ ಸಂಗತಿ ಎಂದರೆ ಮೂಗನ್ನು ಇನ್ನೂ 'ಫಿಕ್ಸ್' ಮಾಡಿಲ್ಲ. ಹೌದು, ಮೂಗಿನ ಮೂಳೆ ಮುರಿದರೂ ಅದಕ್ಕೆ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ ಮೇಲೆ ಅಖಿಲ್ ಮೂಗಿನ ತಂಟೆಗೆ ಹೋಗಿಲ್ಲ.ಮೈಸೂರು ಎಂದರೆ ಮೂಗು: ಈಗಲೂ ಮೈಸೂರಿನ ವಿಷಯ ಮಾತನಾಡತೊಡಗಿದರೆ ಅಖಿಲೇಶ್ ತನಗರಿವಿಲ್ಲದಂತೆ ಮೂಗನ್ನು ಮುಟ್ಟಿಕೊಳ್ಳುವುದಿದೆ ಎಂದು ಅವರ ಸಿನೀಯರ್ ಎಂಎಸ್ ಕರುಣಾ ಹೇಳುತ್ತಾರೆ.
ಅಖಿಲೇಶ್ ನನ್ನ ಕಾರಿಡಾರ್ ಫ್ರೆಂಡ್. ಕಾಲೇಜು ಕ್ಯಾಂಪಸ್ ನಲ್ಲಿ ಯಾವಗಾಲು ಕಾರಿಡರ್ ನಲ್ಲೇ ಸಿಗುತ್ತಿದ್ದ. ಹಾಗಾಗಿ ಆತನ ಹೆಸರು 'ಕಾರಿಡಾರ್ ಫ್ರೆಂಡ್' ಎಂದು ಇಟ್ಟಿದ್ದೆ. ಅಖಿಲ್ ಬಳಿ ಓಪನ್ ಜೀಪ್ ಇತ್ತು. ನಾವೆಲ್ಲ ರಜೆ ಇದ್ದಾಗ ಮೈಸೂರು ಸುತ್ತಾ ಮುತ್ತಾ ಓಡಾಡುತ್ತಿದ್ದೆವು. ಒಂಟಿಕೊಪ್ಪಲಿನಲ್ಲಿದ್ದ ನಮ್ಮ ಮನೆಗೆ ಅವನು ಲಿಫ್ಟ್ ಕೊಡುತ್ತಿದ್ದ. 1994 ರಲ್ಲಿ ಪರಿಸರ ವಿಜ್ಞಾನ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಮೈಸೂರು ತೊರೆದರೂ ನಮ್ಮ ಸ್ನೇಹ ಇನ್ನೂ ಹಾಗೇ ಇದೆ ಎಂದು ಕರುಣಾ ಗೆಳೆತನದ ದಿನಗಳನ್ನು ಸ್ಮರಿಸುತ್ತಾರೆ. ಯುವಕರು ರಾಜಕೀಯಕ್ಕೆ ಬರಬೇಕು ಎಂಬ ಮಾತಿದೆ. ಅಖಿಲೇಶ್ ನಂತವರು ರಾಜಕೀಯಕ್ಕೆ ಬರಬೇಕು ಆಗ ಏನಾದರೂ ಬದಲಾವಣೆ ಕಾಣಲು ಸಾಧ್ಯ. ಅವನ ರಾಜಕೀಯ ಏಳಿಗೆ ಹೀಗೆ ಮುಂದುವರೆಯಲಿ, ಅವನ ಟ್ರೆಂಡ್ ಮಾರ್ಕ್ ಮೂಗು ಮರೆಯಲು ಸಾಧ್ಯವಿಲ್ಲ ಎಂದು ಕರುಣಾ ನಗುನಗುತ್ತಾ ಹೇಳಿದರು.
ಅಖಿಲೇಶ್ ನನ್ನ ಕಾರಿಡಾರ್ ಫ್ರೆಂಡ್. ಕಾಲೇಜು ಕ್ಯಾಂಪಸ್ ನಲ್ಲಿ ಯಾವಗಾಲು ಕಾರಿಡರ್ ನಲ್ಲೇ ಸಿಗುತ್ತಿದ್ದ. ಹಾಗಾಗಿ ಆತನ ಹೆಸರು 'ಕಾರಿಡಾರ್ ಫ್ರೆಂಡ್' ಎಂದು ಇಟ್ಟಿದ್ದೆ. ಅಖಿಲ್ ಬಳಿ ಓಪನ್ ಜೀಪ್ ಇತ್ತು. ನಾವೆಲ್ಲ ರಜೆ ಇದ್ದಾಗ ಮೈಸೂರು ಸುತ್ತಾ ಮುತ್ತಾ ಓಡಾಡುತ್ತಿದ್ದೆವು. ಒಂಟಿಕೊಪ್ಪಲಿನಲ್ಲಿದ್ದ ನಮ್ಮ ಮನೆಗೆ ಅವನು ಲಿಫ್ಟ್ ಕೊಡುತ್ತಿದ್ದ. 1994 ರಲ್ಲಿ ಪರಿಸರ ವಿಜ್ಞಾನ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಮೈಸೂರು ತೊರೆದರೂ ನಮ್ಮ ಸ್ನೇಹ ಇನ್ನೂ ಹಾಗೇ ಇದೆ ಎಂದು ಕರುಣಾ ಗೆಳೆತನದ ದಿನಗಳನ್ನು ಸ್ಮರಿಸುತ್ತಾರೆ. ಯುವಕರು ರಾಜಕೀಯಕ್ಕೆ ಬರಬೇಕು ಎಂಬ ಮಾತಿದೆ. ಅಖಿಲೇಶ್ ನಂತವರು ರಾಜಕೀಯಕ್ಕೆ ಬರಬೇಕು ಆಗ ಏನಾದರೂ ಬದಲಾವಣೆ ಕಾಣಲು ಸಾಧ್ಯ. ಅವನ ರಾಜಕೀಯ ಏಳಿಗೆ ಹೀಗೆ ಮುಂದುವರೆಯಲಿ, ಅವನ ಟ್ರೆಂಡ್ ಮಾರ್ಕ್ ಮೂಗು ಮರೆಯಲು ಸಾಧ್ಯವಿಲ್ಲ ಎಂದು ಕರುಣಾ ನಗುನಗುತ್ತಾ ಹೇಳಿದರು.
Thursday, March 8, 2012
ಗ್ಯಾಸ್ಟ್ರಿಕ್ಗೆ ಇಲ್ಲಿದೆ ಮದ್ದು. ಈ ಆಹಾರಗಳು ಒಗ್ಗುವುದಿಲ್ಲ.

ಗ್ಯಾಸ್ಟ್ರಿಕ್ ಸಮಸ್ಯೆಯಿದ್ದರೆ ಅದರಿಂದ ಹೊಟ್ಟೆ ನೋವು ಅಷ್ಟೆ ಅಲ್ಲ ಮುಜುಗರ ಕೂಡ ಉಂಟಾಗುತ್ತದೆ. ಈ ರೀತಿಯ ಗ್ಯಾಸ್ ಸಮಸ್ಯೆಯಿದ್ದರೆ ಅದರ ಸೌಂಡ್ ಕೇಳಿದಾಗ ಉಳಿದವರು ನಗುತ್ತಾರೆ ಅಥವಾ ವಾಸನೆಯೆಂದು ಮುಖ ಕಿವುಚುತ್ತಾರೆ. ಈ ರೀತಿಯ ಗ್ಯಾಸ್ ಸಮಸ್ಯೆಯನ್ನು ಈ ಕೆಳಗಿನ ಮನೆ ಮದ್ದಿನಿಂದ ಪರಿಹರಿಸಬಹುದು.1.ಶುಂಠಿ: ಒಂದು ಚಿಕ್ಕ ತುಂಡು ಶುಂಠಿಯನ್ನು ಜಜ್ಜಿ ಒಂದು ಲೋಟ ನೀರಿಗೆ ಹಾಕಿ ಕುದಿಸಿ ನೀರು ತಣ್ಣಗಾದ ಮೇಲೆ ಕುಡಿದರೆ ಗ್ಯಾಸ್ ಸಮಸ್ಯೆ ಕಡಿಮೆಯಾಗುವುದು. * ಟೀಗೆ ಶುಂಠಿ ಹಾಕಿ ಕುಡಿದರೂ ಈ ಸಮಸ್ಯೆ ಪರಿಹಾರವಾಗುವುದು.2. ನೀರು ಕುಡಿಯುವುದು: ನೀರು ಕುಡಿದರೆ ಈ ರೀತಿಯ ಗ್ಯಾಸ್ ಸಮಸ್ಯೆ ನಿವಾರಣೆಯಗುವುದು. ನೀರು ಕುಡಿದಾಗ ಹೊಟ್ಟೆಯಲ್ಲಿರುವ ಬೇಡದ ಗ್ಯಾಸ್ ಮೂತ್ರದ ಮುಖಾಂತರ ಹೊರಹೋಗುವುದು.3. ಸೋಂಪು: ಹೊಟ್ಟೆ ನೋವು, ಅಜೀರ್ಣ ಮುಂತಾದ ಸಮಸ್ಯೆಗಳಿಗೆ ಸೋಂಪು ಪರಿಣಾಮಕಾರಿಯಾದ ಮನೆ ಮದ್ದಾಗಿದೆ. ಊಟದ ಮುಂಚೆ ಮತ್ತು ನಂತರ ಸೋಂಪು ತಿನ್ನುವುದರಿಂದ ಗ್ಯಾಸ್ ಸಮಸ್ಯೆ ಉಂಟಾಗುವುದಿಲ್ಲ.4.ಆಪಲ್ ಸೈಡರ್ ವಿನಿಗರ್: ಕೆಲವೊಮ್ಮೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿದಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಅಗ 2 ಚಮಚ ಆಪಲ್ ಸೈಡರ್ ವಿನಿಗರ್ ಅನ್ನು ಒಂದು ಲೋಟ ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ನೋವು ಕಡಿಮೆಯಾಗುವುದು.5. ಅಡುಗೆ ಸೋಡಾ: 1/4 ಚಮಚ ಅಡುಗೆ ಸೋಡಾವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕುಡಿದರೆ ತಕ್ಷಣವೆ ಗ್ಯಾಸ್ ಸಮಸ್ಯೆ ನಿವಾರಣೆಯಾಗುವುದು.6. ಪಲಾವ್ ಎಲೆ: ಪಲಾವ್ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಬೇಕು. ಆ ನೀರನ್ನು ಕುಡಿದರೆ ಗ್ಯಾಸ್ ಸಮಸ್ಯೆ ನಿವಾರಣೆಯಾಗುವುದು. 
ಈ ಆಹಾರಗಳು ಒಗ್ಗುವುದಿಲ್ಲ-----------

ಈ ಆಹಾರಗಳು ಒಗ್ಗುವುದಿಲ್ಲ-----------
ಆರೋಗ್ಯಕರವಲ್ಲದ ಆಹಾರ ಕ್ರಮದಿಂದ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳು ಸರ್ವೇಸಾಮನ್ಯ. ಕೆಲವರಿಗೆ ಕೆಲವೊಂದು ಆಹಾರಗಳು ಒಗ್ಗುವುದಿಲ್ಲ. ಸಾಮಾನ್ಯವಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚು ಮಾಡುವ ಆಹಾರಗಳ ಪಟ್ಟಿ ನೋಡಿ ಇಲ್ಲಿದೆ.1. ಬೀನ್ಸ್, ಅಣಬೆ, ಹೂಕೋಸ್, ದವಸ ಧ್ಯಾನ್ಯಗಳು, ಸೇಮು, ಸಕ್ಕರೆ ಅಂಶ ಅಧಿಕವಿರುವ ಹಣ್ಣು ತರಕಾರಿಗಳು ಸುಲಭವಾಗಿ ಜೀರ್ಣವಾಗುವುದಿಲ್ಲ ಇದು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ.2.ಚೀಸ್, ಮೊಟ್ಟೆ, ಹಾಲಿನ ಉತ್ಪನ್ನಗಳು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ.3. ಆಲೂಗೆಡ್ಡೆ, ಜೋಳ, ಗೋದಿಯ ಉತ್ಪನ್ನಗಳಾದ ಬ್ರೆಡ್ ಇವುಗಳನ್ನು ಸೇವಿಸಿದಾಗಲೂ ಕೆಲವರಿಗೆ ಹೊಟ್ಟೆ ನೋವು ಬರುತ್ತದೆ.4. ಕೆಲವೊಂದು ನಾರು ಪದಾರ್ಥಗಳನ್ನು ನಾರಿನ ಜೊತೆ ತಿನ್ನ ಬಹುದು ಅಂತಹ ಆಹಾರ ಸೇವನೆಯಿಂದ ಕೆಲವರಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುವುದು.5. ಕೆಲವೊಂದು ಬೇಕರಿ ತಿಂಡಿಗಳನ್ನು ತಿಂದಾಗ ಸಹ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುವರಿಗೆ ಕೆಲವರಿಗೆ ಕೆಲ ಆಹಾರಗಳು ಒಗ್ಗುವುದಿಲ್ಲ, ಆದ್ದರಿಂದ ಅವುಗಳನ್ನು ಗಮನಿಸಿ ಅದನ್ನು ಸೇವಿಸದಿದ್ದರೆ ಒಳ್ಳೆಯದು.
Thursday, March 1, 2012
ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗುವ ಎಲ್ಲ ಊರುಗಳ ಹೆಸರುಗಳು ಕನ್ನಡಮಯವಾಗಲಿವೆ.

ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ 12 ನಗರಗಳ ಮರುನಾಮಕರಣ ಆಗುವ ದಿನ ಇನ್ನೇನು ದೂರವಿಲ್ಲ. ಎಲ್ಲ ಅಡೆತಡೆಗಳೂ ದೂರವಾಗಿ, ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗುವ ಎಲ್ಲ ಊರುಗಳ ಹೆಸರುಗಳು ಕನ್ನಡಮಯವಾಗಲಿವೆ. ಸತತ ಪ್ರಯತ್ನಗಳ ನಂತರ ಭಾರತ ಸರ್ವೇಕ್ಷಣ ಇಲಾಖೆಯಿಂದ ಅನುಮತಿ ಪತ್ರ ದೊರೆತಿದೆ
1) Bangalore Bengaluru 2) Bellary Ballary 3) Bijapur Vijapur 4) Belgaum Belagavi 5) Chikmagalur Chikkamagaluru 6) Gulbarga Kalburgi 7) Mysore Mysuru 8) Hospet Hosapete 9) Shimoga Shivamogga 10) Hubli Hubballi 11) Tumkur Tumakuru) 12 Mangalore Mangaluru.
1) Bangalore Bengaluru 2) Bellary Ballary 3) Bijapur Vijapur 4) Belgaum Belagavi 5) Chikmagalur Chikkamagaluru 6) Gulbarga Kalburgi 7) Mysore Mysuru 8) Hospet Hosapete 9) Shimoga Shivamogga 10) Hubli Hubballi 11) Tumkur Tumakuru) 12 Mangalore Mangaluru.
Monday, February 27, 2012
ನೀಲಿಚಿತ್ರ ನೀವು ನೋಡಿಲ್ಲವೆ? ಪತ್ರಕರ್ತರಿಗೆ ಯಡ್ಡಿ ಪ್ರಶ್ನೆ (ನಿನ್ನ ಮೊಮ್ಮಕ್ಕಳು ಇದೆ ಪ್ರಶ್ನೆ ಕೇಳಿದ್ದರೆ ಎನು ? ಉತ್ತರ ಕೊಡುತ್ತಿದ್ದಿ ಯಡಿಯೂರಪ್ಪ ನಾಚಿಕೆ ಆಗ್ಬೇಕು. ನಿನ್ನ
"ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರವನ್ನು ಶಾಸಕರು ನೋಡಿದ ಹಗರಣದ ಹಿಂದೆಯೇ ಏಕೆ ಬಿದ್ದಿದ್ದೀರಿ? ನೀವೇನು ಮನೆಯಲ್ಲಿ ಅಂತಹ ವಿಡಿಯೋಗಳನ್ನು ನೋಡುವುದಿಲ್ಲವೆ?" ಎಂದು ಪತ್ರಕರ್ತರನ್ನೇ ಪ್ರಶ್ನಿಸಿರುವುದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ! ವಿಧಾನಸಭೆಯಂಥ ಪವಿತ್ರ ಸ್ಥಳದಲ್ಲೇ ನೀಲಿ ಚಿತ್ರ ನೋಡಿದ ಕಳಂಕಿತ ಶಾಸಕರನ್ನು ಬಹಿರಂಗವಾಗಿ ಬೆಂಬಲಿಸಿರುವ ಯಡಿಯೂರಪ್ಪ ಅವರ ಪ್ರಶ್ನೆಗಳಿಗೆ ಮಾಧ್ಯಮದವರು ಮಾತ್ರವಲ್ಲ ವೇದಿಕೆಯ ಮೇಲೆ ಕುಳಿತಿದ್ದ ಗಣ್ಯರು ಕೂಡ ದಂಗಾದರು. ಯಡಿಯೂರಪ್ಪ ಇಂಥ ಹೇಳಿಕೆಯನ್ನು ನೀಡಿರುವುದು ಶಿವಮೊಗ್ಗದಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ. ವೇದಿಕೆಯ ಮೇಲೆ ಯಡಿಯೂರಪ್ಪನವರ ಅಕ್ಕಪಕ್ಕದಲ್ಲಿ ಮಗ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ನೂರಾರು ಸಾರ್ವಜನಿಕರ ನಡುವೆ ಹಲವಾರು ಹೆಂಗಳೆಯರೂ ಇದ್ದರು. ಆಗ ಮಾತನಾಡುತ್ತ, ಆವೇಶಕ್ಕೊಳಗಾದ ಯಡಿಯೂರಪ್ಪ ಮೇಲಿನಂತೆ ಪ್ರಶ್ನೆ ಹಾಕಿದ್ದಾರೆ. ನೀಲಿ ಚಿತ್ರ ಹಗರಣದಲ್ಲಿ ಸಿಕ್ಕಿಬಿದ್ದಿರುವ ಮೂವರು ಶಾಸಕರಾದ ಲಕ್ಷ್ಮಣ ಸವದಿ, ಸಿಸಿ ಪಾಟೀಲ ಮತ್ತು ಕೃಷ್ಣ ಜೆ. ಪಾಲೇಮಾರ್ ಅವರು ಯಡಿಯೂರಪ್ಪನವರ ಬೆಂಬಲಿಗರು. ಬಿಜೆಪಿ ಸರಕಾರ ರಾಜ್ಯದಲ್ಲಿ ಅನೇಕ ಉತ್ತಮ ಯೋಜನೆಗಳನ್ನು ಹಮ್ಮಿಕೊಂಡಿದೆ, ಅನೇಕ ಸಾಧನೆಗಳನ್ನು ಮಾಡಿದೆ. ಅವುಗಳ ಬಗ್ಗೆ ಬರೆಯುವುದು ಬಿಟ್ಟು ನೀಲಿ ಚಿತ್ರ ವೀಕ್ಷಣೆಯಂಥ ಕ್ಷುಲ್ಲಕ ವಿಷಯದ ಹಿಂದೆ ಏಕೆ ಬಿದ್ದಿದ್ದೀರಿ ಎಂದು ಯಡಿಯೂರಪ್ಪ ಕಿಡಿಕಾರಿದರು. ತಮ್ಮ ಬೆಂಬಲಿಗರು ಅಶ್ಲೀಲ ಚಿತ್ರ ವೀಕ್ಷಣೆಯ ಹಗರಣದಲ್ಲಿ ಸಿಲುಕಿರುವುದು ಮತ್ತು ಬಿಜೆಪಿ ಸರಕಾರ ಅವರ ಬೆಂಬಲಕ್ಕೆ ಬಾರದಿರುವುದು ಯಡಿಯೂರಪ್ಪನವರನ್ನು ಸಹಜವಾಗಿ ಮುಜುಗರಕ್ಕೆ ಈಡುಮಾಡಿದೆ.(ನಿನ್ನ ಮೊಮ್ಮಕ್ಕಳು ಇದೆ ಪ್ರಶ್ನೆ ಕೇಳಿದ್ದರೆ ಎನು ? ಉತ್ತರ ಕೊಡುತ್ತಿದ್ದಿ ಯಡಿಯೂರಪ್ಪ ನಾಚಿಕೆ ಆಗ್ಬೇಕು. ನಿನ್ನ ಪಕ್ಕದಲ್ಲಿ ಇರೋ ಹಾಲಪ್ಪ, ರೇಣುಕಾಚಾರ್ಯ, ಲಕ್ಷ್ಮಣ ಸವದಿ, ಸಿಸಿ ಪಾಟೀಲ ಮತ್ತು ಕೃಷ್ಣ ಜೆ. ಪಾಲೇಮಾರ್ ಇವರನ್ನ ಸಮರ್ಥನೇ ಮಾಡುತ್ತಿರಲ್ಲ ಬುದ್ಧಿ ನೆಟ್ಟಗಿಲ್ಲವೆ ?)
Sunday, February 26, 2012
2012 : ಭಯಂಕರ ಬೇಸಿಗೆಯ ವರ್ಷ

ಈ ಬಾರಿಯ ಬೇಸಿಗೆ ಪ್ರತಿವರ್ಷದಂತೆ ಇರದೇ ದಾಖಲೆಯ ಉಷ್ಣಾಂಶ ಬರೆಯಲಿದೆ. 1850ರಲ್ಲಿ ಕಾಡಿದ್ದ ಬಿಸಿಲ ಬೇಗೆ 160 ವರ್ಷಗಳ ನಂತರ, ಜಾಗತಿಕ ತಾಪಮಾನ ಸರಾಸರಿಗಿಂತ 0.48ಡಿಗ್ರಿ ಸೆಲ್ಸಿಯಷ್ಟು ಏರಿಕೆಯಾಗಲಿದೆ. ಈ ಬಾರಿ ಬೇಸಿಗೆಗೆ ಜಾಗತಿಕ ತಾಪಮಾನದ ಏರಿಕೆ ಕಾರಣ ಎಂದು ಹೇಳಲಾಗುತ್ತಿದೆ. ಬ್ರಿಟನ್ ಹವಾಮಾನ ಇಲಾಖೆ ಈ ವರ್ಷದ ಬಿಸಿಲ ಬೇಗೆಯನ್ನು ಅಂದಾಜಿಸಿ 2012 ಟಾಪ್ ಟೆನ್ ವರ್ಷವಾಗಲಿದೆ ಎಂದು ತಿಳಿಸಿದೆ. ಭಾರತೀಯ ಇಲಾಖೆಯ ಪ್ರಕಾರ ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚು ಸುಡಲಿದೆ. ಕಳೆದ ವರ್ಷ ಕೂಡಾ ಬಿಸಿಲಿನ ವರ್ಷವಾಗಿದ್ದರೂ ಈ ಬಾರಿ ಅದನ್ನೂ ಮೀರಲಿದೆ.
Saturday, February 18, 2012
ಕ್ರಿಸ್ಮಸ್ ದೇಣಿಗೆ ನೀಡದಿದ್ದಕ್ಕೆ? ಬಾಲಕನ ಕಣ್ಣೇ ಕಿತ್ತ ಶಿಕ್ಷಕಿ

ಫೆ 18: ಗೌರಿಬಿದನೂರು ಸೇಂಟ್ ಆನ್ಸ್ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿರುವ ಆರುವರ್ಷದ ಬಾಲಕ ರವಿತೇಜಾ, ಶಾಲೆಯ ಮುಖ್ಯೋಪಾಧ್ಯಾಯಿನಿ ನಡೆಸಿದ ಅಮಾನವೀಯ ಮತ್ತು ಪೈಶಾಚಿಕ ಕೃತ್ಯಕ್ಕೆ ತನ್ನ ಕಣ್ಣನ್ನೇ ಕಳೆದುಕೊಂಡ ಅತ್ಯಂತ ನೋವಿನ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ವೆಂಕಟಾಚಲಪತಿ ಮತ್ತು ಪೂರ್ಣಿಮಾ ದಂಪತಿಗೆ ಇರುವ ಏಕೈಕ ಪುತ್ರ ರವಿತೇಜಾ. ಸೇಂಟ್ ಆನ್ಸ್ ಶಾಲೆಯಲ್ಲಿ ಆಡಳಿತ ಮಂಡಳಿ ವಿದ್ಯಾರ್ಥಿಗಳಿಂದ ದೇಣಿಗೆ ಪಡೆದು ಕ್ರಿಸ್ಮಸ್ ಹಬ್ಬ ಆಚರಿಸಲು ನಿರ್ಧರಿಸಿದ್ದರು. ಆದರೆ ಎಲೆಕ್ಟ್ರಿಕಲ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಈತನ ತಂದೆ ದೇಣಿಗೆ ನೀಡಲು ನಿರಾಕರಿಸಿದರು. ಇಷ್ಟಕ್ಕೆ ಶಿಕ್ಷಕಿ ಅಸ್ತಯಾ ಡಿಸೆಂಬರ್ 16 ರಂದು ವಿದ್ಯಾರ್ಥಿಯನ್ನು ಮುಖ್ಯ ಶಿಕ್ಷಕಿ ಮೇರಿ ವಿನಿತಾ ಬಳಿ ಕರೆದುಕೊಂಡು ಹೋದರು. ನಾಲ್ಕು ತಾಸುಗಳ ಕಾಲ ವಿದ್ಯಾರ್ಥಿಯನ್ನು ಮುಖ್ಯ ಶಿಕ್ಷಕಿ ಕೊಠಡಿಯಲ್ಲಿ ನಿಲ್ಲಿಸಿದ್ದಾರೆ. ಶಿಕ್ಷೆ ತಾಳಲಾರದೆ ರವಿತೇಜಾ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮೇರಿ ವಿನಿತಾ ಈತನ ಕಣ್ಣಿನ ಮೇಲೆ ಪೆನ್ಸಿಲ್ ನಿಂದ ಬಲವಾಗಿ ಚುಚ್ಚಿದ್ದಾಳೆ. ಚುಚ್ಚಿದ ರಭಸಕ್ಕೆ ರವಿತೇಜನ ಕಣ್ಣುಗುಡ್ಡೆ ಸೀಳಿ ಹೋಗಿದೆ. ಪೋಷಕರಿಗೆ ವಿಷಯ ತಿಳಿಸದೇ ಶಾಲೆಯ ಸಿಬಂದಿ ವಿದ್ಯಾರ್ಥಿಯನ್ನು ಮಿಂಟೋ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಗು ಇನ್ನೂ ಮನೆಗೆ ಬಾರದಿರುವುದರಿಂದ ಗಾಭರಿಗೊಂಡ ಪೋಷಕರಿಗೆ ಆನಂತರ ಶಾಲೆಯವರು ವಿಷಯ ತಿಳಿಸಿದ್ದಾರೆ. ಮಗನನ್ನು ನೋಡಲು ಹೆತ್ತ ಕರುಳು ಓಡೋಡಿ ಬೆಂಗಳೂರು ಮಿಂಟೋ ಆಸ್ಪತ್ರೆಗೆ ಬಂದಾಗ ಶಾಲೆಯವರು ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ವೆಚ್ಚವನ್ನು ಭರಿಸುವ ಭರವಸೆ ಕೂಡಾ ನೀಡಿದ್ದಾರೆ. ಎಲೆಕ್ಟ್ರಿಕ್ ಕೆಲಸ ಮಾಡುವ ರವಿತೇಜಾ ತಂದೆ ಇದ್ದಬದ್ದ ಹಣವನ್ನು ಖರ್ಚು ಮಾಡಿ ಮಗನಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಮಿಂಟೋ ಆಸ್ಪತ್ರೆಯ ವೈದ್ಯರು ರವಿತೇಜಾನಿಗೆ ಮತ್ತೆ ಕಣ್ಣು ದೃಷ್ಟಿ ಬರುವ ಖಚಿತ ಭರವಸೆ ನೀಡುತ್ತಿಲ್ಲ. ಇದೇ ಬರುವ ಮಂಗಳವಾರ (ಫೆ 28) ಮತ್ತೊಮ್ಮೆ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ ಎಂದು ರವಿತೇಜಾ ಪೋಷಕರು ಉದಯವಾಣಿ ದಿನಪತ್ರಿಕೆಯಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
Wednesday, February 15, 2012
ಪೇಪರ್ ಕಪ್ ಆರೋಗ್ಯಕ್ಕೆ ಮಾರಕ ಕುಡಿಯಲು ಬಳಸ ಬೇಡಿ ಆಯ್ಕೆ ನಿಮ್ಮದು

ಜಾಗತೀಕರಣದ ದಾಳಿಗೆ ಭಾರತ ಹಿಮ್ಮೆಟ್ಟದೇ ಮುನ್ನುಗುತ್ತಿದೆ, ಅದರಲ್ಲೂ ಬಹುರಾಷ್ಟ್ರೀಯ ಸಂಸ್ಥೆಗಳು ಭಾರತಕ್ಕೆ ಆಗಮಿಸಿದ ನಂತರ ಪ್ಲಾಸ್ಟಿಕ್ ಬಳಕೆ ಅತಿಯಾಯಿತು ಎನ್ನುತ್ತಿದ್ದಂತೆ ಪರಿಸರವಾದಿಗಳ ಕೂಗಿನಿಂದಾಗಿ ಪ್ಲಾಸ್ಟಿಕ್ ಬಳಕೆಯ ಕುರಿತಂತೆ ಕಡಿವಾಣ ಬೀಳುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ನೀರು, ಕಾಫಿ, ಚಹಾ ಕುಡಿಯಲು ಬಳಸುತ್ತಿದ್ದ ಪ್ಲಾಸ್ಟಿಕ್ ಕಪ್ಗಳ ಬದಲಾಗಿ ಪೇಪರ್ ಕಪ್ ಬಳಕೆ ಪ್ರಾರಂಭವಾಯಿತು. ಆದರೆ.... ನೀವು ಯಾವಾಗಲಾದರೂ ಯೋಚಿಸಿರುವಿರಾ, ನೀವು ನೀರು, ಕಾಫಿ, ಚಹಾ ಕುಡಿಯಲು ಬಳಸುವಂತ ಪೇಪರ್ ಕಪ್ಗಳು ಸಹ ಆರೋಗ್ಯಕ್ಕೆ ಹಾನಿಕಾರಕವೆಂಬ ಆಶ್ಚರ್ಯಕರ ವಿಚಾರ ಬಯಲಾಗಿದೆ. ಇಂತಹ ಚಿಕ್ಕ ಪುಟ್ಟ ವಿಚಾರಗಳು ನಮಗೆ ಹಾನಿಕಾರಕ ಎಂದು ತಿಳಿದಾಗ ಅಶ್ಚರ್ಯವಾಗುವುದು ಸಹಜ ವಿಚಾರವಾಗಿದೆ. ಹೌದು ನೀವು ಕುಡಿಯಲು ಪೇಪರ್ ಕಪ್ಗಳನ್ನು ಬಳಸುವ ಮುನ್ನ ಯೋಚಿಸಿ! ವರುಣ್ ಎಂಬ ಟೆಕ್ನೋಪಾರ್ಕ್ನಲ್ಲಿಯ ಐಟಿ ಉದ್ಯೋಗಿಯು ದಿನಂಪ್ರತಿ ರಾತ್ರಿ ಹೊಟ್ಟೆ ನೋವಿನಿಂದ ನರಳುತ್ತಿದ್ದ, ವೈದ್ಯಕೀಯ ಪ್ರಯೋಗಾಲಯ ಪರೀಕ್ಷೆಯಲ್ಲಿ ವರುಣ್ನ ಹೊಟ್ಟೆಯಲ್ಲಿ ವ್ಯಾಕ್ಸ್ (ಮೇಣ) ಶೇಖರಣೆಯಾಗಿರುವುದು ಕಂಡುಬಂದಿತು. ಇದರ ಮೂಲವನ್ನು ಹುಡುಕಿದಾಗ ವರುಣ್ ಕಾರ್ಯನಿರ್ವಹಿಸುತ್ತಿದ್ದ ಕಚೇರಿಯ ಪ್ಯಾಂಟ್ರಿಯಲ್ಲಿ ಬಳಸುತ್ತಿದ್ದ ಪೇಪರ್ ಕಪ್ಗಳಲ್ಲಿ ವ್ಯಾಕ್ಸ್ ಪತ್ತೆಯಾಗಿದ್ದು ನಿಜಕ್ಕೂ ಆಘಾತಕಾರಿ ವಿಷಯವಾಗಿತ್ತು. ಬಳಸಿ ಬಿಸಾಡಬಹುದಾದ ಪೇಪರ್ ಕಪ್ಗಳಲ್ಲಿ ಬಿಸಿಯಾದ ನೀರು ಅಥವಾ ಇನ್ನಾವುದೇ ದ್ರವ ಪದಾರ್ಥ ಬಸಿಯಬಾರದೆಂದು ಮೇಣವನ್ನು ಎರಡೂ ಭಾಗದಲ್ಲಿ ತೆಳುವಾಗಿ ಸವರಿರುತ್ತಾರೆ. ಬಿಸಿಯಾದ ದ್ರವವನ್ನು ಕಪ್ನೊಳಗೆ ಹಾಕುತ್ತಿದ್ದಂತೆ ಒಳಭಾಗದ ಮೇಣ ಕರಗಿ ಸೇವಿಸುವವರ ಹೊಟ್ಟೆ ಸೇರುವುದು ಸಹಜವೆನ್ನುತ್ತಾರೆ ವೈದ್ಯರು! ಇದರ ಪರಿಣಾಮವಾಗಿ ಹೊಟ್ಟೆಗೆ ಸಂಬಂಧಿತವಾದ ಹಲವು ಕಾಯಿಲೆಗಳಿಗೆ ಗುರಿಯಾಗ ಬೇಕಾದೀತು ಎಚ್ಚರ ಎಂದು ವೈದ್ಯ ಸಮೂಹ ಮುನ್ನೆಚ್ಚರಿಕೆ ನೀಡಿದೆ. ಪೇಪರ್ ಕಪ್ ಬದಲಾಗಿ ಗಾಜಿನ ಕಪ್ ಅಥವಾ ಗ್ಲಾಸ್ ಅನ್ನು ಬಳಸುವುದು ಶ್ರೇಷ್ಠವೆಂದು ಪ್ರಯೋಗಾಲಯದ ವರದಿಗಳು ಹೇಳಿವೆ. ಗಾಜಿನ ವಸ್ತುಗಳ ಒಳಗಿರುವ ಯಾವುದೇ ಪದಾರ್ಥಗಳ ಮೇಲೆ ಗಾಜು ಅತ್ಯಂತ ಕಡಿಮೆ ಪ್ರಮಾಣದ ಪರಿಣಾಮಗಳನ್ನು ಬೀರುತ್ತದೆ ಎನ್ನಲಾಗಿದೆ. ಆದ್ದರಿಂದ ಆಯ್ಕೆ ನಿಮ್ಮದು...!
Friday, January 6, 2012
ಅತಿಕೆಟ್ಟ ಪಾಸ್ ವರ್ಡ್ ಗೊತ್ತಾಯ್ತು!
Thursday, December 29, 2011
ಓದುಗರಿಗೆಲ್ಲ ಕ್ರಿಸ್ತ ಶಕ 2012 ರ ಶುಭಾಶಯಗಳು .2012ಕ್ಕೆ ಪ್ರಳಯಾನೂ ಇಲ್ಲ ಎಂಥದ್ದೂ ಇಲ್ಲ: ನಾಸಾ


ಓದುಗರಿಗೆಲ್ಲ ಕ್ರಿಸ್ತ ಶಕ 2012 ರ ಶುಭಾಶಯಗಳು ಹೊಸ ವರ್ಷ ನಮ್ಮೆಲ್ಲರಿಗೂ ಸಂತಸ, ಸುಖ, ಶಾಂತಿ ನೆಮ್ಮದಿ ತರಲಿ , ಆರೋಗ್ಯದಾಯಕ ಜೀವನ ಎಲ್ಲರ ಮುಂದಿರಲಿ ಲೋಕದಲ್ಲಿ ನಗು ನಲಿಯಲಿ ವಿಶ್ವದಲ್ಲಿ ಹರುಷ ಹರಿಯಲಿ----------------ವಾಷಿಂಗ್ಟನ್, ಮಹಾಪ್ರಳಯದ ಆತಂಕದಲ್ಲಿರುವ ಜಗತ್ತಿಗೆ ನಾಸಾ ವಿಜ್ಞಾನಿಗಳು ಸಮಾಧಾನಕರ ಸಂದೇಶ ನೀಡಿದ್ದಾರೆ. 2012 ಡಿಸೆಂಬರ್21ಕ್ಕೆ ಮಹಾಪ್ರಳಯ ಸಂಭವಿಸುತ್ತದೆ ಎಂದು ಇಂಟರ್ನೆಟ್ ಸೇರಿದಂತೆ ಎಲ್ಲ ಮಾಧ್ಯಮಗಳಲ್ಲೂ ಭೀತಿಯ ವಾತಾವರಣ ಸೃಷ್ಟಿಸಲಾಗಿದೆ. ಆದರೆ 2012ಕ್ಕೆ ಪ್ರಳಯನೂ ಇಲ್ಲ ಎಂಥದ್ದೂ ಇಲ್ಲ ಎಂದು ವಿಜ್ಞಾನಿಗಳು ಮತ್ತೊಮ್ಮೆ ಅಭಯ ನೀಡಿದ್ದಾರೆ. ಮುಂದಿನ ವರ್ಷ ಮಹಾಪ್ರಳಯ ಸಂಭವಿಸಿ ಇಡೀ ಭೂಮಂಡಲ ನಾಶವಾಗಲಿದೆ ಎಂಬ ಸಮೂಹ ಸನ್ನಿ ಎಲ್ಲೆಡೆ ವ್ಯಾಪಿಸಿದೆ. 2012ರಲ್ಲಿ ಸೂರ್ಯನಿಂದ ಹೊರಹೊಮ್ಮುವ ದೈತ್ಯ ಸೌರ ಜ್ವಾಲೆಗಳು ಭೂಮಿಗೆ ಸಂಚಕಾರ ತರಲಿದೆ ಎಂಬ ಆತಂಕವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸಾರಸಗಟಾಗಿ ತಳ್ಳಿ ಹಾಕಿದೆ. ಆದರೆ, ದೈತ್ಯ ಸೌರ ಜ್ವಾಲೆಗಳು ಸೂರ್ಯನಿಂದ ಹೊರಹೊಮ್ಮುವುದು ಖಚಿತ ಎಂದಿರುವ ನಾಸಾ, ಅವು ಭೂಮಿಯನ್ನು ತಲುಪುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಿಂದ ಭೂಮಿಯ ಮೇಲೆ ಯಾವುದೇ ಪ್ರಳಯ ಸಂಭವಿಸಲಾರದು ಎಂದು ಹೇಳಿದೆ. ದೈತ್ಯ ಸೌರ ಜ್ವಾಲೆಗಳಿಂದ ಉಂಟಾಗುವ ವಿದ್ಯುತ್ ಕಾಂತೀಯ ವಿಕರಣದಿಂದ ನಮ್ಮ ರೇಡಿಯೊ ತರಂಗಗಳಿಗೆ ಹಾಗೂ ಸಂಹವನ ವ್ಯವಸ್ಥೆಯ ಉಪಗ್ರಹಗಳ ಕಾರ್ಯಾಚರಣೆಗೆ ಅಲ್ಪಪ್ರಮಾಣದಲ್ಲಿ ತೊಂದರೆ ಮಾಡಬಹುದು ಎಂದು ಹೇಳಿದೆ. ಅದೂ ಈ ದೈತ್ಯ ಸ್ವಾರಜ್ವಾಲೆಗಳು ಹೊರಹೊಮ್ಮುವುದು 2012ರಲ್ಲಿ ಅಲ್ಲ. ಬದಲಿಗೆ 2013ರ ಕೊನೆ ಅಥವಾ 2014ನೇ ವರ್ಷದ ಆರಂಭದಲ್ಲಿ. ಪ್ರತಿ 11 ವರ್ಷಗಳಿಗೊಮ್ಮೆ ಸೌರಜ್ವಾಲೆಗಳು ದೈತ್ಯ ಗಾತ್ರ ಪಡೆಯುವುದು ಸಹಜ ಸಂಗತಿ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಓದುಗರಿಗೆಲ್ಲ ಕ್ರಿಸ್ತ ಶಕ 2012 ರ ಶುಭಾಶಯಗಳು ಹೊಸ ವರ್ಷ ನಮ್ಮೆಲ್ಲರಿಗೂ ಸಂತಸ, ಸುಖ, ಶಾಂತಿ ನೆಮ್ಮದಿ ತರಲಿ , ಆರೋಗ್ಯದಾಯಕ ಜೀವನ ಎಲ್ಲರ ಮುಂದಿರಲಿ ಲೋಕದಲ್ಲಿ ನಗು ನಲಿಯಲಿ ವಿಶ್ವದಲ್ಲಿ ಹರುಷ ಹರಿಯಲಿ
Subscribe to:
Posts (Atom)









